
ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿಯ ಪಿ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್(ರಿ,) ಹೋಬಳಿ ಘಟಕದ ವತಿಯಿಂದ ಮಾ.೪ ರಂದು ನಡೆಯಲಿರುವ ದ್ವಿತೀಯ ಸಮ್ಮೇಳನ ಪ್ರಯುಕ್ತ ಅಧ್ಯಕ್ಷರು ಹಾಗೂ ಸಹ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು.
ಹೀರಿಸಾವೆ ಹೋಬಳಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಫ್ರೌಢಶಾಲೆಗಳಿಂದ ಒಟ್ಟು ೪೮ ವಿದ್ಯಾರ್ಥಿಗಳು ಭಾಗವಹಿಸಿದ್ದು ಕವನ ವಾಚನ, ಕನ್ನಡ ಬಾಷೆ ಬೆಳವಣಿಗೆ ಕುರಿತು ವಿಷಯ ಮಂಡನೆ ಹಾಗೂ ಕನ್ನಡ ಸಾಹಿತ್ಯ ಕುರಿತಂತೆ ಪ್ರಬಂಧ ರಚನೆ ಸ್ವರ್ಧೆಯನ್ನು ನಡೆಸಲಾಯಿತು.
ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಗಾನವಿ ಎಸ್.ಗೌಡ ಪ್ರಥಮ ಸ್ಥಾನ ಪಡೆಯುವ ಮೂಲಕ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾದರು.
ಹಿರೀಸಾವೆ ಎನ್‌ಎಚ್‌ಎಸ್ ಶಾಲೆಯ ಎಸ್.ಎನ್.ಶೃತಿ ಹಾಗೂ ಹಿರೀಸಾವೆ ಜಿಎಚ್‌ಎಸ್ ಶಾಲೆಯ ವಿದ್ಯಾರ್ಥಿನಿ ಡಿ.ಲೀಲಾವತಿ ಸಹ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹಿರೀಸಾವೆ ಬಾಲಕೀಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಲೋಕೇಶ್, ಶಿಕ್ಷಣ ಸಂಯೋಜಕರಾದ ನಿತ್ಯಾನಂದ ಮತ್ತು ರವೀಂದ್ರ ಅವರು ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು.
ಸಹಶಿಕ್ಷಕ ಪುರುಷೋತಮ್ ಸಹಕಾರ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಎಚ್.ಕೆ.ಸುಧಾಕರ್, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಆರ್.ಶ್ರೀನಿವಾಸ್ ಉಳ್ಳಾವಳ್ಳಿ, ಸಮೂಹ ಸಂಪನ್ಮೂಲ ವ್ಯಕ್ತಿ ಧರ್ಮಪಾಲ್, ಶಾಲೆಯ ಮುಖ್ಯಶಿಕ್ಷಕಿ ಧನಲಕ್ಷ್ಮೀ, ಸಹಶಿಕ್ಷಕ ಪುರುಷೋತಮ್, ಅತಿಥಿ ಶಿಕ್ಷಕಿ ಅಮೃತ, ವಿವಿಧ ಶಾಲೆಗಳ ಶಿಕ್ಷಕರಾದ ರಾಮೇಗೌಡ, ನಗೇಶ್, ಕುಮಾರ್, ಸಂತೋಷ್, ಅರುಣಕುಮಾರಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


