
ಸಕಲೇಶಪುರ : ಶ್ರೀ ಸಕಲೇಶ್ವರಸ್ವಾಮಿಯವರ ದಿವ್ಯ ರಥೋತ್ಸವ ಮತ್ತು ಜಾತ್ರಾ ವಸ್ತುಪ್ರದರ್ಶನದ ಅಂಗವಾಗಿ ಡಿ.ಕೆ.ಡೆವಲಪರ್ಸ್ ಅವರ ಟಾಟಾ ಜಾತ್ರಾ ಮೈದಾನಲ್ಲಿ ನಡೆದ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಉಪವಿಭಾಗಾದಿಕಾರಿ ಡಾ.ಎಂ.ಕೆ.ಶೃತಿ ಅವರು ಆಟಗಾರರಿಗೆ ಅಸ್ತಲಾಘವ ಕೊಡುವ ಮೂಲಕ ಪಂದ್ಯವನ್ನು ಉದ್ಘಾಟನೆ ಮಾಡಿದರು
ಸುಮಾರು 40 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿಗಳಿಗೆ ರೋಮಾಂಚನ ಪ್ರದರ್ಶನ ನೀಡಿದರು ಮೊದಲ ದಿನ ನಡೆದ ತಾಲೂಕು ಮಟ್ಟದ ಕಬ್ಬಡಿ ಪಂದ್ಯದಲ್ಲಿ ಗಗನ್ ಫ್ರೆಂಡ್ಸ್ SKP ಪ್ರಥಮ ಬಹುಮಾನ ಗಳಿಸಿದರೆ ದ್ವಿತೀಯ ಬಹುಮಾನವನ್ನು ರಾಮದೂತ ಹೆತ್ತೂರು ತಂಡ ಪಡೆಯಿತು.
ಎರಡನೇ ದಿನ ಜಿಲ್ಲಾ ಮಟ್ಟದ ಕಬ್ಬಡಿ ಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನವನ್ನು ಗುಡ್ಡದ ಭೀರೇಶ್ವರ ಹಿರದನಹಳ್ಳಿ ಪಡೆದರೆ ,ದ್ವಿತೀಯ ಬಹುಮಾನವನ್ನು ವಾಸವಿ ಬಾಯ್ಸ್ ಪಡೆದರು.
ಈ ಎಲ್ಲಾ ಪಂದ್ಯಗಳ ತೀರ್ಪುಗಾರರಾಗಿ ಮಂಜುನಾಥ್ ಹಕಾರಿ, ಶಣ್ಮುಖ ,ರಮೇಶ್ ,ಸೋಮಶೇಖರ್ ,ಮಂಜುನಾಥ್, ಸುಧಾಕರ್, ಲೈನ್ ಅಂಪೈರ್ ಆಗಿ ಪ್ರಕಾಶ್ ಹಾಗೂ ಯಲ್ಲಪ್ಪ ತಮ್ಮ ಕಾರ್ಯನಿರ್ವಹಿಸಿದರು,ನಿರೂಪಣೆಯನ್ನು ಸುನೀಲ್ ಗೊದ್ದು ಅವರು ಅಚ್ಚುಕಟ್ಟಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರಮೇಶ್ ಹಾಗೂ ಪುರಸಭೆಯ ಸಿಬ್ಬಂದಿಗಳು ಇದ್ದರು.




