
ಬೇಲೂರು.ಮಾರ್ಚ.೧೩ “ಹೆಣ್ಣು ಭ್ರೂಣಹತ್ಯೆ ಸದೃಡ ಸಮಾಜಕ್ಕೆ ಮಾರಕ-ತೀವ್ರ
ಪ್ರಸಕ್ತ ಸಮಾಜದಲ್ಲಿ ಸ್ತ್ರೀ ಎಲ್ಲಾ ಕ್ಷೇತ್ರದಲ್ಲಿ ಕೂಡ ಅದ್ವಿತೀಯ ಸಾಧನೆಗೈಯುವ ಮೂಲಕ ಪ್ರಗತಿಯನ್ನು ಹೊಂದುತ್ತಿರುವ ಸಂದರ್ಭದಲ್ಲಿ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ ಎಂದು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ಆಶಾಕಿರಣ್ ಕಳವಳ ವ್ಯಕ್ತ ಪಡಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೇಲೂರು ಪಟ್ಟಣದ ಪುರಸಭಾ ಮಾಜಿ ಅಧ್ಯಕ್ಷೆ ಹಾಗೂ ಸಮಾಜಸೇವಕಿಯಾದ ಹೇಮಾವತಿಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಇತ್ತೀಚಿನ ದಿನದಲ್ಲಿ ಮಹಿಳೆ ತಾನು ದುಡಿಯುವ ಮೂಲಕ ಕುಟುಂಬವನ್ನು ಕಟ್ಟಲು ಮುಂದಾಗಿದ್ದಾಳೆ. ಅಲ್ಲದೆ ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಹುತೇಕ ಎಲ್ಲಾ ಕ್ಷೇತ್ರವನ್ನು ಅವರಿಸಿಕೊಂಡು ಬದುಕು ರೂಪಸಿಕೊಂಡಿದ್ದಾರೆ. ಅದರೂ ಮಹಿಳೆಯ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ನಡೆಯುತ್ತಿರುವುದು ಬೇಸರದ ಸಂಗತಿ,
ರಾಜಕೀಯ ಸ್ಥಾನ-ಮಾನದಿಂದ ಮಾತ್ರ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರುತ್ತದೆ. ಆದರೆ ಇದೇ ಮಾನದಂಡವಲ್ಲ, ಎಲ್ಲಾ ಕ್ಷೇತ್ರದಲ್ಲಿ ಕೂಡ ಸಮಾನತೆ ಬರಬೇಕಿದೆ ಆಗ ಮಾತ್ರ ನಿಜವಾದ ಮಹಿಳಾ ಸಬಲೀಕರಣವಾಗಬಹುದು.
ಈ ನಿಟ್ಟಿನಲ್ಲಿ ಬೇಲೂರಿನ ಹೇಮಾವತಿಮಂಜುನಾಥ ಅವರು ಈ ಹಿಂದೆ ಬೇಲೂರು ಪುರಸಭಾ ಅಧ್ಯಕ್ಷರಾಗಿ, ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ, ತಾಲ್ಲೂಕು ಕುರುಬ ಸಮಾಜದ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸೇವೆಯನ್ನು ಗಣನೀಯವಾಗಿ ಸಲ್ಲಿಸಿದ್ದಾರೆ.
ಇಂತವರನ್ನು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಗುರುತಿಸಿ ಅವರಿಗೆ ಅಭಿನಂದನೆ ಸಲ್ಲಿಸಿದ್ದು ನಿಜಕ್ಕೂ ಸಂತೋಷವಾಗಿದೆ ಮತ್ತು ಇವರ ಬದುಕು ಯುವ ಸಮುದಾಯಕ್ಕೆ ಮಾದರಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ತಾಲ್ಲೂಕು ಅಧ್ಯಕ್ಷೆ ಪ್ರತಿಮಾಮಯ್ಯ, ಕಾರ್ಯದರ್ಶಿ ಶ್ರೀಮತಿ ರಜನಿಗಿರೀಶ್, ಸದಸ್ಯರಾದ ಗೀತಾಧರ್ಮೇಶ್, ಉದ್ಯಮಿ ಬಿ.ಎನ್.ಸಂತೋಷ್, ಕಸಾಪ ಮಾಜಿ ಅಧ್ಯಕ್ಷ ಬಿ.ಎನ್.ಆನಂದ್, ಅಬಕಾರಿ ಇಲಾಖೆ ಅಧಿಕಾರಿ ಸುನೀಲ್, ಸೌಮ್ಯ ಆನಂದ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.
ಬಾಕ್ಸ್ ನ್ಯೂಸ್ ;- ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ನಮ್ಮ ಸೇವೆಯನ್ನು ಗುರುತಿಸಿ ಮನೆಗೆ ಬಂದು ಸನ್ಮಾನಿಸಿದ್ದು ನಿಜಕ್ಕೂ ಸಂತೋಷ ತಂದಿದೆ. ಮುಂದಿನ ದಿನದಲ್ಲಿ ಈ ವೇದಿಕೆ ಸಾಮಾಜಿಕ ಮತ್ತು ಜನಪರವಾದ ಕೆಲಸಗಳ ಮೂಲಕ ಉತ್ತಮ ಕೆಲಸ ಮಾಡಲಿ ಎಂದು ಸಮಾಜಸೇವಕಿ ಹೇಮಾವತಿ ಮಂಜುನಾಥ್ ಹೇಳಿದರು.
