
ಹಾಸನ : ಕಾನೂನಿಗೆ ವಿರುದ್ಧವಾಗಿ ಗುಟ್ಕಾ, ಬೀಡಿ, ಸಿಗರೇಟ್ ಮಾರಾಟ ಮಾಡುವ ಹೋಟೆಲ್ ಇತರೆ ಅಂಗಡಿ ಮಳಿಗೆಗಳ ಮೇಲೆ ಪೊಲೀಸರು ದಿಡೀರ್ ದಾಳಿ ನಡೆಸಿ ಪರಿಶೀಲಿಸಿದಲ್ಲದೇ ಅಂತವರ ಮೇಲೆ ದಂಢ ಕೂಟ ಹಾಕಿ ಬಿಸಿ ಮುಟ್ಟಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ನಗರದ ಹೊಸಲೈನ್ ರಸ್ತೆ, ಉತ್ತರ ಬಡಾವಣೆ, ಸಾಲಗಾಮೆ ರಸ್ತೆ, ಆರ್.ಸಿ. ರಸ್ತೆ, ಬಸಟ್ಟಿಕೊಪ್ಪಲು ಸೇರಿದಂತೆ ನಗರದ ಇತರೆ ಭಾಗಗಳಲ್ಲಿರುವ ಹೋಟೇಲ್, ಇತರೆ ಶಾಪ್ ಗಳನ್ನು ಪರಿಶೀಲಿಸಿ ವ್ಯಾಪಾರ ಮಾಡುತ್ತಿದ್ದವರ ಮೇಲೆ ಕ್ರಮಕೈಗೊಂಡು ಗುಟ್ಕಾ, ಪಾನ್ ಪರಾಗ್, ಬೀಡಿ ಸಿಗರೇಟ್ ವಶಪಡಿಸಿಕೊಂಡಿದ್ದಾರೆ.
ಯಾವುದೇ ಪರವಾನಿಗೆ ಇಲ್ಲದೇ ಮಾದಕ ವಸ್ತುಗಳನ್ನು ವ್ಯಾಪಾರ ಮಾಡಬಾರದು ಎಂದು ಕಾನೂನು ಇದ್ದರೂ ಉಲ್ಲಂಘಿಸಿದವರ ಮೇಲೆ ಪೊಲೀಸ್ ಇಲಾಖೆ ದಾಳಿ ನಡೆಸುವುದರ ಮೂಲಕ ಚುರಕು ಮುಟ್ಟಿಸಿದೆ. ಇದನು ನೋಡಿದ ಇತರೆ ಅಂಗಡಿ ಮಾಲೀಕರು ಎಚ್ಚರಗೊಂಡು ತಮ್ಮ ಅಂಗಡಿಯಲ್ಲಿದ್ದ ವಸ್ತುಗಳನ್ನು ಮರೆ ಮಾಚಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.



