ಸಕಲೇಶಪುರ : ಶನಿವಾರ ಸಕಲೇಶಪುರದ ವಾಟೆಗಂಡಿ ಬಳಿ ಮಾರುತಿ 800 ಕಾರ್’ನಲ್ಲಿ ಅತಿವೇಗದಿಂದ ವಾಹನ ಚಲಾಯಿಸಿ ಬಂದ ಚಾಲಕ ಬೈಕ್’ನಲ್ಲಿ ಬರುತ್ತಿದ್ದ ಆಕಾಶ್ ಹಾದಿಗೆ ಮತ್ತು ಜಂಬರಡಿ ಹರೀಶ್ ಅವರ ವಾಹನಕ್ಕೆ ನೇರ-ನೇರವಾಗಿ ಬಂದು ಗುದ್ದಿದ್ದ ಪರಿಣಾಮ ಹರೀಶ್ ಅವರಿಗೆ ತಲೆಗೆ ತೀವ್ರ ಬಲವಾದ ಪೆಟ್ಟು ಬಿದಿದ್ದು ಹಾಸನದ ಜೀವ ಜ್ಯೋತಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಕಾಶ್ ಅವರು ತಲೆಗೆ ಹೆಲ್ಮೆಟ್ ಹಾಕಿದ ಕಾರಣ ತಲೆಗೆ ಬಲವಾದ ಹೊಡೆತ ಬಿಳದಿದ್ದರು ಕಾಲಿನ ಮಂಡಿಚಿಪ್ಪು ಮುರಿದಿದ್ದು ಬಲಗೈನ ಬೆರಳು ಮುರಿದಿದೆ. ಇವರು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತಿದ್ದರೆ.

ಜನವರಿ ತಿಂಗಳಲ್ಲಿ ನಡೆದ ಬಲರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಮನೆ-ಮನೆಗೆ ಮಂತ್ರಕ್ಷತೆ ತಲುಪಿಸುವ ಕಾರ್ಯದಲ್ಲಿ ಹಗಲು ರಾತ್ರಿ ಎನ್ನದೆ ಗ್ರಾಮದ ಪ್ರತಿ ಮನೆಗೆ ಮಂತ್ರಕ್ಷತೆ ತಲುಪಿಸಬೇಕೆಂಬ ಸಂಕಲ್ಪ ಮಾಡಿದ್ದ ಇಬ್ಬರು ಸಹ ಗ್ರಾಮದ ದೂರ ದೂರದ ಮನೆಗೂ ಕೂಡ ಮಂತಾಕ್ಷತೆ ತಲುಪಿಸಿದರು.

ಹರೀಶ್ ಅವರು ಕಾರ್ಯಕರ್ತರ ಜೊತೆ ಒಡನಾಟ ಇಟ್ಟುಕೊಂಡು ಪ್ರತಿ ಕಾರ್ಯಕರ್ತರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ ಎಂದರು.

ರಾಷ್ಟ್ರದ ಹಿತಕ್ಕಾಗಿ ತುಡಿಯುವ ಹೃದಯವಾಗಿದ್ದ ಹರೀಶ್ ಅವರ ಅಪಘಾತ ಕಾರ್ಯಕರ್ತರಿಗೆ ತೀವ್ರ ನೋವುಂಟಾಗಿದೆ

ದಿನನಿತ್ಯ ನೂರಾರು ಕಾರ್ಯಕರ್ತರು ಹರೀಶ್ ಅವರನ್ನು ನೋಡಲು ಆಸ್ಪತ್ರೆಗೆ ಬಂದು ಅರೋಗ್ಯ ವಿಚಾರಿಸುತ್ತಿದ್ದಾರೆ.

ಆಕಾಶ್ ಮತ್ತು ಹರೀಶ್ ಅವರು ಶೀಘ್ರ ಗುಣ ಮುಖವಾಗಲಿ ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ಭಗವಂತನಲ್ಲಿ ಬೇಡುತ್ತೇವೆ ಎಂದು ತಿಳಿಸಿದ್ದಾರೆ…

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *