ಸಕಲೇಶಪುರ : ಈಶ್ವರಹಳ್ಳಿಯಿಂದ ಮೆಣಸಮಕ್ಕಿ ಮೂಲಕ ಬಾಳ್ಳುಪೇಟೆ ಹೆದ್ದಾರಿ ಸಂಪರ್ಕಿಸುವ ರಸ್ತೆ ಕೆಲ ವರ್ಷಗಳ ಹಿಂದೆ ಪ್ರಕೃತಿ ವಿಕೋಪದಿಂದ ಕುಸಿದಿದ್ದ ಸೇತುವೆಯನ್ನು ನಿರ್ಮಿಸಲಾಗಿದ್ದು ಶನಿವಾರ ಶಾಸಕ ಸಿಮೆಂಟ್ ಮಂಜುನಾಥ್ ಉದ್ಘಾಟಿಸಿ, ಸಂಚಾರಕ್ಕೆ ಮುಕ್ತಗೊಳಿಸಿದರು.

ತಾಲೂಕಿನ ಬೆಳಗೋಡು ಹೋಬಳಿ ಈಶ್ವರಹಳ್ಳಿ ಗ್ರಾಮದ ಬಳಿ ಶಾಲಾ ಸಂಪರ್ಕ ಸೇತುವೆ ಅನುದಾನದ ಅಡಿಯಲ್ಲಿ ಸುಮಾರು ₹ 22 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

ಸೇತುವೆ ಉದ್ಘಾಟಿಸಿ ಮಾತನಾಡಿದ ಶಾಸಕರು,ಈಶ್ವರಹಳ್ಳಿಯಿಂದ ಬಾಳ್ಳುಪೇಟೆಗೆ ಬರಲು ಇಲ್ಲಿನ ಜನರು ಅನವಶ್ಯಕವಾಗಿ 6 ಕಿ. ಮೀ ಸುತ್ತಾಡಿ ತಲುಪಬೇಕಾದ ಅನಿವಾರ್ಯಯತೆ ಇತ್ತು ಇದೀಗ ಈ ಸೇತುವೆ ನಿರ್ಮಾಣದಿಂದ 4 ಕಿ. ಮೀ ಉಳಿಯವಾಗಲಿದೆ. ಇದರಿಂದ ರೈತರು, ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ತಡೆ ಹೊಡ್ದಿದ್ದನ್ನು ನನ್ನ ಗಮನಕ್ಕೆ ತಂದ ನಂತರ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನೆಡೆಸಿ ಸಮಸ್ಯೆ ಬಗೆಹರಿಸಿದ್ದೇನೆ ಎಂದರು.ರೈತರು ಹೊಲ ಗದ್ದೆಗೆ ತೆರಳಲು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈ ಸೇತುವೆ ಉಪಯೋಗವಾಗಲಿದೆ ಎಂದು ತಿಳಿಸಿದರು.

ಇದೆ ವೇಳೆ ಮೆಣಸಮಕ್ಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಕಾಂಕ್ರೀಟ್ ರಸ್ತೆಯನ್ನು ಶಾಸಕರು ಉದ್ಘಾಟನೆ ನೆರವೇರಿಸಿದರು.

ಈ ಸಂಧರ್ಭದಲ್ಲಿ, ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಮುರಗೇಶ್ ಬೆಳಗೋಡು ಗ್ರಾಪಂ ಸದಸ್ಯ ರುದ್ರ ಕುಮಾರ್,ಬಿಜೆಪಿ ಮುಖಂಡರಾದ ಜೈ ಪ್ರಕಾಶ್ ದೊಡ್ಡದಿಣ್ಣೆ , ಶಿವಕುಮಾರ್ ಮೆಣಸಮಕ್ಕಿ,,ವೆಂಕಟೇಶ್ ಪುಟ್ಟಯ್ಯ ಇನೂರು, ಡೈರಿ ಪ್ರಕಾಶ್, ಮಾಸ್ ತೇಜಸ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *