ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಬಿಎಸ್ಸಿ(ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಸ್ಟೂಡೆಂಟ್ ರೆಡಿ ಕಾರ್ಯಕ್ರಮದಡಿಯಲ್ಲಿ ಒಟ್ಟು 9 ಕೃಷಿ ಸಂಬಂಧಿತ ವ್ಯವಹಾರ ಕೇಂದ್ರಗಳಿಗೆ ನಿಯೋಜನೆಗೊಂಡಿದ್ದು ಆರು (6) ವಿದ್ಯಾರ್ಥಿಗಳು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ದ ನಿವಾಸಿಗಳಾದ ರೋಹನ್ ಎಂಬ ರೈತರೊಂದಿಗೆ ತರಬೇತಿಯನ್ನು ಪಡೆಯುತ್ತಿದ್ದಾರೆ.

ಇದು 15 ದಿನಗಳ ತರಬೇತಿ ಕಾರ್ಯಕ್ರಮವಾಗಿದೆ. ಕಾಂಟ್ರಾಕ್ಟ್ ಫಾರ್ಮಿಂಗ್ ಅನ್ನು ನಡೆಸುತ್ತಿರುವ ಇವರು ಮಂಜುನಾಥಪುರ ಗ್ರಾಮದಲ್ಲಿರುವ ಭವ್ಯಶ್ರೀ ಫಾರ್ಮ್ ನಲ್ಲಿ ಏಳು(7) ಎಕರೆ ಜಮೀನಿನಲ್ಲಿ ವರ್ಷವಿಡಿ ದಪ್ಪ ಮೆಣಸಿನಕಾಯಿ(capsicum) ಬೆಳೆಯುವ ಮೂಲಕ ಯಶಸ್ಸನ್ನು ಕಂಡಿದ್ದಾರೆ.

ಇದರ ಜೊತೆ ಜೊತೆಗೆ ಅವರು ಬೇರೆ ಫಾರ್ಮಗಳಲ್ಲಿ ಶುಂಠಿ ಟೊಮೆಟೊ ಮುಂತಾದ ಬೆಳೆಗಳನ್ನು ಬೆಳೆಯುತ್ತಾ ಇದರ ರೈತರಿಗೆ ಮಾದರಿಯಾಗಿದ್ದಾರೆ. ಇದರ ಜೊತೆಗೆ ಮೀನು ಸಾಕಾಣಿಕೆಯನ್ನು ಇವರು ಅನುಸರಿಸುತ್ತಿದ್ದಾರೆ.

ಸುಮಾರು 45 ಜನರಿಗೆ ಉದ್ಯೋಗವನ್ನು ಕಲ್ಪಿಸಿರುವ ರೋಹನ್ ರವರು ಕೃಷಿಯನ್ನು ಒಂದು ವಾಣಿಜ್ಯೋದ್ಯಮವಾಗಿ ರೂಪಿಸಿಕೊಂಡಿದ್ದಾರೆ.

ಕೃಷಿಯಲ್ಲಿ ಯಶಸ್ಸನ್ನು ಕಾಣಲು ಪರಿಶ್ರಮದ ಜೊತೆಗೆ ವೈಜ್ಞಾನಿಕ ಜ್ಞಾನ ಬಹಳ ಮುಖ್ಯ ಎಂಬುದು ಇವರ ಅಭಿಪ್ರಾಯವಾಗಿದೆ. ಮೇಲ್ಕಂಡ ಬೆಳೆಗಳಿಗೆ ಸಂಬಂಧಿಸಿದಂತೆ ಇವರು ವಿದ್ಯಾರ್ಥಿಗಳಿಗೆ ಆ ಬೆಳೆಗಳ ಬಿತ್ತನೆಯ ವಿಧಾನ, ನಿರ್ವಹಣೆ, ಮಾರುಕಟ್ಟೆ ಮುಂತಾದವುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ, ತರಬೇತಿಯನ್ನು ಕೊಡುತ್ತಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *