
ಹಾಸನ: ನಗರದ ಸ್ಲೇಟರ‍್ಸ್ ಹಾಲ್ ವೃತ್ತದ ಬಳಿ ಇರುವ ಶ್ರೀ ಗಂಧದ ಕೋಟೆ ಆವರಣದಲ್ಲಿ ರಥಸಪ್ತಮಿ ವಿಶೇಷ ದಿನದ ಅಂಗವಾಗಿ ಪತಂಜಲಿ ಯೋಗಾ ಪರಿವಾರದಿಂದ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ೧೦೮ ಸೂರ್ಯ ನಮುಸ್ಕಾರದಲ್ಲಿ ನೂರಾರು ಜನರು ಪಾಲ್ಗೊಂಡು ಯಶಸ್ವಿಗೊಳಿಸಿದರು.
ಇದೆ ವೇಳೆ ಪತಂಜಲಿ ಯೋಗ ಸಮಿತಿ ಪರಿವಾರದ ಪ್ರಭಾರಿಗಳಾದ ಎಂ.ವಿ. ಗಿರೀಶ್, ಶೇಷಪ್ಪ, ಜಿಲ್ಲಾ ಸಂರಕ್ಷಕರಾದ ಲೋಕನಾಥ್ ಅವರು ಮಾತನಾಡುತ್ತಾ, ಪ್ರತಿನಿತ್ಯ ಬೆಳಿಗ್ಗೆ ಕೆಲ ಸಮಯ ಯೋಗದೊಂದಿಗೆ ನಮ್ಮ ಕಾರ್ಯಚಟುವಟಿಕೆ ಪ್ರಾರಂಭಿಸಿದರೇ ದಿನವೆಲ್ಲಾ ಲವಲವಿಕೆಯಿಂದ ಇರಬಹುದು.
ಏಳು ಲೋಕದ ಸಂಚಾರಕ್ಕಾಗಿ ಸೂರ್ಯ ಹೊರಿಟಿದ್ದ ದಿನದ ಅಂಗವಾಗಿ ರಥಸಪ್ತಮಿಯನ್ನು ಆಚರಿಸಲಾಗುತ್ತಿದೆ. ಸೂರ್ಯ ನಮುಸ್ಕಾರ ಮತ್ತು ಸೂರ್ಯನ ಆರಾಧನೆ ನಮ್ಮ ಪ್ರಕೃತಿಯ ಮೂಲವಾಗಿದ್ದು, ಎಲ್ಲರಿಗೂ ಸೂರ್ಯ ಆದಿ ದೇವ. ಜಗತ್ತಿನ ಚೈತನ್ಯಕ್ಕೆ ಸೂರ್ಯನೆ ಕಾರಣನಾಗಿರುತ್ತಾನೆ ಎಂದರು.
ಮನುಷ್ಯನಲ್ಲಿ ಡಿ ವಿಟಾಮಿನ್ ಕಡಿಮೆಯಾದರೇ ಸೂರ್ಯನ ಬೆಳಕಿಗೆ ಬನ್ನಿ ಎಂದು ಹೇಳುವಂತದ್ದು ವೈಜ್ಞಾನಿಕವಾಗಿ ಖಚಿತಪಡಿಸಲಾಗಿದೆ ಎಂದರು. ಸೂರ್ಯನ ಆರಾಧನೆ ಒಂದು ಪವಿತ್ರವಾದ ಕೆಲಸ. ಸೂರ್ಯನ ನಮುಸ್ಕಾರ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಉತ್ತರವನ್ನು ಮತ್ತು ಚಿಕಿತ್ಸೆಯನ್ನು ಕೊಡುತ್ತದೆ ಎಂದು ಸಲಹೆ ನೀಡಿದರು.
ರಥಸಪ್ತಮಿ ಶನಿವಾರ ವಿಶೇಷ ದಿವಸ ಭಗವಾನ್ ಸೂರ್ಯದೇವನು ಉತ್ತಾರಯಣಕ್ಕೆ ಪ್ರವೇಶವನ್ನು ಮಾಡುವುದರಿಂದ ಬೆಳಕು ಹೆಚ್ಚಾಗುತ್ತಾ ಹೋಗುತ್ತದೆ. ಸೂರ್ಯ ನಮುಸ್ಕಾರದಂತಹ ಯೋಗ ಮಾಡುವುದರಿಂದ ಜ್ಞಾನ ವೃದ್ಧಿ, ಶಕ್ತಿ, ಉಲ್ಲಾಸ ಲಭಿಸಿ, ಮನಸ್ಸಿನಲ್ಲಿ ಉತ್ಸಹ ತುಂಬಿರುತ್ತದೆ ಜೊತೆಗೆ ಕೆಲಸಕ್ಕೆ ಸ್ಪೂರ್ತಿ ಬರುತ್ತದೆ ಎಂದರು.
ಪ್ರತಿ ನಿತ್ಯ ಕೆಲ ಸಮಯವನ್ನು ಯೋಗಕ್ಕೆ ಮೀಸಲಿಡುವ ಮೂಲಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಆಗೆ ಭವಿಷ್ಯದಲ್ಲಿ ಉತ್ತಮ ಪಲಿತಾಂಶ ಕಾಣಬಹುದು ಎಂದು ಸಲಹೆ ನೀಡಿದರು. ಇನ್ನು ಆಹಾರ ಪದ್ಧತಿಯಲ್ಲಿ ಕೆಲ ನಿಯಮದ ಮೂಲಕ ಸೇವನೆ ಮಾಡಬೇಕು.ಯೋಗವನ್ನು ನಿಯಮವಾಗಿ ಮಾಡಿದರೇ ಮಾತ್ರ ಅದರ ಲಾಭ ಪಡೆಯಬಹುದಾಗಿದೆ ಎಂದು ಹೇಳಿದರು..
ಇದೆ ವೇಳೆ ಪತಂಜಲಿ ಯೋಗ ಸಮಿತಿ ಪರಿವಾರದ ಜಿಲ್ಲಾ ಪ್ರಭಾರಿಗಳಾದ ಎಂ.ವಿ. ಗಿರೀಶ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಯುವ ಭಾರತ್ ಸೇವಾ ಟ್ರಸ್ಟ್ ಸುರೇಶ್ ಪ್ರಜಾಪತಿ, ಜಿಲ್ಲಾ ಸಂರಕ್ಷಕರಾದ ಲೋಕನಾಥ್, ಕಿಸಾನ್ ಸಮಿತಿ ಜಿಲ್ಲಾ ಪ್ರಭಾರಿ ನಾಗೇಶ್, ಮಹಿಳಾ ಪ್ರಭಾರಿ ಶಾರದ ಧರ್ಮನಂದ್, ದೊರೆಸ್ವಾಮಿ, ಹಿರಿಯರಾದ ರಂಗನಾಥ್, ಮೋಹನ್ ಇತರರು ಉಪಸ್ಥಿತರಿದ್ದರು.



