ಬೇಲೂರು.ಮಾರ್ಚ.೧೦“ಶ್ರೀ ಶಂಭುನಾಥಸ್ವಾಮೀಜಿಗಳ ಜನ್ಮ ದಿನ- ಪೌರ ಕಾರ್ಮಿಕರಿಗೆ ಸನ್ಮಾನ”

ಅದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿಗಳ ೪೫ ನೇ ಜನ್ಮದಿನದ ಅಂಗವಾಗಿ ಬೇಲೂರಿನ ಬಿಜಿಎಸ್ ಶಿಕ್ಷಣ ಸಂಸ್ಥೆ ಸಹಯೋಗದಿಂದ ಪುರಸಭಾ ಪೌರ ಕಾರ್ಮಿಕರನ್ನು ವಿಶೇಷವಾಗಿ ಸನ್ಮಾನಿಸುವ ಮೂಲಕ ಪೂಜ್ಯರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಸದಸ್ಯ ಬಿ.ಸಿ.ಜಗದೀಶ್. ನಾಡಿನಲ್ಲಿ ಮಠ ಪರಂಪರೆಯಲ್ಲಿ ಅದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿಕ್ಷಣ ನೀಡಿದ ಕೊಡುಗೆ ನಿಜಕ್ಕೂ ಅಪಾರವಾಗಿದೆ.ಇಂತಹ ಶ್ರೀಮಠದ ಹಾಸನ ಶಾಖೆಯಲ್ಲಿನ ಪರಮಪೂಜ್ಯ ಶ್ರೀ ಶಂಭುನಾಥ ಸ್ವಾಮಿಜೀಗಳ ಸೇವಾಕಾರ್ಯ ಮತ್ತು ಭಕ್ತರೊಂದಿಗೆ ಅವರ ಅವಿನಾಭವ ಸಂಬಂಧ ಅನನ್ಯವಾಗಿದೆ.

ಶ್ರೀಮಠದ ಆಶೋತ್ತರದಂತೆ ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಅವಿರತ ಸೇವೆಯನ್ನು ಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿಗಳು ನೀಡುತ್ತಾ ಬಂದಿದ್ದಾರೆ. ಸದಾ ಸರಳತೆಯ ಪ್ರತಿರೂಪವಾಗಿ ಕಾಣುವ ಸ್ವಾಮೀಜಿಗಳು ನೂರಾರು ವರ್ಷ ಆರೋಗ್ಯದಿಂದ ಬಾಳಿ ನಾಡಿಗೆ ಸಂದೇಶವನ್ನು ನೀಡಲಿ ಎಂದರು.

ಬೇಲೂರು ಬಿಜಿಎಸ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ದಿವ್ಯಕುಮಾರ್ ಮಾತನಾಡಿ, ಅದಿಚಂಚನಗಿರಿ ಮಹಾಸಂಸ್ಥಾನ ತ್ರಿವಿದ ದಾಸೋಹ ನೀಡುತ್ತಾ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಆಶಾ ಕಿರಣವಾಗಿದೆ.

ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೂಡ ವೃತ್ತಿಪರ ಮತ್ತು ವಿಜ್ಞಾನ ವಿಷಯದಲ್ಲಿ ಪರಿಣತಿ ಪಡೆಯಬೇಕು ಎಂಬ ಹಂಬಲದಿಂದ ಪೂಜ್ಯ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ಗ್ರಾಮೀಣ ಮಟ್ಟದಲ್ಲಿ ವಿಜ್ಞಾನ ವಿಷಯಕ್ಕೆ ಒತ್ತು ನೀಡಿದಂತೆ ಪೂಜ್ಯ ಡಾ.ಶ್ರೀ ನಿರ್ಮಾಲಾನಂದ ಮಹಾಸ್ವಾಮೀಜಿಗಳು ಮತ್ತು ಹಾಸನ ಶಾಖಾ ಮಠದ ಪೂಜ್ಯ ಶ್ರೀ ಶಂಭುನಾಥ ಸ್ವಾಮಿಜೀಗಳು ಶಿಕ್ಷಣ ಕ್ಷೇತ್ರಕ್ಕೆ ಅಗಮ್ಯ ಕೊಡುಗೆ ನೀಡುತ್ತಿದ್ದಾರೆ ಅವರ ಹುಟ್ಟು ಹಬ್ಬದ ದಿನದ ಅಂಗವಾಗಿ ಸಮಾಜಮುಖಿ ಸೇವೆಗಳನ್ನು ಮಾಡುವುದು ಅವರ ಆಶಯವಾಗಿದ್ದು ಅದರಂತೆ ಇಂದು ಪ್ರತಿನಿತ್ಯ ಪಟ್ಟಣದ ಸ್ವಚ್ಛತೆಗೆ ತಮ್ಮ ಜೀವನ ಹಂಗನ್ನು ತೊರೆದು ಕೆಲಸ ಮಾಡುವಂತಹ ಇಂತಹ ಮಹನೀರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸ್ಮರಿಸಿದರು.

ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಆರ್.ಎಸ್.ಮಹೇಶ್. ಸಾಂಸ್ಕೃತಿಕ ಘಟಕದ ಕಾರ್ಯದರ್ಶಿ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಪರಮ ಪೂಜ್ಯರು ಮಾಡಿದಂತಹ ವಿಶೇಷ ಕಾಯಕವೇ ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದು ಅವರು ಕೇವಲ ಶಿಕ್ಷಣಕ್ಕೆ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಕ್ರಮಗಳಲ್ಲೂ ಸಹ ಭಾಗವಹಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಅವರ ಸಂಕಷ್ಟಕ್ಕೆ ನೆರವಾಗುವುದು ಮತ್ತು ಅವರ ಸಮಾಜಮುಖಿ ಸೇವೆಗಳೇ ನಮಗೆ ಇಂದಿಗೂ ಆದರ್ಶ ಪ್ರಾಯವಾಗಿದ್ದು ಮಠಮಾನ್ಯಗಳಿಲ್ಲದಿದ್ದರೆ ಇಂದಿನ ಸಮಾಜವನ್ನು ಉಳಿಸಲು ಸಾಧ್ಯವಾಗುತ್ತಿರಲಿಲ್ಲ ಜಾತಿ ಭೇದ ಮತ ಎನದೆ ಪ್ರತಿನಿತ್ಯ ದಾಸೋಹದ ಮೂಲಕ ಪ್ರತಿನಿತ್ಯ ಸಾರ್ವಜನಿಕರ ಸೇವೆಯೇ ನಮ್ಮ ಬಾಳು ಎಂಬುದಾಗಿ ನಡೆದುಕೊಳ್ಳುತ್ತಿರುವ ಪೂಜ್ಯರ ಹುಟ್ಟುಹಬ್ಬದ ದಿನದಂದು ಇಂತಹ ಒಂದು ಮಹತ್ವದ ಕಾರ್ಯವನ್ನು ಮಾಡುತ್ತಿರುವ ಈ ವಿದ್ಯಾ ಸಂಸ್ಥೆಗೆ ನಾವುಗಳೆಲ್ಲರೂ ಕೃತಜ್ಞತರಾಗಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಪ್ರಕಾಶ್, ಸಮಾಜಸೇವಕ ನೂರ್ ಅಹಮದ್, ಪತ್ರಕರ್ತ ಬಿ.ಎನ್.ಗಣೇಶ್ ಮತ್ತು ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದ ಕಾರ್ಯಕ್ರಮಕ್ಕೆ ಹಾಜರಿದ್ದ ಜನತೆಗೆ ಪೂಜ್ಯರ ಜನ್ಮದಿನದ ಅಂಗವಾಗಿ ಸಿಹಿ ಹಂಚಿಕೆ ನಡೆಸಿಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *