ಮುಖ್ಯ ಅತಿಥಿಗಳ ಗೈರು, ಹಾಸನಾಂಬ ಕಲಾಕ್ಷೇತ್ರದ ಸೀಟು ಖಾಲಿ ಖಾಲಿಸವಿತಾ ಮಹರ್ಷಿ ಜಯಂತಿಯಲ್ಲಿ ರವಿಕುಮಾರ್ ಬೇಸರ

ಹಾಸನ: ಆಹ್ವಾನ ಪತ್ರಿಕೆಯಲ್ಲಿ ರಾಜಕಾರಣಿಗಳು, ಅಧಿಕಾರಿಗಳ ಹೆಸರು ಇದ್ದರೂ ಅವರ ಗೈರು ಇರುವುದರ ಜೊತೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಅಲ್ಪವೇ ಜನರು ಇರುವುದಕ್ಕೆ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್ ಬೇಸರವ್ಯಕ್ತಪಡಿಸಿದರು.

ನಗರದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರದಂದು ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಆಹ್ವಾನ ಪತ್ರಿಕೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಶಾಸಕರು, ಎಂ.ಎಲ್.ಸಿ. ಹಾಗೂ ಸಂಸದರ ಹೆಸರು ನಮೋದಿಸಲಾಗಿದೆ. ಇವರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೇ ನಾವು ಹೇಳುವುದೆ ಬೇಡ ಜನರು ಕಲಾಭವನದಲ್ಲಿ ಹೆಚ್ಚು ಸೇರುತ್ತಾರೆ.

ರಾಜಕೀಯಕ್ಕೂ ಇದು ನೆಂಟು ಇದೆಯಾ ಗೊತ್ತಿಲ್ಲ. ಪತ್ರಿಕೆಯಲ್ಲಿ ಮಾತ್ರ ರಾಜಕಾರಣಿಯವರ ಹೆಸರು ಹಾಕಲಾಗಿದೆ. ಆದರೇ ಇಲ್ಲಿ ಯಾರು ಕಾರ್ಯಕ್ರಮಕ್ಕೆ ಬರುವುದಿಲ್ಲ. ನಮ್ಮ ಗೋಳನ್ನು ಯಾರ ಬಳಿ ಹೇಳಿಕೊಳ್ಳುವುದು. ಅಧಿಕಾರಿಗಳ ಬಳಿ ಹೇಳಿಕೊಂಡರೆ ಸ್ಪಂದನೆ ಕೊಡುತ್ತಾರೆ. ಆದ್ರೆ ರಾಜಕಾರಣಿಯಿಂದಲೇ ಸಮಾಜಕ್ಕೆ ಅನುಕೂಲ, ಸೌಲಭ್ಯ ಇರಬಹುದು ಎಲ್ಲಾ ಕೆಲಸ ಆಗಬೇಕಾಗಿರುವುದು ಎಂದರು.

ಇಂತಹ ಜಯಂತಿ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಭಾಗವಹಿಸಿದರೇ ನಮ್ಮ ಸಮಸ್ಯೆಯನ್ನು ಅವರ ಬಳಿ ತೋಡಿಕೊಳ್ಳಲು ಅವಕಾಶ ದೊರಕುತ್ತದೆ. ಇದು ನಮ್ಮ ದುರದೃಷ್ಟ ಏನು ಇದೆ ವೇಳೆ ವಿಧಾನಸಭಾದ ಸಭೆ ಬರುತ್ತದೆ. ಇದರಿಂದ ರಾಜಕಾರಣಿಗಳಿಗೆ ಒತ್ತಡ ಹಾಕಲು ಆಗುವುದಿಲ್ಲ. ಸೆಷನ್ ಮುಗಿದ ಮೇಲೆ ಈ ಜಯಂತಿ ಮುಂದಕ್ಕೆ ಹಾಕೋಣ ಎಂದು ಅಧಿಕಾರಿಗಳ ಬಳಿ ಹೇಳಿಕೊಂಡಿದ್ದರೂ ಜಯಂತಿ ಇರುವ ದಿನದಲ್ಲೆ ಆಚರಿಸಿದರೇ ಸೂಕ್ತ ಎಂದು ಅಧಿಕರಿಗಳು ಸಲಹೆ ನೀಡಿದ್ದರು. ಅವರ ಸೂಚನೆಯಂತೆ ಆಚರಿಸಲಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಸಮಾಜ ಚಿಂತಕರು ಕೆ.ವಿ ಮೋಹನ್ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹರ್ಷಿ ದೇವ ದೇವತೆಗಳ ಆಯುಷ್ಕರ್ಮ ಸೇವೆಯನ್ನು ಮಾಡುತ್ತಿದ್ದಾರೆಂದು ಕಾಶಿ ಕ್ಷೇತ್ರದಳ್ಲಿ ದೊರೆತ ಮಹಾಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಸವಿತಾ ಮಹರ್ಷಿಯು ರಥಸಮ್ತಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದರು.

ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೊಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ಪ್ರತಿತಿಯಿದೆ. ಅಪಾರ ಜ್ಷಾನಭಂಡಾರ ಹೊಂದಿದ ಸವಿತಾ ಮಹರ್ಷಿಗಳು ನಾಲ್ಕನೇ ವೇದವಾದ ಸಾಮವೇದ ಕೃತಿ ರಚಿಸಿದ್ದಾರೆ ಎಂದರು.

ಸವಿತಾ ಸಮಾಜ ಒಗ್ಗಟ್ಟಾಗಿ ಶೈಕ್ಷಣಿಕವಾಗಿ, ಆರ್ಥಿವಾಗಿ, ಸಾಮಾಜಿಕವಾಗಿ ಇತರರಿಗೆ ಆದರ್ಶ ಪ್ರಾಯರಾಗಿ ಬೆಳೆಯಬೇಕು. ತತ್ವ ಸಂದೇಶಗಳನ್ನು ಸರ್ವಕಾಲಿಕವಾಗಿದ್ದು ಅದರ ಹಲವು ಭಾಗವನ್ನಾದರೂ ಜನರು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣದೊಂದಿಗೆ ಸದೃಢ ಭಾರತ ಹೊರಹೊಮ್ಮಲು ಸಾಧ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಧಿಕಾರಿಗಳ ಕಚೇರಿ ಸಹಾಯಕರಾದ ಎಲ್.ಎಸ್. ರಮೇಶ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಸವಿತಾ ಸಮಾಜ ತಾಲ್ಲೂಕು ಅಧ್ಯಕ್ಷರು ಜಿ. ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಡಾ.ಹೆಚ್.ಪಿ. ತಾರಾನಾಥ್, ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *