ಸಕಲೇಶಪುರ : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಹೊಳೆಮಲ್ಲೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಪ್ರಸಾದ ವಿತರಣೆಯಲ್ಲಿ ಪಾಲ್ಗೊಂಡ್ಡಿದ್ದರು .

ಮಹಾಶಿವರಾತ್ರಿ ನಿಮಿತ್ತ ವಿವಿಧ ಕಾರ್ಯಕ್ರಮ ಆಯೋಜಿಸಿದ್ದ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರು ಮತ್ತು ಸಮಿತಿಯವರೂ 1008 ಲೀಟರ್ ಹಾಲಿನ ಅಭಿಷೇಕ ಮತ್ತು ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ಜಾಗರಣೆ ಮಾಡಲು ಸಕಲ ವ್ಯವಸ್ಥೆಯನ್ನು ಮಾಡಿದ್ದರು.

ದಿನಾಂಕ 09.03.24 ರಂದು ಬೆಳಗ್ಗೆ 6.45 ಕ್ಕೆ ಪ್ರಸಾದ ಕೊಡಲು ಆರಂಭಿಸಿದ ಬಜರಂಗದಳ ಕಾರ್ಯಕರ್ತರು ಮಧ್ಯಾಹ್ನ 12.15 ವರೆಗೆ ನಿರಂತರವಾಗಿ 4800 ಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ಬಡಿಸಿದರು.

•ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಇಡಿ ಸಕಲೇಶಪುರದ ಜನತೆಗೆ ಒಳಿತಾಗಲಿ ಮತ್ತು ಸಕಾಲಕ್ಕೆ ಮಳೆಯಾಗಲಿ ಎಂದು ಹೊಳೆಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *