
ಸಕಲೇಶಪುರ : ಪಟ್ಟಣದ ಬಿ.ಎಂ.ರಸ್ತೆಯ ಪಕ್ಕದಲ್ಲಿರುವ ಹಳೆ ಗ್ರಂಥಾಲಯ ನಿವೇಶದಲ್ಲಿ ಜಾಗದಲ್ಲಿ ರಾತ್ರೋ ರಾತ್ರಿ ಕರ್ನಾಟಕ ರಕ್ಷಣಾ ವೇದಿಕೆಯ ( ಪ್ರವೀಣ್ ಶೆಟ್ಟಿ ಬಣದ ) ಕಾರ್ಯಕರ್ತರು ಅಕ್ರಮವಾಗಿ ಆಫೀಸ್ ಶೆಡ್ ನಿರ್ಮಾಣ ಮಾಡಿರುವುದು ನನ್ನ ಗಮಕ್ಕೆ ಬಂದಿದ್ದು ಕೂಡಲೆ ಅದನ್ನು ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ.ಶೃತಿ ತಿಳಿಸಿದ್ದಾರೆ.
ಈ ಹಿಂದೆ ನಮ್ಮ ಪುರಸಭೆ ಕಛೇರಿಗೆ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆಫೀಸ್ ನಿರ್ಮಿಸುವ ಉದ್ದೇಶದಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು ,ಈ ವಿಷಯವನ್ನು ಕೌನ್ಸಿಲ್ ಸಮಿತಿಯ ಸಭೆಗೆ ತರಲಾಗಿ ಈ ನಿವೇಶನ ಗ್ರಂಥಾಲಯದ ಜಾಗವಾಗಿದ್ದು ಕೊಡಲು ಸಾದ್ಯವಾಗುವುದಿಲ್ಲ ಕೂಡಲೇ ತೆರವುಗೊಳಿಸುವಂತೆ ರಕ್ಷಣಾ ವೇದಿಕೆಯ ಮುಖಂಡರಿಗೆ ತಿಳಿಸಲಾಗಿದೆ.
ತೆರವು ಮಾಡುವುದಾಗಿ ತಿಳಿಸಿದ್ದಾರೆ ತೆರವುಗೊಳಿಸದೇ ಇದ್ದಲ್ಲಿ ನಮ್ಮ ಪುರಸಭೆಯ ಸಿಬ್ಬಂದಿಗಳಿಂದ ತೆರವು ಮಾಡಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ್ ತಿಳಿಸಿದ್ದಾರೆ.


