
ಬೇಲೂರು : ಬಾಣಾವರದ ಮಹಾವೀರ ಗೋಶಾಲೆಗೆ ಬೇಲೂರಿನ ಕೃಷಿಕ ಕನಾಯಕನಹಳ್ಳಿ ರೈತ ಯೊಗೇಶ್ ಬಸವೇಗೌಡ ಇವರು ಪ್ರತಿವರ್ಷದಂತೆ ಈ ವರ್ಷವೂ ಸಹ ಗೋಶಾಲೆಯ ಜಾನುವಾರುಗಳಿಗೆ ಮೇವು ವಿತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆಂದು ಬೆಲೂರು ಪೊಲಿಸ್ ಠಾಣೆಯ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ರೈತರಿಗೆ ಅಭಿನಂದನೆ ಸಲ್ಲಿಸಿದರು.
ನಂತರ ಮಾತನಾಡಿದ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಸ್ವಾಮೀಗೌಡ ಹಸಿದವರಿಗೆ ಮಾತ್ರ ಹಸಿವಿನ ಬೆಲೆಗೊತ್ತೆಂಬ ಮಾತಿನಂತೆ ನಮ್ಮ ರೈತಮಿತ್ರರಾದ ಯೋಗೇಶ್ ರವರು ಗೋಶಾಲೆಯ ಜಾನುವಾರುಗಳಿಗೆ ಮೇವು ವಿತರಿಸುವ ಮೂಲಕ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ.
ಸಮಾಜದಲ್ಲಿ ಗೋರಕ್ಷಣೆ ಮಾಡುವಂತ ಜನರು ಹೆಚ್ಚಿನವರಿದ್ದಾರೆ ಆದರೆ ಅದಕ್ಕೆಮೇವುಗಳನ್ನು ಹಾಕುವುದು ಅತಿಮುಖ್ಯ ಪ್ರತಿಯೊಬ್ಬ ರೈತರು ಇದರಿಂದ ಉತ್ತೇಜನವಾಗಿ ಹೆಚ್ಷಿನ ರೀತಿಯಲ್ಲಿ ಮೇವುಗಳನ್ನು ದಾನ ನೀಡಬೆಕೆಂದರು.
ನಂತರ ಮಾತನಾಡಿದ ಯೊಗೇಶ್ ನಾನು ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ನಾವು ರೈತರ ಮಕ್ಕಳು ನಮ್ಮ ಜೀವನಾಡಿ ಗೋವುಗಳು ಅವುಗಳನ್ನು ರಕ್ಷಸಿಸುವುದು ನಮ್ಮೆಲ್ಲರ ಕರ್ತವ್ಯ ಅದರಂತೆ ನಾವು ಬೆಳದೆಂತ ೧ ಭಾಗವನ್ನು ನಾಲ್ಕು ವರ್ಷದಿಂದ ಗೋಶಾಲೆಗೆ ವಿತರಿಸುತ್ತಿದ್ದೇನೆ ದಯಮಾಡಿ ರೈತರು ತಾವು ಸಾಕಿಸಲುಹಿದ ಗೋವುಗಳನ್ನು ಕಟುಕರಿಗೆ ನೀಡದೆ ಕೊನೆವರೆಗೂ ಗೊವುಗಳಿಗೆ ಮೇವುನೀಡುವಂತೆ ಮನವಿ ಮಾಡಿದರಲ್ಲದೆ ಬರಗಾಲದಲ್ಲಿ ರೈತರು ತಾವು ಬೆಳೆದಂತಹ ಮೇವನ್ನು ಗೋಶಾಲೆಗೆ ನೀಡುವಂತೆ ಮನವಿ ಮಾಡಿದರು.
