
ಬೇಲೂರುಪರಿಸರ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ವಲಯ ಅರಣ್ಯ ಅಧಿಕಾರಿ ವಿನಯ್ ಕುಮಾರ್ ಹೇಳಿದರು.
ತಾಲೂಕು ಅರಣ್ಯ ಇಲಾಖೆಯ ಹಾಗೂ ಅರೇಹಳ್ಳಿ ವಿಭಾಗದ ವತಿಯಿಂದ ಒಂದು ದಿನದ ಚಿಣ್ಣರ ವನದರ್ಶನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಯುವಜನಾಂಗಕ್ಕೆ ಅದರಲ್ಲೂ ಬಹುಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಪ್ರಕೃತಿಯ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಮ್ಮ ಅರಣ್ಯ ಇಲಾಖೆ ವತಿಯಿಂದ ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ನಾಗರಹೊಳೆ ಪ್ರವಾಸ ಅದ್ಯಾಯನಕ್ಕಾಗಿ ಪ್ರವಾಸವನ್ನು ಆಯೋಜಿಸಿದ್ದು ಇದರ ಉದ್ದೇಶ ಒಟ್ಟು ಅರೇಹಳ್ಳಿ ವಿಭಾಗದ ೪ ಸರ್ಕಾರಿ ಶಾಲೆಗಳನ್ನು ಗುರ್ತುಮಾಡಿ ಚಿಣ್ಣರ ವನ ಎಂಬ ಪ್ರವಾಸದಲ್ಲಿ ವನ್ಯಜೀವಿಗಳು ಹಾಗೂ ಪ್ರಕೃತಿ ಬಗ್ಗೆ ಮಾಹಿತಿ ನೀಡುವ ಜೊತೆಗೆ ಅವರಲ್ಲಿ ಇರುವ ಕಾಡುಪ್ರಾಣಿಗಳಿಂದ ಉಂಟಾಗುವ ಭಯ ಹಾಗೂ ಕಾಡುಗಳನ್ನು ರಕ್ಚಿಸುವ ಉದ್ದೇಶದಿಂದ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.
ತಗರೆ ಕುಮಾರ ಪ್ರೌಡಶಾಲೆಯ ಪ್ರಾಂಶುಪಾಲ ಗಣೇಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಕಾಡುಪ್ರಾಣಿಗಳು ಮತ್ತು ಪರಿಸರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅರಣ್ಯ ಇಲಾಖೆ ವತಿಯಿಂದ ನೀಡುತ್ತಿರುವುದರಿಂದ ಅವರಿಗೆ ವಿಶೇಷ ಜ್ಞಾನ ನೀಡುತ್ತಿದೆ.ಅಲ್ಲದೆ ಅವರಲ್ಲಿ ಹೆಚ್ಚಿನ ಆತ್ಮಸ್ಥೆರ್ಯ ಉಂಟಾಗುತ್ತದೆ ಎಂದರು.
ಈ ಸಂದರ್ಭದಲ್ಲಿಉಪ ವಲಯ ಅರಣ್ಯಾಧಿಕಾರಿ ಅರ್ಜುನ್,ಸುಭಾಷ್ ಕುಮಾರ್,ಕುಮಾರಸ್ವಾಮಿ,ವೇದರಾಜ್,ಹಾಗೂ ಸಿಬ್ಬಂದಿಗಳು ಹಾಜರಿದ್ದರು.



