ಸಕಲೇಶಪುರ ತಾಲೂಕಿನ ಬ್ಯಾಕರ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ಳಕ್ಕಿ ಗ್ರಾಮದ ದೇವಮ್ಮ ಈರಯ್ಯ ಹಾಗೂ ಶಾಂತಪುರ ಗ್ರಾಮದ ಎಂ ಹೆಚ್ ರೇಖಾ ಕೋಂ ವಸಂತ ರವರಿಗೆ 2020-21ನೇ ಸಾಲಿನಲ್ಲಿ ನೆರೆ ಸಂತ್ರಸ್ತರ ಪುನರ್ ವಸತಿ ಯೋಜನೆ ಅಡಿ ಮನೆ ಮಂಜೂರಾಗಿದ್ದು ಫಲಾನುಭವಿ ಗಳಿಗೆ 1 ಲಕ್ಷ ರೂ ನಂತೆ ಹಣ ಬಿಡುಗಡೆಯಾಗಿದ್ದು,ಕೆಲವರು ತಳಪಾಯ ಮತ್ತು ಗೋಡೆ ಕೆಲಸ ಮಾಡಲಾಗಿದೆ.

ಆದರೆ ಆರ್ ಜಿ ಎಚ್ ಸಿ ಎಲ್ ನ ಆಶ್ರಯ ಮೊಬೈಲ್ ಆಪ್ ನಲ್ಲಿ ನಿಗದಿತ ಸಮಯದಲ್ಲಿ ಅಧಿಕಾರಿಗಳು ಜಿ ಪಿ ಎಸ್ ಮಾಡದೆ ಬ್ಲಾಕ್ ಆಗಿದೆ ಎಂದು ಫಲಾನುಭವಿ ಗಳಾದ ದೇವಿರಮ್ಮ ಹಾಗೂ ಎಚ್ ಎಮ್ ರೇಖಾ ದೂರಿರು ತ್ತಾರೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಅಭಿವೃದ್ಧಿ ಅನ್ ಬ್ಲಾಕ್ ಮಾಡಿಸಲು ಮಾಡಿಸಲು ತಾಲೂಕು ಕಚೇರಿಗೆ ಕಳಿಸಿರುವುದಾಗಿ ತಿಳಿಸಿರುತ್ತಾರೆ.

ಆದರೂ ಸಹ ಇದುವರೆಗೂ ಯಾವುದೆ ಪ್ರಯೋಜನ ಆಗದೆ ಕುಟುಂಬದ ಸದಸ್ಯರುಗಳು ಮತ್ತು ಮಕ್ಕಳು ಗುಡಿಸಿಲಿನಲ್ಲಿ ಕಾಲ ಕಳೆಯುವ ಪರಿಸ್ಥಿತಿ ಎದುರಾಗಿದೆ ಎಂದರು

ಈ ಸಂದರ್ಭದಲ್ಲಿ ಡಿ ಎಸ್ ಎಸ್ ಮೈಸೂರು ವಿಭಾಗಿಯ ಸಂಚಾಲಕರಾದ ವಳಲಹಳ್ಳಿ ವೀರೇಶ್ ಇದಕ್ಕೆ ಅಧಿಕಾರಿಗಳ ನಿರ್ಲಕ್ಷವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸರಿಪಡಿಸಿಕೊಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರಾದ ಮಲ್ಲೇಶ್, ಮಿಥುನ್, ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *