
ಸಕಲೇಶಪುರ : ಖ್ಯಾತ ಚಲನಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿಕ್ಕಣ್ಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ಶಕ್ತಿ ದೇವರಾದ ಸ್ವಾಮಿ ಕೊರಗಜ್ಜ ಅವರ ಸನ್ನಿದಾನಕ್ಕೆ ಹಾಗೂ ದರ್ಮಸ್ಥಳಕ್ಕೆ ಬೇಟಿ ನೀಡಿ ಸಕಲೇಶಪುರ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಸಂದರ್ಭದಲ್ಲಿ
ಸಮಾಜ ಸೇವಕರೂ ಹಾಗೂ ಬಿಜೆಪಿ ಮುಖಂಡರಾದ ಬನ್ನಹಳ್ಳಿ ಪುನೀತ್ ಅವರು ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಅವರ ಆತ್ಮ ಸ್ನೇಹಿತರಾದ ಹಿನ್ನಲೆಯಲ್ಲಿ ಬನ್ನಹಳ್ಳಿಯ ಅವರ ನಿವಾಸಕ್ಕೆ ನಟ ದರ್ಶನ್ ಹಾಗೂ ಚಿಕ್ಕಣ್ಣ ಬೇಟಿ ನೀಡಿ ರಾಗಿ ಮುದ್ದೆ ಸೊಪ್ಪಿನ ಸಾರು ಸವಿಯುವ ಮೂಲಕ ಒಟ್ಟಿಗೆ ಫೋಟೋ ತೆಗೆಸಿಕೊಂಡು ಸಂತೋಷ ಹಂಚಿಕೊಂಡರು.



