ಚನ್ನರಾಯಪಟ್ಟಣ : ತಾಲೂಕು ದಂಡಿಗನಹಳ್ಳಿ ಹೋಬಳಿ ಆಲಗೊಂಡನಹಳ್ಳಿ ಏತ ನೀರಾವರಿ ಬಳಿ ನೂರಾರು ಕಾರ್ಯಕರ್ತರು ಸೇರಿ ಬೃಹತ್ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರನ್ನು ಉದ್ದೇಶಿಸಿ ಜೆಡಿಎಸ್ ಮುಖಂಡ ನೆಟ್ಟೆಕೆರೆ ನಾಗರಾಜ್ ಮಾತನಾಡಿ ಹಾಸನ ಜಿಲ್ಲೆಗೆ ರೈತರಿಗೆ ಕುಡಿಯಲು ನೀರಿಲ್ಲ ಇಂಥಹ ಬೇಸಿಗೆ ಸಮಯದಲ್ಲಿ ನಮ್ಮ ಜಿಲ್ಲೆಗೆ ನೀರನ್ನು ನೀಡದೆ ತುಮಕೂರು ಜಿಲ್ಲೆಗೆ ನೀರನ್ನು ಹರಿಸುತ್ತಿರುವುದು ಹಾಸನ ಜಿಲ್ಲೆಯ ರೈತರಿಗೆ ಮಾಡುತ್ತಿರುವ ದ್ರೋಹವಾಗಿದೆ

ಈ ಕೂಡಲೇ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಧ್ಯಪ್ರವೇಶ ಮಾಡಿ ರಾಜಣ್ಣನವರಿಗೆ ಸೂಕ್ತ ಸಲಹೆ ನೀಡಿ ನೀರನ್ನು ಹರಿಸುತ್ತಿರುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.

ಹಾಸನ ಜಿಲ್ಲಾ ಮಂತ್ರಿ ರಾಜಣ್ಣನವರ ಉದ್ದಟತನ ತುಂಬಾ ಖಂಡನೀಯ ಎಂದರು. ಮಾಜಿ ಮಂತ್ರಿಗಳಾದ ಎಚ್ ಡಿ ರೇವಣ್ಣನವರ 25 ವರ್ಷಗಳ ಹೋರಾಟದ ಫಲದಿಂದ ದಂಡಿಗನಹಳ್ಳಿ ಹೋಬಳಿಗೆ ಕೆರೆಗಳನ್ನು ತುಂಬಿಸಲು ಆಲಗೊಂಡನಹಳ್ಳಿಯ ನೀರಾವರಿಯನ್ನು ನಿರ್ಮಾಣ ಮಾಡಿದರು ,ಆದರೆ ದಂಡಿಗನಹಳ್ಳಿ ಹೋಬಳಿಯ 36 ಕೆರೆಗಳು ಬೇಸಿಗೆಯಲ್ಲಿ ಖಾಲಿ ಹಾಗಿದ್ದರೆ ಸಹ ಇದುವರೆಗೂ ನಮ್ಮ ಜಿಲ್ಲೆಯ ಕೆರೆಗಳನ್ನು ತುಂಬಿಸದೆ ಏಕಾಏಕಿ ತುಮಕೂರಿಗೆ ನೀರು ಬಿಟ್ಟಿರುವುದು ಈ ಜಿಲ್ಲೆಯ ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಖಂಡಿಸಿದರು.

ಇದೇ ಸಂದರ್ಭದಲ್ಲಿ ನೆಟ್ಟಕೆರೆನಾಗರಾಜ್, ದೊಡ್ಡ ಮತ್ತಿಗಟ್ಟ ಮಂಜಣ್ಣ, ಚಿಕ್ಕಮತ್ತಿಘಟ್ಟ ಚಂದ್ರಣ್ಣ, ಗ್ಯಾರೆಹಳ್ಳಿ ರವೀಶ್, ತರಬೇನಹಳ್ಳಿ ನಂಜುಂಡೇಗೌಡ್ರು, ವಾರನಹಳ್ಳಿ ರಂಗಸ್ವಾಮಿ, ಹೋನ್ನ ಶೆಟ್ಟಿಹಳ್ಳಿ ಪುಟ್ಟಸ್ವಾಮಿಗೌಡ, ಕರೆಡೆವು ಸತೀಶ್, ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *