
ಬೇಲೂರು : ರಥಸಪ್ತಮಿ ಅಂಗವಾಗಿ ಹಲವಾರು ವರ್ಷಗಳಿಂದ ಬೇಲೂರು ಶ್ರೀ ಚನ್ನಕೇಶವ ದೇಗುಲ ಮುಂಭಾಗ ಮೆಟ್ಟಿಲ ಮೇಲೆ ಬೇಲೂರಿನ ಪತಂಜಲಿ ಹಾಗೂ ರಾಘವೇಂದ್ರ ಯೋಗಪಟುಗಳು ೧೦೮ ಸೂರ್ಯನಮಸ್ಕಾರ ನಡೆಸಿಕೊಂಡು ಬರುತ್ತಿದ್ದರು.
ಆದರೆ ಪುರಾತತ್ತ್ವ ಇಲಾಖೆಯ ಸಿಬ್ಬಂದಿಗಳು ಅಲ್ಲಿ ಸೂರ್ಯನಮಸ್ಕಾರ ಮಾಡಲು ಅವಕಾಶ ಕಲ್ಪಿಸದ ಹಿನ್ನಲೆಯಲ್ಲಿ ಸಾರ್ವಜನಿಕರು ಹಾಗೂ ದೇಗುಲಕ್ಕೆ ಆಗಮಿಸಿದ ಭಕ್ತರು ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಚನ್ನಕೇಶವ ದೇಗುಲದಲ್ಲಿ ರಥಸಪ್ತಮಿ ಪ್ರಯುಕ್ತ ದೇವರ ಉತ್ಸವವು ನಾಲ್ಕು ಮೂಲೆಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಯೋಗಪಟುಗಳು ೧೦೮ ಸೂರ್ಯ ನಮಸ್ಕಾರ ಮಾಡುತ್ತಾ ಬರುತ್ತಿದ್ದರು.
ಆದರೆ ಇಂದು ಇಲ್ಲಿಯ ಸಿಬ್ಬಂದಿಗಳು ಇಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯಲು ಬಿಡುವುದಿಲ್ಲ ಎಂದು ಅವರನ್ನು ಕೆಳಗೆ ಇಳಿಯಲು ಹಾಗೂ ದೇವಾಲಯದ ಸುತ್ತಾ ವಾಯುವಿಹಾರ ಮಾಡಿ ವಿಶ್ರಮಿಸುವವರನ್ನು ಮೆಟ್ಟಿಲಿಂದ ಕೆಳಗಿಳಿಸುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೋಟೆ ಶ್ರೀನಿವಾಸ್ ಸುಮಾರು ೧೫ ವರ್ಷಗಳಿಂದ ದೇಗುಲ ಮುಂಭಾಗದಲ್ಲಿ ರಥಸಪ್ತಮಿ ದಿನದಂದು ಯೋಗ ಮಾಡಿಕೊಂಡು ಬರುತ್ತಿದ್ದಾರೆ.
ಈ ಯೋಗಾಕೇಂದ್ರದ ಸದಸ್ಯರು ಹಬ್ಬ ಹರಿದಿನಗಳಲ್ಲಿ ಸ್ವಚ್ಚತೆಗೆ ಹೆಚ್ಚನ ಆದ್ಯತೆ ನೀಡುವುದರ ಜೊತೆಗೆ ರತೋತ್ಸವದ ಸಂದರ್ಭದಲ್ಲಿ ಅವರೇ ಸ್ವಯಂಸೇವಕರಾಗಿ ಪುರಸಭೆ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಾರೆ.
ಆದರೆ ಇಲ್ಲಿ ಕೆಲವರು ಅಧಿಕಾರಿಗಳೆ ಹೇಳಿದ್ದೆ ಒಂದಾದರೆ ಸಿಬ್ಬಂದಿಗಳ ದರ್ಬಾರೆ ಒಂದುರೀತಿಯಾಗಿದೆ.ದೇವಾಲಯ ಸುತ್ತಮುತ್ತ ಪ್ರವಾಸಿಗರು ಗಲೀಜು ಮಾಡಿದ್ದರು ಅದನ್ನು ಗಮನಿಸದೆ ಇನ್ನು ದೇಗುಲ ಕೆಲವು ಭಾಗಗಳು ಬಿರುಕು ಬಿಟ್ಟಿದ್ದರೂ ಅದರ ಕಡೆ ಗಮನ ಕೊಡದೆ ಇಲ್ಲಿ ಅನೈತಿಕ ಚಟುವಟಿಕೆ ಮಾಡುತ್ತಿದ್ದಾರೆ ಕೆಟ್ಟ ಭಾಷೆಯಲ್ಲಿ ಮಾತಾಡಿದ್ದು ತಪ್ಪು, ಅಲ್ಲದೆ ದೇಗುಲದ ಆಸ್ತಿ ಅಲ್ಲದಿದ್ದರೂ ಬಡವರ್ಗದವರು ಸಣ್ಣಪುಟ್ಟ ಕೆಲಸ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಜನರನ್ನು ಹೆದರಿಸಿ ತೊಂದರೆಕೊಡುತ್ತಿದ್ದಾರೆ.
ದೇಗುಲದ ೧೦೦ ಮೀ ಆವರಣದಲ್ಲಿ ಬಲಾಡ್ಯರು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರು ಅವರಿಗೆ ಪ್ರಶ್ನಿಸಲು ಆಗುವುದಿಲ್ಲ.ಇದೇ ರೀತಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದು ಕಂಡುಬಂದರೆ ಕೋಟೆ ಸುತ್ತಮುತ್ತಲಿನ ಎಲ್ಲರೂ ಉಗ್ರರೀತಿಯಲ್ಲಿ ಪ್ರತಿಭಟಿಸುಬುದಾಗಿ ಎಚ್ಚರಿಕೆ ನೀಡಿದರು.
ಪುರಾತತ್ತ್ವ ಇಲಾಖೆಯ ಶಿವು ಮಾತನಾಡಿ ನಮಗೆ ಮೇಲಾಧಿಕಾರಿಗಳಿಂದ ಆದೇಶ ಬಂದಿದೆ.ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು.ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದಿದ್ದು ಇಲ್ಲಿದ್ದವರನ್ನು ತಡೆದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಪ್ರಕಾಶ್,ಸುಬ್ರಹ್ಮಣ್ಯ, ನಾಗರಾಜ್,ಯೊಗೇಶ್,ಸಂತೋಷ್,ಸುರೇಶ್, ಧರ್ಮೇಗೌಡ ಇತರರು ಹಾಜರಿದ್ದರು.
ಇದೇ ವೇಳೆ ನೂರಾರು ಭಕ್ತರು ಹಾಗೂ ಮಹಿಳೆಯರು ಸೂರ್ಯೊದಯಕ್ಕೂ ಮುನ್ನಾ ಚನ್ನಕೇಶವ ಸ್ವಾಮಿಯ ರಥಸಪ್ತಮಿಯಲ್ಲಿ ಪಾಲ್ಗೊಂಡು ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.



