ಸಕಲೇಶಪುರ : ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 241ರ ಸರ್ಕಾರಿ ಜಮೀನಿನಲ್ಲಿ ಆದಿ ದ್ರಾವಿಡ ತುಳು ಸಮುದಾಯದವರು ಗುಡಿಸಲು ನಿರ್ಮಿಸಿಕೊಂಡು ಮೂರು ವರ್ಷಗಳಿಂದ 22 ಕುಟುಂಬಗಳು ವಾಸವಾಗಿದ್ದು, ಗ್ರಾಮ ಪಂಚಾಯತಿ ವತಿಯಿಂದ ಈ ಒಂದು ಜಾಗಕ್ಕೆ ಸರ್ವೆ ನಡೆಸಿ ನಿವೇಶನ ಹಕ್ಕು ಪತ್ರ ನಡಿರುವುದಿಲ್ಲ.

ಕುಡಿಯುವ ನೀರು, ವಿದ್ಯುತ್, ಕಲ್ಪಿಸಿಕೊಡುವುದಾಗಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು, ಮೂಲಭೂತ ಸೌಕರ್ಯ ಕಲ್ಪಿಸಿಕೊಡದೆ ಗ್ರಾಮ ಪಂಚಾಯಿತಿ ಪಿಡಿಒ ಗಿರೀಶ್ ನಿರ್ಲಕ್ಷ್ಯ ಮಾಡಿರುತ್ತಾರೆ. ಎಂದು ಆದಿ ದ್ರಾವಿಡ ತುಳು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಿ ಶಂಕರ್ ಅಗ್ರಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆ ಬಗೆಹರಿಸುವವರೆಗೂ ಹೋರಾಟ ಮಾಡುವುದಾಗಿ ತಿಳಿಸಿದರು

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಲಕ್ಷ್ಮಣ್ ಕೀರ್ತಿ, ಧರಣಿ ಹೆನ್ನಲಿ, ಮಂಜು ಹೆಸರು ಹೆಸರು ಯಸಳೂರು ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *