ಬೇಲೂರು : ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಕೋಳಿಅಂಗಡಿಗಳನ್ನುತೆರವು ಮಾಡಲು ಪುರಸಭೆ ಅಧ್ಯಕ್ಷರಾದ ಮೀನಾಕ್ಷಿ ವೆಂಕಟೇಶ್ ಹಾಗೂ ಮುಖ್ಯಾಧಿಕಾರಿ ಅವರ ನೇತೃತ್ವದಲ್ಲಿ ಇಂದು ಬೀಗ ಮುದ್ರೆ ಹಾಕಲಾಯಿತು.

ಸುಮಾರು ೩೦ ವರ್ಷಗಳಿಂದಲೂ ಮುಸುಕಿನ ಗುದ್ದಾಟದಲ್ಲಿ ಸಾಗುತ್ತಿದ್ದ ಕೋಳಿ ಅಂಗಡಿಗಳ ತೆರವು ಕಾರ್ಯಾಚರಣೆ ಹಾಗೂ ಸಾರ್ವಜನಿಕರಿಂದ ಮತ್ತು ದಲಿತ ಸಂಘಟನೆಗಳ ಒತ್ತಾಸೆಯ ಹಿನ್ನಲೆಯಲ್ಲಿ

ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಂಬೇಡ್ಕರ್ ಸಮುದಾಯ ಭವನದ ಪಕ್ಕದಲ್ಲಿ ಅನಧಿಕೃತವಾಗಿ ಇದ್ದಂತಹ ಕೋಳಿ ಅಂಗಡಿಗಳನ್ನು ತೆರವುಗೊಳಿಸುವಂತೆ ಶಾಸಕರ ನೇತೃತ್ವದಲ್ಲಿ ನಡೆದಂತಹ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಸಭೆಯಲ್ಲಿ

ದಲಿತ ಮುಖಂಡರುಗಳು ಕೋಳಿ ಅಂಗಡಿಗಳನ್ನು ಕೂಡಲೇ ತೆರವುಗೊಳಿಸದಿದ್ದರೆ ಪುರಸಭೆ ವಿರುದ್ಧ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಶಾಸಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಇಂದು ಸಂಜೆಯೊಳಗಾಗಿ ಅಲ್ಲಿರುವ ಅನಧಿಕೃತ ಕೋಳಿ ಅಂಗಡಿಗಳ ತೆರವುಗೊಳಿಸಬೇಕಾಗಿ ಸೂಚಿಸಿದ ಹಿನ್ನಲೆಯಲ್ಲಿ

ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ಹಾಗೂ ಮುಖ್ಯಾಧಿಕಾರಿ ಇಂದು ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ದಿಢೀರ್ ದಾಳಿ ನಡೆಸಿ ಅಲ್ಲಿದ್ದಂತ ಕೋಳಿ ಅಂಗಡಿಗಳ ಬಾಗಿಲು ಹಾಕಿಸಿ ಬೀಗಮುದ್ರೆ ಹಾಕಿಸಲಾಯಿತು.

*ಮಾತಿನ ಚಕಮಕಿ*ಅಧಿಕಾರಿಗಳು ಬಂದಂತ ಸಂದರ್ಭದಲ್ಲಿ ಅಂಗಡಿಗಳ ಮಾಲಿಕರ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ನಿಮಗೆ ನಮ್ಮ ಪುರಸಭೆಯಿಂದ ಯಾವುದಾದರೂ ಕೋಳಿ ಅಂಗಡಿಗೆ ಅನುಮತಿ ನೀಡಿದ್ಧರೆ ದಾಖಲೆಗಳನ್ನು ತನ್ನಿ ಇಲ್ಲದಿದ್ಸರೆ ನಾನು ಸಹ ಕಾನೂನು ಹೋರಾಟದಲ್ಲಿ ಸಿದ್ದರಿದ್ದೇವೆ ಎಂದರು.

ನಂತರ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಇಂದು ಹಲವಾರು ವರ್ಷಗಳಿಂದ ಈ ವಿಷಯದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು ಇಂದಿನ ಸಭೆಯಲ್ಲು ಸಹ ಸಂಪೂರ್ಣ ಪುರಸಭೆಯಲ್ಲಿ ನಿರ್ಣಯವಾಗಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸಮುದಾಯ ಭವನದ ಪಕ್ಕದಲ್ಲೇ ಇರುವುದರಿಂದ ಇವುಗಳನ್ನು ತೆರವುಗೊಳಿಸುವಂತೆ ಈಗಾಗಲೇ ಅವರಿಗೆ ಸೂಚಿಸಲಾಗಿದ್ದು ಇಲ್ಲಿ ಕೋಳಿ ಅಂಗಡಿಗಳಿಗೆ ಅನುಮತಿ ನೀಡದೆ ಬೇರೆ ರೀತಿಯ ವ್ಯಾಪಾರ ವಹಿವಾಟು ಮಾಡಲು ನಡೆಸಲು ಸೂಚನೆ ನೀಡಿದ್ದು ಅವರ ಟೆಂಡರ್ ಮುಗಿದಿದ್ದು ನಂತರ ಅವರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾದರೆ ಇಲ್ಲಿ ಯಾವುದೇ ಕೋಳಿ ಅಂಗಡಿಗಳನ್ನು ನಡೆಸಲು ಅವಕಾಶವಿಲ್ಲ.

ನಾವು ಸಹ ಕಾನೂನಿಗೆ ಗೌರವ ಕೊಡುತ್ತೇವೆ.ಅವರ ಯಾವ ದಾಖಲಾತಿಗಳಿವೆ ಹಾಗೂ ಕೂನೂನು ಹೋರಾಟಕ್ಕೆ ನಾವು ಸಿದ್ದರಿದ್ದೇವೆ.ಇಲ್ಲಿ ಸಾರ್ವಜನಿಕರ ಹಿತಾಸಕ್ತಿಯೇ ನಮಗೆ ಮುಖ್ಯ ಎಂದರು.

ಪಟಾಕಿ ಸಿಡಿಸಿ ಸಿಹಿಹಂಚಿದ ದಲಿತ ಸಂಘಟನೆಗಳು ಕೋಳಿ ಅಂಗಡಿಗಳ ಬಾಗಿಲು ಮುಚ್ಚಿ ಬೀಗ ಹಾಕುತ್ತಿದ್ದಂತೆ ದಲಿತ ಸಂಘಟನೆ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿದರು

ಈ ಸಂದರ್ಭದಲ್ಲಿ ಮಾತನಾಡಿದ ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಮಂಜುನಾಥ್ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಪರ್ವತಯ್ಯ ಇಂದಹ ಅಂಬೇಡ್ಕರ್ ಆಶಯದಂತೆ ಸಂವಿಧಾನದ ಉಳಿವಿಗಾಗಿ ದಿಟ್ಟ ಮಹಿಳೆಯರಿಗೆ ಇಂದು ನಾವು ಅಭಿನಂದನೆ ಸಲ್ಲಿಸುತ್ತೇವೆ.

ಸುಮಾರು ೩೦ ವರ್ಷ ಇತಿಹಾಸದಲ್ಲಿ ಕೋಳಿ ಅಂಗಡಿ ತೆರವುಗೊಳಿಸುವ ವಿಚಾರದಲ್ಲಿ ಕೇವಲ ಕಣ್ಣೊರೆಸುವ ನಾಟಕವಾಡುತ್ತಿದ್ದರು.ಆದರೆ ಶಾಸಕ ಹೆಚ್ ಕೆ ಸುರೇಶ್ ಹಾಗೂ ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ನೇತೃತ್ವದಲ್ಲಿ ಕೊಟ್ಟಮಾತಿನಂತೆ ಸಂಪೂರ್ಣ ವಾಗಿ ತೆರವುಗೊಳಿಸುವ ಮೂಲಕ ಬೀಗ ಮುದ್ರೆ ಹಾಕಿಸಿದ್ದಾರೆ.

ಇನ್ನು ಮುಂದೆ ಎಂತಹ ಪ್ರಭಾವಿ ವ್ಯಕ್ತಿಗಳೆ ಬಂದು ಅಂಗಡಿಗಳನ್ನು ತೆರಯಲು ಮುಂದಾದರೆ ಇಡೀ ತಾಲೂಕಿನ ದಲಿತ ಸಂಘಟನೆಗಳು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಾಕ್ಸ್ ನ್ಯೂಸ್ : ನಾವು ೨೦ ವರ್ಷಗಳಿಂದ ಇಲ್ಲಿ ಕೋಳಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇವೆ.ನಮಗೆ ಅನುಮತಿ ಇತ್ತು ಇದಕ್ಕೆ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ನಾವು ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸಿದ್ದೆವು ಈ ವಿಷಯ ಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ ನಮಗೆ ಬದಲಿ ವ್ಯವಸ್ಥೆ ಮಾಡಿಕೊಟ್ಟರೆ ನಾವು ಬೇರೆಡೆಗೆ ಹೋಗುತ್ತೇವೆ ಎಂದ ಕೋಳಿ ವ್ಯಾಪಾರಿ ಶಿವು ಹೇಳಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಹೇಶ್,ಶಂಬುಗನಹಳ್ಳಿ ಬಾಬು,ಕರವೇ ಅಧ್ಯಕ್ಷ ಚಂದ್ರುಶೇಖರ್,ಹರೀಶ್,ಎಂಜಿ ವೆಂಕಟೇಶ್, ಮಲ್ಲಿಕಾರ್ಜುನ, ಪುಟ್ಟರಾಜು,ಈಶ್ವರಪ್ರಸಾಸ್,ಮಲ್ಲಿಕಾರ್ಜುನ, ಮಂಜುನಾಥ್, ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *