ಸಕಲೇಶಪುರ ತಾಲೂಕಿನ ಆನೆ ಮಹಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಸತ್ತಿಗಾಲ್ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಮಾನ್ಯ ಶಾಸಕರಾದ ಸಿಮೆಂಟ್ ಮಂಜು ನೆರೆವೇರಿಸಿದರು

ನಂತರ ಮಾತನಾಡಿದ ಅವರು ಈ ಗ್ರಾಮಕ್ಕೆ ಹಲವು ವರ್ಷಗಳಿಂದ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲು ಗ್ರಾಮಸ್ಥರು, ಹಾಗೂ ಗ್ರಾಮದ ಮುಖಂಡರು ಹೋರಾಟ ನಡೆಸಿಕೊಂಡು ಬಂದಿದ್ದು, ಈ ದಿನ ಒಂದು ಒಳ್ಳೆಯ ಸಂದರ್ಭ ಒದಗಿ ಬಂದಿರುವುದಾಗಿ ತಿಳಿಸುತ್ತಾ, ಈಗಾಗಲೇ 12 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಹೆಚ್ಚಿನ ಅನುದಾನಕ್ಕಾಗಿ ಸಹಕರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಆನಂದ್ ಮೂರ್ತಿ, ಉಪಸ್ಥಿತರಿದ್ದು ಮಾತನಾಡುತ್ತಾ ಈ ಪ್ರದೇಶದಲ್ಲಿ ಸುತ್ತಮುತ್ತ ಹಲವಾರು ಗ್ರಾಮಗಳಿದ್ದು, ಎಲ್ಲಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ವಾಗುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಧ್ಯಕ್ಷರಾದ ವಿರುಪಾಕ್ಷ ಮಾತನಾಡಿ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನ ನೀಡಿ ಬೇಕಾಗಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೇಣುಗೋಪಾಲ್, ಕಾರ್ಯದರ್ಶಿಗಳಾದ ವೀರೇಶ್, ಮಾಜಿ ಅಧ್ಯಕ್ಷರಾದ ಹಸೈನರ್, ಸದಸ್ಯರಾದ ಸುಮ, ಚಂದ್ರಮತಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ರುಕ್ಮಿಣಿ, ಗ್ರಾಮಸ್ಥರಾದ ಹುಚ್ಚಯ್ಯ (ರಾಜು) ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ರಾದ ಹುಚ್ಚಯ್ಯ, ದೇವರಾಜು, ಲಕ್ಷ್ಮಣ, ವೆಂಕಟೇಶ್ ಶಂಕರ, ಮಂಜಯ್ಯ, ಸೋಮಶೇಖರ್, ಸೋಮ, ವಿನೋದ, ಮಲ್ಲೇಶ್, ಮಹೇಶ್, ಲೋಕೇಶ್, ಹಾಜರಿರುತ್ತಾರೆ. ಭವನದ ನಿರ್ಮಾಣಕ್ಕೆ ಶ್ರಮಿಸಿದ ಗ್ರಾಮದ ಎಲ್ಲಾ ಮುಖಂಡರ ಹೋರಾಟದ ಫಲವಾಗಿ ಯಶಸ್ವಿಯಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *