ಹಾಸನ:ಸ್ವ-ಸಹಾಯದ ಗುಂಪುಗಳ ಮೂಲಕ ಎಲ್ಲಾ ಮಹಿಳೆಯರು ಲಕ್ಷಾಧಿಪತಿಗಳಾಗಲಿ ಎಂಬುದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಗುರಿಯಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜೂಳಾ ತಿಳಿಸಿದರು.

ನಗರದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಶಕ್ತಿ ವಂದನಾ ಅಭಿಯಾನದಲ್ಲಿ ಮುಖ್ಯ ಅತಿಥಿಯಾಘಿ ಭಾಗವಹಿಸಿ ಮಾತನಾಡಿದ ಅವರು, ವಿವಿಧ ಪದಾರ್ಥಗಳನ್ನು ಉತ್ಪಧಾನೆ ಮಾಡಿ ನಂತರ ಮಾರಾಟ ಮಾಡಿ ತಮ್ಮ ಸಂಪಾದನೆ ಹಣವನ್ನು ಇಟ್ಟುಕೊಂಡು ಅಂತಹ ಮಹಿಳೆಯರನ್ನು ನಾವು ಗುಂಪುಗಳ ಸಂಪರ್ಕ ಮಾಡಲು ಮೋದಿಜಿ ಅವರು ನಮ್ಮ ಜೊತೆ ಸಂವಾದ ಮಾಡಬೇಕು ಎಂದು ಹೇಳಿದ್ದಾರೆ.

ನಗರಗಳಲ್ಲಿ ಒಕ್ಕೂಟ ಮಾಡಬೇಕಾಗಿದೆ ಎಂದರು. ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ಎತ್ತಿ ಹಿಡಿದ ಪ್ರಧಾನಿ ಮೋದಿ, “ನಮ್ಮ ಸರ್ಕಾರವು ನಮ್ಮ ಸಹೋದರಿಯರ ಜೀವನವನ್ನು ಹೆಚ್ಚಿಸಲು ನಿರಂತರವಾಗಿ ಯೋಜನೆಗಳನ್ನು ಪರಿಚಯಿಸಿದೆ ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ, ಅವರಿಗೆ ಗೌರವ, ಅನುಕೂಲತೆ, ಭದ್ರತೆ ಮತ್ತು ಸಮೃದ್ಧಿಯನ್ನು ನೀಡುತ್ತದೆ.

ಗರ್ಭಿಣಿಯರು ಪೌಷ್ಟಿಕಾಂಶವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಿ. ಆಹಾರ, ನಾವು ಮಾತೃ ವಂದನಾ ಯೋಜನೆಯನ್ನು ಪ್ರಾರಂಭಿಸಿದ್ದೇವೆ, ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕೋಶಾಧ್ಯಕ್ಷೆ ಸುರಭಿ ರಘು ಮಾತನಾಡಿ, ಮಹಿಳೆಯರು ಸಬಲೀಯಾದರೇ ಪರಿಪೂರ್ಣ ಸಬಲೀಯಾಗುವುದೆಂದು ಗೊತ್ತಿದೆ. ದೇಶದ ಪ್ರಧಾನಿ ಮೋದಿಜಿ ಅವರ ಕನಸ್ಸು ಏನೆಂದರೇ ಸ್ವಸಹಾಯ ಗುಂಪುಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಇದ್ದು, ಪ್ರತಿ ಮಹಿಳೆಯು ಸ್ವಸಹಾಯ ಗುಂಪುಗಳನ್ನು ನಡೆಸಿಕೊಂಡು ಹೋಗುವ ಜೊತೆಗೆ ಆರ್ಥಿಕವಾಗಿ ಮುಂದೆ ಬರಬೇಕು ಎನ್ನುವುದು ಉದ್ದೇಶವಾಗಿದೆ ಎಂದರು.

ಈಗಾಗಲೇ ಅನೇಕರು ಇದರಿಂದ ಲಾಭ ಪಡೆದಿದ್ದು, ಇದರ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು ಹಾಗೂ ಪ್ರತಿ ಮಹಿಳೆಯು ಲಕ್ಷಾದಿಪತಿಯಾಗಬೇಕು ಎನ್ನುವುದು ಗುರಿಯಾಗಿದೆ. ಭಾರತದ ಪ್ರಗತಿ ಏನಿದೆ ಪ್ರತಿವರ್ಷ ಆಗುವುದು. ಸ್ವಸಹಾಯ ಗುಂಪುಗಳಿಂದಲೇ ಮಹಿಳೆಯರು ಮಾಡು ಯೋಜನೆಗಳು ತಲುಪಿಸುವುದರಿಂದಲೇ ಭಾರತದ ಆರ್ಥಿಕತೆಗೆ ಸಹಕಾರಿಯಾಗಿದೆ.

ಭಾರತಕ್ಕೆ ಕೊಡುಗೆಯನ್ನು ಸ್ವಸಹಾಯದಿಂದಲೇ ಆಗುತ್ತಿದೆ ಎಂದು ಕಿವಿಮಾತು ಹೇಳಿದರು.

ಇನ್ನಷ್ಟು ಯೋಜನೆಗಳನ್ನು ಕೊಡುವ ಉದ್ದೇಶವನ್ನು ಹೊಂದಲಾಗಿದೆ. ಈಗ ಭಾರತದ ಆರ್ಥಿಕತೆ ಪ್ರಪಂಚದ ೫ನೇ ಸ್ಥಾನದಲ್ಲಿದ್ದು, ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾದರೇ ಪ್ರಪಂಚದಲ್ಲೆ ೩ನೇ ಅತ್ಯುನ್ನತ ಭಾರತ ಬಲಿಷ್ಟವಾಗಲಿದೆ ಎಂದು ಸಲಹೆ ನೀಡಿದರು.

ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದರ ಗುರಿಯನ್ನು ಇಟ್ಟುಕೊಂಡಿದ್ದಾರೆ. ಪ್ರಸ್ತೂತ ಭಾರತದಲ್ಲಿ ಪುರುಷ ಮಹಿಳೆಯರಿಗಿಂದ ಹೆಚ್ಚಿನ ರೀತಿ ಮಹಿಳಾ ಮತದಾರರು ಇರುವುದರಿಂದ ಅವರನ್ನು ಮೊದಲು ಬಲಿಷ್ಠಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಪ್ರಕಾಶ್, ರಾಜ್ಯ ಉಪಾಧ್ಯಕ್ಷೆ ಸುನೀತ ಜಗದೀಶ್, ಶಕ್ತಿ ವಂದನಾ ಅಭಿಯಾನದ ಪ್ರಭಾರಿ ಅಮಿತ್ ಶೆಟ್ಟಿ, ಎಬಿವಿಪಿ ವಕ್ತಾರೆ ಅಶ್ವಿನಿ ಶಂಕರ್, ರಾಷ್ಟ್ರೀಯ ವಕ್ತಾರೆ ಸಂಜಿತಾ, ಪ್ರಕಾಶ್, ವೀಣಾ ಲೋಕೇಶ್ ಇತರರು ಉಪಸ್ಥಿತರಿದ್ದರು. ಮಂಜೂಳಾ ಮಂಜುನಾಥ್ ಪ್ರಾರ್ಥಿಸಿದರು. ದಿವ್ಯ ಉದಯಕುಮಾರ್ ಸ್ವಾಗತಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *