
ಆಲೂರು : ಮಲ್ಲಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು ಹೇಮ ಲೋಕೇಶ್ ಪಿ ಡಿ ಓ ಪರಮೇಶ್ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ಮಲ್ಲಾಪುರ ಗ್ರಾಮ ಪಂಚಾಯತಿ ವೃತ್ತದಿಂದ ಕೆ. ಹೊಸಕೋಟೆಯ ಮುಖ್ಯ ರಸ್ತೆಯಲ್ಲಿ ಶಾಲಾ ಮಕ್ಕಳು, ಶಿಕ್ಷಕರುಗಳು, ದಲಿತ ಮುಖಂಡರುಗಳು ಶ್ರೀ ಶಕ್ತಿ ಸಂಘದವರು ಮೆರವಣಿಗೆ ನಡೆಸಿ ವಿಜೃಂಬಣೆಯಿಂದ“ಸಂವಿಧಾನ ಜಾಗೃತಿ ಜಾಥಾ”ದಲ್ಲಿ ಭಾಗವಹಿಸುವ ಮೂಲಕ ಸಂವಿಧಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮವನ್ನ ಮಲ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೇಮಾ ಲೋಕೇಶ್ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.
ಮುಖ್ಯ ಭಾಷಣಕಾರರಾಗಿ ನವಿಲಹಳ್ಳಿ ವಾಸುದೇವ್ ಮಾತನಾಡಿ ಎಲ್ಲರಿಗೂ ಸಂವಿಧಾನದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯನ್ಯಾಯ,ದೊರಗಿಸುವ ನಿಟ್ಟಿನಲ್ಲಿ ಸಂವಿಧಾನ ರಚನೆಯಾಗಿದೆ ಇದನ್ನ ತಿಳಿದು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ನಂತರತಾಲೂಕು ಡಿಎಸ್ಎಸ್ ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡಿ ಭಾರತವನ್ನು ಸಾರ್ವಭೌಮ ಸಮಾಜವಾದಿ ಸಮಭಾವದ ಪ್ರಜಾಸತಾತ್ಮಕವಾಗಿ ರಚಿಸಲಾಗಿದೆ ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಶ್ರದ್ದಾಪೂರ್ವಕವಾಗಿ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಕಾಡ್ಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು,ಕೆ ಹೊಸಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಹರಿಹಳ್ಳಿ ಪ್ರೌಢಶಾಲೆಯ ಮಕ್ಕಳು,ಎಸ್ ಕೆ ಎನ್ ಆರ್ ಎಚ್ ಎಸ್ ಪ್ರೌಢಶಾಲೆ ಮಕ್ಕಳು, ಅಂಗನವಾಡಿಯ ಪುಟಾಣಿ ಮಕ್ಕಳು, ಅಂಬೇಡ್ಕರ್ ಅವರ ಗೀತೆಗಳು ನೃತ್ಯ ಮಾಡುವ ಮೂಲಕ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಲಿಂಗರಾಜು, ಎ ಡಬಲ್ ಇ ರವಿಕುಮಾರ್, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹೇಮಾ ಲೋಕೇಶ್, ಪಿಡಿಒ ಪರಮೇಶ್, ಮಾಜಿ ಅಧ್ಯಕ್ಷರು ಮಮತಾ ಅಣ್ಣೇಗೌಡ,ಬಿ ಆರ್ ಸಿ ಮಂಜುಳಾ, ಸಿಆರ್‌ಪಿ ಮೈಮುನ, ಬಿ ಆರ್ ಪಿ ಪ್ರಮೀಳಾ, ಅಣ್ಣಪ್ಪ ಹೇರಳಲೆ, ರಾಮಯ್ಯ ,ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಸಹ ಶಿಕ್ಷಕರುಗಳು , ಮಲ್ಲಾಪುರ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು,ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದವರುಶಾಲಾ ಮಕ್ಕಳು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.





