ಸಕಲೇಶಪುರ : ಐತಿಹಾಸಿಕ ರಥೋತ್ಸವ 25.02.24 ರಂದು ವಿಜೃಂಭಣೆಯಿಂದ ಜರುಗಿತು.

ಸರಿಸುಮಾರು 18000 ಕ್ಕೂ ಹೆಚ್ಚು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದು ಸಣ್ಣಪುಟ್ಟ ಘಟನೆ ಹೊರತು ಪಡಿಸಿ ಕಳ್ಳತನ, ಚೈನ್, ಉಂಗರ, ಪರ್ಸ್ ಕಳ್ಳತನ ಎಂಬ ಅಹಿತಕರ ಘಟನೆ ನಡಿಯದೆ ಅತ್ಯಂತ ಯಶಸ್ವಿಯಾಗಿ ನಡಿಯಿತು

ಹಳೆ ಜಿದ್ದು ಇಟ್ಟುಕೊಂಡು ನಡಿಯುತಿದ್ದ ಯಾವದೇ ಗಲಭೆ ಗಲಾಟೆಗಳು ನಡಿಯದೆ ಇರುವುದು ಸಾರ್ವಜನಿಕರಿಗೆ ಪೊಲೀಸ್ ಮೇಲೆ ಗೌರವ ಹೆಚ್ಚಾಗಿದೆ ಎಂದರು.

ವಿಶೇಷವಾಗಿ ಮೂರೂ ಕಡೆ ಹೆಣ್ಣು ಮಕ್ಕಳಿಗೆ ರಥ ಎಳಿಯುವ ಅವಕಾಶದಲ್ಲಿ ಮಹಿಳೆಯರ ಭದ್ರತೆಗೆ ಪೊಲೀಸ್ ವ್ಯವಸ್ಥೆ ಮಾಡಿದ್ದರ ಬಗ್ಗೆ ಭಕ್ತರು ಮಹಿಳೆಯೆರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಜನರ ನೂಕುನುಗ್ಗಲಲ್ಲಿ ಮಹಿಳಿಯರಿಗೆ ಹಿಂಸೆ ನೀಡುತಿದ್ದವರ ಮೇಲೆ ಹದ್ದಿನ ಕಣ್ಣು ಇರಿಸಿ ರಸ್ತೆಯ ಆಯಕಟ್ಟಿನ ಜಾಗದಲ್ಲಿ ಸಿಸಿಟಿವಿ ಅಳವಡಿಸಿ ಧ್ವನಿವರ್ಧಕದಲ್ಲಿ ಎಚ್ಚರಿಕೆ ನೀಡಿದ್ದರಿಂದ ಕಳ್ಳರು, ಕಾಮುಕರಿಗೆ ಭಯ ಉಂಟಾಗಿತ್ತು.

ಇನ್ಸ್ಪೇಕ್ಟರ್ ಜಗದೀಶ ಅವರು ಸಹ ಹೊರ ತಾಲ್ಲೂಕಿನಿಂದ ಬಂದ ಪ್ರತಿಯೊಬ್ಬ ಪೊಲೀಸನವರಿಗೆ ದೇವಸ್ಥಾನ ಸಮಿತಿ ಪ್ರಸಾದ ನೀಡುವ ಮೂಲಕ ಇದು ನಮ್ಮ ಕರ್ತವ್ಯ ಎಂದು ಹೇಳಿದರು

.

ಅತಿದೊಡ್ಡ ರಥ ಮತ್ತು ಒಂದೇ ರಸ್ತೆ ಅಂದರೆ ಬಿ.ಎಂ ರಸ್ತೆಯಲ್ಲಿ ರಥ ಹೋಗುವುದರಿಂದ ವಾಹನಗಳ ದಟ್ಟಣೆ ಅದರಲ್ಲೂ ಭಾನುವಾರ ಆಗಿದ್ದರಿಂದ ಪ್ರವಾಸಿಗರ ಸಂಖ್ಯೆ ಮತ್ತು ವಾಹನಗಳು ಸಹ ಅತಿ ಹೆಚ್ಚಿದ್ದು ಟ್ರಾಫಿಕ್ ಸಮಸ್ಯಯಿಂದ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ ಪೊಲೀಸ್ ಇಲಾಖೆಗೆ ಸಕಲೇಶಪುರದ ಜನತೆ ಧನ್ಯವಾದ ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *