ಸಕಲೇಶಪುರ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕರ್ನಾಟಕ ಸರ್ಕಾರದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾತ ಕಾರ್ಯಕ್ರಮದಲ್ಲಿ, ಮಲೆನಾಡು ಸಾಮಾಜಿಕ ಸೇವಾ ಸಂಸ್ಥೆ ಅಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎ ಎಸ್ ಎಸ್ ಕೆ ಹಾಸನ ಜಿಲ್ಲೆ ಘಟಕದ ವತಿಯಿಂದ 75ನೇ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ,

ಪಟ್ಟಣದ ಮುಖ್ಯ ಗ್ರಂಥಾಲಯ ಸೇರಿ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಸಂವಿಧಾನ ಕನ್ನಡ ಅನುವಾದಿತ ಕರಡು ಪ್ರತಿಯನ್ನು ವಿತರಿಸುತ್ತಾ ಬಂದಿದ್ದು. ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು,ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಹಾಗೂ ಗ್ರಂಥಪಾಲಕರ ಸಮ್ಮುಖದಲ್ಲಿ ಅಸ್ತಂತರಿಸಲಾಯಿತು.

ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಯೊಬ್ಬ ನಾಗರಿಕನು ಸಂವಿಧಾನ ಓದುವ ಸಲುವಾಗಿ ಹಾಗೂ ತನ್ನ ಮೂಲಭೂತ ಹಕ್ಕುಗಳ ಬಗ್ಗೆ ತಿಳಿದುಕೊಂಡು ಜಾಗೃತಿ, ಶಿಕ್ಷಣದ ಮಹತ್ವ ಮತದಾನದ ಅರಿವು, ಈ ದೇಶದ ರಾಜಕೀಯ, ಆರ್ಥಿಕ ವ್ಯವಸ್ಥೆ ಬಗ್ಗೆ ಎಲ್ಲಾ ನಾಗರಿಕರಲ್ಲಿ ಅರಿವು ಮೂಡಲಿ ಎಂಬ ಉದ್ದೇಶದಿಂದ ಈ ಒಂದು ಸಂವಿಧಾನ ಕನ್ನಡ ಅನುವಾದಿತ ಕರಡು ಪ್ರತಿಯನ್ನು ಎಲ್ಲ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ವಿತರಿಸಲಾಗುತ್ತಿದ್ದು, ಇದರ ಸದುಪಯೋಗ ಪ್ರತಿಯೊಬ್ಬ ನಾಗರಿಕನು ಪಡೆದುಕೊಳ್ಳಬೇಕು ಸಂವಿಧಾನವನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ್ದಾರೆ.

ಕನ್ನಡ ಅನುವಾದವನ್ನು ಡಾ. ಸಿ. ಎಸ್. ದ್ವಾರಕನಾಥ್ ರವರು ಅನುವಾದ ಮಾಡಿದ್ದಾರೆ ಎಂದು ಮಲೆನಾಡು ಸಾಮಾಜಿಕ ಸೇವಾ ಸಂಸ್ಥೆ ಅಂಡ್ ಚಾರಿ ಟೇಬಲ್ ಟ್ರಸ್ಟ್ ಹಾಗೂ ಎ ಎಸ್ ಎಸ್ ಕೆ ಜಿಲ್ಲಾ ಘಟಕದ ಮುಖ್ಯಸ್ಥರು ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಆನಂದಮೂರ್ತಿ, ಕಸಬಾ ಕಂದಾಯ ಇಲಾಖೆ ರಾಜಶ್ವನಿರೀಕ್ಷಕರಾದ ಸುರೇಶ್, ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿ ಡಿ ಒ, ಅಧ್ಯಕ್ಷರು ಗ್ರಂಥಾಲಯದ ಪಾಲಕರು,ಸಂಸ್ಥೆಯ ಮುಖ್ಯಸ್ಥರು ಗಳಾದ ಸುಧಾಕರ್ ಎಂ ಎಲ್. ಮಳಲಿ , ದಿವಾಕರ್ ಎನ್ ಈ ದೊಡ್ಡ ನಗರ, ವಿಜಿ ಕುಮಾರ್ ದೇಖ್ಲ, ದೇವರಾಜ್ ದಿಣ್ಣೆಕೆರೆ, ರಮೇಶ್, ನಾಗರಾಜ್ ಹಳ್ಳಿ ಬೈಲು, ಡಾll ರಾಜಶೇಖರ್ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *