ಲಯನ್ಸ್ ಕ್ಲಬ್ ಎಂದರೇ ಸಮಾಜದಲ್ಲಿ ಸೇವೆಯೆ ಜೀವಾಳ ಹುಲಿಕಲ್ ನಾಗರಾಜ್

ಹಾಸನ: ಲಯನ್ಸ್ ಕ್ಲಬ್ ಎಂದರೇ ಸಮಾಜದಲ್ಲಿ ಸೇವೆ ಮಾಡುವ ಜೀವಾಳ ಇದ್ದಂತೆ ಎಂದು ಲಯನ್ಸ್ ಹಿರಿಯ ಸದಸ್ಯ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷರಾದ ಹುಲಿಕಲ್ ನಾಗರಾಜ್ ತಿಳಿಸಿದರು.

ನಗರದ ಬಿ.ಎಂ. ರಸ್ತೆ ಬಳಿ, ಕುವೆಂಪು ರಸ್ತೆ ಬಳಿ ಇರುವ ಲಯನ್ಸ್ ಕ್ಲಬ್ ಸೆಂಟರ್ ನಲ್ಲಿ ಮಂಗಳವಾರದಂದು ಮದ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಹಾಸನ ಮತ್ತು ದೊಡ್ಡಬಳ್ಳಪುರದ ಟ್ವಿನ್ ಜಂಠಿಯಾಗಿ ನಡೆದ ಮೀಟಿಂಗ್ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಲಯನ್ಸ್ ಸೇವಾ ಸಂಸ್ಥೆಯಿಂದ ಹಲವಾರು ಸೇವಾ ಚಟುವಟಿಕೆಯನ್ನು ನಡೆಸಲಾಗುತ್ತಿದೆ. ಸೇವೆಯೇ ಜೀವಳ ಎಂಬುವುದೇ ನ್ಮ ಲಯಕ್ಸ್ ಕ್ಲಬ್ ನ ಆಸ್ತಿಯಾಗಿದೆ.

ಪ್ರತಿ ವರ್ಷ ಒಬ್ಬ ನೂತನ ಅಧ್ಯಕ್ಷರು ಆಯ್ಕೆ ಆಗುತ್ತಾರೆ. ಅವರು ಸೇವೆಯ ನಂಬಿ ಒಂದು ವರ್ಷಗಳ ಕಾಲ ತನ್ನಲ್ಲಿ ಸಮಯ ಇರಬೇಕು. ಕುಟುಂಬ ಬಿಡಬೇಕು. ಕನಿಷ್ಠ ೫ ರಿಂದ ೧೦ ಲಕ್ಷ ರೂಗಳನ್ನ ತನ್ನ ಜೇಬಿನಲ್ಲು ದುಡ್ಡನ್ನು ಇಟ್ಟುಕೊಂಡಿರಬೇಕು ಎಂದರು.

ಇಡೀ ಅಂತರಾಷ್ಟ್ರೀಯ ಮಟ್ಟದಲ್ಲಿ ಮೂರೆ ಕ್ಲಬ್ ಇರುವುದು, ಒಂದು ಲಯನ್ಸ್ ಕ್ಲಬ್, ಎರಡನೆಯದು ರೋಟರಿ ಕ್ಲಬ್, ಜೂನಿಯರ್ ಛೇಂಬರ್ (ಜೆಸಿ ಕ್ಲಬ್) ಇದೆ. ಲಯನ್ಸ್ ಕ್ಲಬ್ ನಲ್ಲಿ ಒಂದು ಒಗ್ಗಟ್ಟನ್ನು ಕಾಣಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಪುರದ ಲಯನ್ಸ್ ಕ್ಲಬ್ ನ ಅಧ್ಯಕ್ಷರು ಹಾಗೂ ನೂರಾರು ಜನ ಸದಸ್ಯರು ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಂಡರು.

ಇದೆ ವೇಳೆ ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ನ ಅಧ್ಯಕ್ಷ ಸಿ.ಎನ್. ರಾಜಶೇಖರ್, ಕಾರ್ಯದರ್ಶಿ ಎಸ್. ರಾಮಕಾಂತ್, ಖಜಾಂಚಿ ಕೆ.ಪಿ. ಲಕ್ಷ್ಮಿನಾರಾಯಣ, ಜಂಠಿ ಕಾರ್ಯದರ್ಶಿ ಕವಿತಾ ರಾಜಶೇಖರ್ ಹಾಗೂ ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಕೆ. ನಾಗೇಶ್, ಕಾರ್ಯದರ್ಶಿ ಸಿ.ಕೆ. ಕಿರಣ್ ಕುಮಾರ್, ಲಯನ್ಸ್ ಅಸೋಸಿಯೇಟ್ ಕ್ಯಾಬಿನೆಟ್ ಟ್ರಸರ್ ಹೆಚ್.ಆರ್. ಚಂದ್ರೇಗೌಡ ಇತರರು ಪಾಲ್ಗೊಂಡಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *