ಹಾಸನ: ಅಪಾರ ಬೆಲೆ-ಬಾಳುವ ರೈತರ ಜಮೀನುಗಳನ್ನ ಇ-ಟೆಂಡರ್ ಮೂಲಕ ರೈತನಿಗೆ ಗೊತ್ತಾಗದಂತೆ ೧೦ ಲಕ್ಷ ಸಾಲಕ್ಕೆ ೬೫ ಲಕ್ಷ ಬೆಲೆಗೆ ಹಾರಾಜು ಮಾಡಲಾಗಿದ್ದು, ಖಂಡಿಸಿ ರಾಜ್ಯ ರೈತ ಸಂಘದಿಂದ ನಗರದ ಕೆನರಾ ಬ್ಯಾಂಕಿಗೆ ಮುತ್ತಿಗೆ ಹಾಕಿದಲ್ಲದೇ ಅಧಿಕಾರಿಗೆ ದಿಗ್ಬಂಧನ ಹಾಕಿದ ವೇಳೆ ಬ್ಯಾಂಕ್ ಮುಖ್ಯ ಅಧಿಕಾರಿಯೇ ಅರ್ಜಿ ಬರೆದು ೨೫ ದಿನಗಳ ಒಳಗೆ ರೈತರ ಸಾಲದ ಸಮಸ್ಯೆ ಬಗೆಹರಿಸುವುದಾಗಿ ರೈತ ಸಂಘಕ್ಕೆ ಮನವಿ ನೀಡಿದ ಪ್ರಸಂಗ ನಡೆಯಿತು.

ಬ್ಯಾಂಕಿನ ಮುಖ್ಯಸ್ಥ ಮಂಗಳೂರಿನಿಂದ ಇಲ್ಲಿಗೆ ಬಂದಿದ್ದು, ಇತ ಶೌಚಾಲಯಕ್ಕೆ ಹೋಗುವುದಾಗಿ ಹೇಳಿದರೂ ಬಿಡದೆ ರೈತರು ನ್ಯಾಯಾ ಕೊಡಿಸುವಂತೆ ಹಾಗೂ ರೈತರ ಸಮಸ್ಯೆಯನ್ನು ಬಗೆಹರಿಸಿಕೊಡಲು ಅಧಿಕಾರಿಯೇ ಲೆಟರ್ ಬರೆದುಕೊಡುವಂತೆ ಪಟ್ಟು ಹಿಡಿದರು.

ಇಷ್ಟಕ್ಕೆ ಸುಮ್ಮನಾಗದ ರೈತರು ಆತನನ್ನು ಕಟ್ಟಿ ಹಾಕಲು ದಾರ ತರಲು ಮೂರ್ತಿ ಸೂಚಿಸಿದರು.

ನಂತರ ಅಧಿಕಾರಿಯೇ ಒಂದು ಅರ್ಜಿ ಬರೆದು ರೈತರಿಗೆ ನೀಡಿದರು. ಅರ್ಜಿಯಲ್ಲಿ ಬರೆದಂತೆ ಹರಾಜು ಕೂಗಿರುವುದನ್ನು ಇನ್ನು ೨೫ ದಿನಗಳ ಒಳಗೆ ಬಗೆಹರಿಸಿ ಕೊಡಲಾಗುವುದು. ರೈತರ ಸಾಲದ ಬಟ್ಟಿ ಹಾಗೂ ಕಟ್ಟಿರುವ ಅಸಲು ಹಣ ದಲ್ಲೂ ಕುಡ ಬಿಟ್ಟು ಕಟ್ಟಿಸಿಕೊಳ್ಳಲಾಗುವುದು. ಈ ಬಗ್ಗೆ ಮಂಗಳೂರಿನಲ್ಲಿ ಸಭೆ ಸೇರಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ತುಂಬ ಸಮಯ ಕೆನರಾ ಬ್ಯಾಂಕಿನಲ್ಲಿ ರೈತರು ಕುಳಿತು ನಂತರ ಅಧಿಕಾರಿಗಳು ಅರ್ಜಿ ಕೊಟ್ಟ ನಂತರ ವಾಪಸ್ ರೈತರು ಹೋಗಿದ್ದಾರೆ.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಣಗಾಲ್ ಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಮಗ್ಗೆ ರಾಯರ ಕೊಪ್ಪಲಿನ ಶಿವಕುಮಾರ್ ಎಂಬುವರ ೭ವರೆ ಎಕರೆ ಜಮೀನನ್ನು ೧೨ ವರ್ಷಗಳ ಹಿಂದೆ ಅಡ ಇಟ್ಟು ೧೦ ಲಕ್ಷ ಪಡೆದಿದ್ದರು. ಆದರೇ ಈಗ ಹರಾಜು ಹಾಕಿದ್ದು, ಈಗಾಗಲೇ ಅವರ ಅಕ್ಕ-ತಂಗಿಯರ ಜಮೀನು ಎಲ್ಲಾ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದು, ಬ್ಯಾಂಕಿನಿಂದ ಸಾಲ ಪಡೆದಿದ್ದು ೧೦ ಲಕ್ಷ ಆದರೆ ಜಮೀನನ್ನು ಹರಾಜು ಹಾಕಿರುವುದು ೬೫ ಲಕ್ಷಕ್ಕೆ. ಈ ಬಗ್ಗೆ ಸ್ಟೇಟ್ಮೆಮಂಟ್ ಕೇಳಿದರೇ ಹರಾಜು ಆಗಿದೆ ಹೋಗಿ ಎಂದು ಉತ್ತರಿಸಿ ಹೊರಗಡೆಗೆ ನೂಕುತ್ತಾರೆ ಎಂದರು.

ಈ ಬಗ್ಗೆ ರೈತರು ಎಲ್ಲಾ ಸೇರಿ ಪ್ರತಿಭಟನೆ ಕೂಡ ಮಾಡಿದ್ದೇವೆ. ರೈತರ ಕೂರಿಸಿಕೊಂಡು ಸಭೆ ಮಾಡುವಂತೆ ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಗುಟ್ಟಾಗಿ ಕರೆಯಿಸಿಕೊಂಡು ಎಲ್ಲಾದಕ್ಕೂ ಸಹಿಯನ್ನು ಮಾಡಿಸಿಕೊಂಡರು.

ರೈತರ ಸಾಲಕ್ಕೆ ಬಟ್ಟಿ ಬಿಟ್ಟು ಕಟ್ಟಿಸಿಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಪಷ್ಟವಾಗಿ ಹೇಳಿದ್ದರು. ಇನ್ನು ಆನ್ಲೈನ್ ಮೂಲಕ ಹರಾಜು ಮಾಡಿದರೇ ರೈತರಿಗೆ ಏನು ತಿಳಿಯುವುದಿಲ್ಲ. ಆದ್ರೆ ಈ ಬ್ಯಾಂಕಿನವರು ಒಟ್ಟಿಗೆ ಕರೆಯದೆ ಒಬ್ಬೊಬ್ಬರನ್ನೆ ಕರೆಯಿಸಿಕೊಂಡು ಮಾತನಾಡಿದ್ದಾರೆ. ಈ ಬಗ್ಗೆ ಮಂಗಳೂರಿನಿಂದ ಅಧಿಕಾರಿಗಳು ಇಲ್ಲಿಗೆ ಬಂದಿದ್ದು, ಇನ್ನು ಅವರಿಗೆ ಕನ್ನಡ ಭಾಷೆಯೇ ಬರುವುದಿಲ್ಲ. ಅವರನ್ನು ಇಲ್ಲಿ ಕೂಡಿ ಹಾಕಿದ್ದು, ನಮಗೆ ನ್ಯಾಯ ಕೊಡಿಸವರೆಗೂ ಹೊರಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿರುವುದಾಗಿ ಹೇಳಿದರು.

ಇದೆ ವೇಳೆ ರಾಜ್ಯ ರೈತ ಸಂಘದ ಮುಕಂಡರಾದ ಶಿವಕುಮಾರ್, ಮಂಜುನಾಥ್, ಮಲ್ಲೇಶ್, ಲಕ್ಷ್ಮಣ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *