ಸಕಲೇಶಪುರ : ಪಟ್ಟಣದ ಸುಭಾಷ್ ಮೈದಾನದ ಸರ್ಕಲ್ ಬಳಿ ಇರುವ ಬೃಹತ್ ಗಾತ್ರದ ಮರದ ರಂಬೆಗಳು ಒಣಗಿ ಹೋಗಿದ್ದು ಯಾವ ಕ್ಷಣದಲ್ಲಾದರೂ ಬೃಹತ್ ಗಾತ್ರದ ಮರದ ಕೆಳಭಾಗದಲ್ಲಿರುವ ಕ್ಯಾಂಟೀನ್,ಗೆ ಟೀ ಕುಡಿಯಲು ಬರುವ ವರ್ಕ್ ಶಾಪ್ ಗೆ ಹಾಗೂ ವಾಹನಗಳಿಗೆ ಪಂಚರ್ ಹಾಕಿಸಿಕೊಳ್ಳಲು ಬರುವ ಸಾರ್ವಜನಿಕರ ತಲೆಯ ಮೇಲೆ ಬಿದ್ದು ಅನಾಹುತ ಸಂಭವಿಸುವ ಮೊದಲು ಸಂಬಂದಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಒಣಗಿದ ರಂಬೆಗಳನ್ನು ತೆರವು ಮಾಡಬೇಕು ಎಂಬುದು ಸಾರ್ವಜನಿಕರ‍ ಆಗ್ರಹವಾಗಿದೆ.

( ಕಳೆದ ಒಂದು ವರ್ಷಗಳ ಹಿಂದೆ ಪಟ್ಟಣದ ಶ್ರೀ ಗಂಧ ಹೋಟೆಲ್ ಗೆ ಧರ್ಮಸ್ಥಳದಿಂದ ಬರುವ ವೇಳೆ ಕಾಫಿ ಕುಡಿಯಲೆಂದು ತಮ್ಮ ವಾಹನವನ್ನು ಹೋಟೆಲ್ ಮುಂಭಾಗ ನಿಲ್ಲಿಸಿ ಹೋಟೆಲ್ಗೆ ತೆರಳುವ ವೇಳೆ ಹೋಟೆಲ್ ಮುಂಭಾಗದಲ್ಲಿ ಇದ್ದ ಮರದ ಒಣಗಿದ ರಂಬೆಯೊಂದು ನಿವೃತ್ತ ಯೋದರ ತಲೆಯ ಮೇಲೆ ಬಿದ್ದ ಪರಿಣಾಮ ಆತ ಮೃತಪಟ್ಟ ಘಟನೆಯನ್ನು ಮರೆಯುವಂತಿಲ್ಲ

ಹಾಗಾಗಿ ಅದೇ ರೀತಿ ಇಲ್ಲಿಯೂ ಕೂಡ ಸಂಭವಿಸುವ ಮುನ್ನ ಒಣಗಿದ ರಂಬೆಗಳನ್ನು ಪುರಸಭೆಯರಾಗಲಿ ಅಥವಾ ಅರಣ್ಯ ಇಲಾಖೆಯವರಾಗಲಿ ತೆರವು ಮಾಡಬೇಕು ಎಂಬುದು ಇಲ್ಲಿನ ವರ್ತಕರ ಆಗ್ರಹವಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *