
ಹಾಸನ: ಸ್ಥ್ರೀಧರೆ ಸೇವಾ ಟ್ರಸ್ಟ್ ನ ವಾರ್ಷಿಕ ದಿನಾಚರಣೆಯ ಪ್ರಯಕ್ತ ಪರಮಪೂಜ್ಯ ಶ್ರೀ ಶಂಭುನಾಥ ಸ್ವಾಮಿಗಳ ಜನ್ಮದಿನೋತ್ಸವದ ಶುಭ ಸಂದರ್ಭದಲ್ಲಿ ಶ್ರೀ ಮಠದ ಸಿಬ್ಬಂದಿಯವರಿಗೆ ವಸ್ತ್ರಗಳನ್ನು ನೀಡುವ ಮೂಲಕ ಮತ್ತು ಕೇಕ್ ಕತ್ತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ಸ್ಥ್ರೀಧರೆ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ದೇವಿಕಾ ಮಧುರವರು ಈ ರೀತಿ ಯಾವುದೇ ಒಂದು ಸಂಘ ಸಂಸ್ಥೆಗಳು ಗುರುಗಳ ಮಾರ್ಗದರ್ಶನ ದೊಂದಿಗೆ, ಅವರ ಆಶೀರ್ವಾದ ಪಡೆದು ನಡೆದರೆ ಸಮಾಜದಲ್ಲಿ ಮಾದರಿ ಸಂಘ ಸಂಸ್ಥೆಗಳಾಗಿ ಬೆಳೆಯಬಹುದು ಅದಕ್ಕಾಗಿ ನಾವು ಈ ರೀತಿ ನಮ್ಮ ಟ್ರಸ್ಟ್ ನ ವಾರ್ಷಿಕ ದಿನಾಚರಣೆಯನ್ನು ಈ ಕಾರ್ಯಕ್ರಮದಲ್ಲಿ ಆಚರಿಸಲು ಯೋಚಿಸಿದೆವು ಎಂದರು.
ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಮಾನ್ಯತಾ, ಯಶೋಧಾ, ಸುಮಾ, ಶಶಿಕಲಾ, ಧನಲಕ್ಷ್ಮಿ,ಮಮತಾ, ಸುಮಿತ್ರಾ ರವರು ಮತ್ತಿತರರು ಉಪಸ್ಥಿತರಿದ್ದರು.



