ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಹಣ ಮೀಸಲಿಟ್ಟು ಕ್ರಮ ಕೈಗೊಳ್ಳಿ

ಬೇಲೂರು: ಇತ್ತೀಚಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯಲ್ಲಿಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಇದನ್ನು ನಿವಾರಿಸುವುದಕ್ಕಾಗಿ ಹೆಚ್ಚಿನ ಹಣಮೀಸಲಿಟ್ಟು ನೀರು ಕೊಡಲು ಕ್ರಮ ಕೈಗೊಳ್ಳಿ ಎಂದು ಪುರಸಭೆ ಸದಸ್ಯ ಶಾಂತಕುಮಾ‌ರ್ ತಿಳಿಸಿದರು.

ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಬೇಸಿಗೆ ಪ್ರಾರಂಭದಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ನೀರು ಸರಭರಾಜು ಮಾಡುವವರ ಜತೆಗೆ ಜನರು ಜಗಳವಾಡುತ್ತಿದ್ದಾರೆ. ಆದ್ದರಿಂದ ಎಲ್ಲ ಸಿಬ್ಬಂದಿ ಎಚ್ಚರ ವಹಿಸಿ ಕೆಲಸ ಮಾಡಬೇಕಿದೆ.

ಇಲ್ಲದಿದ್ದರೆ ಜನರು ನಮ್ಮನ್ನು ಸೇರಿದಂತೆ ಅಧಿಕಾರಿಗಳ ವಿರುದ್ಧ ತಿರುಗಿ ಬೀಳುತ್ತಾರೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನೀರಿನ ಟ್ಯಾಂಕ್ ಹಾಗೂ ತುರ್ತು ಸಂದಭಕ್ಕಾಗಿ ಪೈಪ್ ಗಳನ್ನು ಸಿದ್ಧಾವಾಗಿಟ್ಟು ಕೊಳ್ಳಬೇಕಿದೆ. ಈಗಾಗಲೇ ಬೇಲೂರು ಪಟ್ಟಣ್ ಜನತೆಗೆ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಆದ್ದರಿಂದ ಪುರಸಭೆಯಿಂದ ಎಲ್ಲ ಸಿದ್ಧತೆ ಕೈಗೊಳ್ಳಬೇಕಿದೆ.

ಜತೆಗೆ ಪಟ್ಟಣದಲ್ಲಿ ಕುಡಿಯುವ ನೀರನ್ನು ಯತೆಚ್ಚವಾಗಿ ಪೋಲಾಗುತ್ತಿದೆ. ಈ ಪೋಲಾಗುತ್ತಿರುವ ನೀರನ್ನು ಉಳಿಸಲು ಸಿಬ್ಬಂದಿ ಕ್ರಮಕ್ಕೆ ಮುಂದಾಗ ಬೇಕಿದೆ. ಅಲ್ಲದೆ ಕಳೆದ ಮೂರು ದಿನಗಳಿಂದ ವಿದ್ಯುತ್ ತೆಗೆಯುತ್ತಿರುವುದರಿಂದ ಮೂರು ದಿನಗಳಿಂದಲೂ ನೀರಿಗೆ ಸಮಸ್ಯೆಯಾಗಿದೆ. ಆದ್ದರಿಂದ 23 ವಾರ್ಡಿನ ಜನರಿಗೆ ಕುಡಿಯುವ ನೀರು ಕೊಡುವುದಕ್ಕಾಗಿ ಕ್ರಿಯಾ ಯೋಜನೆ ಮಾಡಿಕೊಂಡು ಸಿದ್ಧತೆ ಕೈಗೊಳ್ಳಬೇಕಿದೆ. ಹಾಗೂ ಯಗಚಿ ಜಲಾಶಯದಿಂದ ನೀರನ್ನು ತೆಗೆದುಕೊಂಡು ಇದರ ಸದೂಪಯೋಗ ಪಡಿಸಿಕೊಳ್ಳಬೇಕಿದೆ.

ಇದರೊಂದಿಗೆ ಎಲ್ಲೆಲ್ಲಿ ನೀರಿನ ಪೈಪ್‌ಗಳ ಸಮಸ್ಯೆ ಇದೆಯೋ ಅಲ್ಲಿ ತಕ್ಷಣ ಕೆಲಸ ಮಾಡಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಇದನ್ನು ನಿರ್ಲಕ್ಷಿಸಿದರೆ ಜನರು ಅಧಿಕಾರಿಗಳು ಸೇರಿದಂತೆ ನಮ್ಮನ್ನೂ ಸಹ ಬೈಯ್ಯುತ್ತಾರೆ. ಆದ್ದರಿಂದ ತುರ್ತು ಸಮಸ್ಯೆಗಳನ್ನು ಬೇಗ ನಿವಾರಿಸಿದರೆ ಪುರಸಭೆಗೆ ಉತ್ತಮ ಹೆಸರು ಬರುತ್ತದೆ ಎಂದರು.

ಸದಸ್ಯ ಜಗಧೀಶ್ ಮಾತನಾಡಿ, ಈ ಹಿಂದೆಯೇ ಅಂಬೇಡ್ಕರ್ ಭವನದ ಸಮೀಪವಿರುವ ಕೋಳಿ ಅಂಗಡಿಗಳ ತೆರವಿಗೆ ಸಭೆಯಲ್ಲಿ ಅನುಮೋದನೆ ದೊರೆತಿದ್ದರೂ ಕೋಳಿ ಅಂಗಡಿಗಳನ್ನು ತೆರವು ಮಾಡದೆ ಅವರಿಗೆ ಪುನಃ ಅಗ್ರಿಮೆಂಟ್ ಮಾಡಲು ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ, ಅಲ್ಲಿ ಕೋಳಿ ಅಂಗಡಿ ವ್ಯಾಪಾರಕ್ಕೆ ಅವಕಾಶ ಕೊಡದೆ ತೆರವು ಮಾಡಬೇಕು ಎಂದು ಒತ್ತಾಯಿಸಿದರು. ಮತ್ತು ರಸ್ತೆ ಬದಿಯ ಫುಟ್ಬಾತ್ ಅನ್ನು ವಸ್ತೂರಿ ಮಾಡಿಕೊಂಡಿರುವ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಟಾರ್ಪಲ್ ಗಳನ್ನು ಈ ಸಂದರ್ಭದಲ್ಲಿ ಮನವಿ ಮಾಡಿದರು

ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ಮಾತನಾಡಿ, ಈಗಿನ ಸಂದರ್ಭದಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಿ ಕೆಲಸಮಾಡಿಸಲಾಗುವುದು. ಅಲ್ಲದೆ ಸಾರ್ವಜನಿಕರೂ ಸಹ ನೀರು ಪೋಲಾಗದಂತೆ ನಲ್ಲಿಗಳಿಗೆ ಟ್ಯಾಪ್‌ಗಳನ್ನು ಅಳವಡಿಸಿಕೊಂಡು ನೀರನ್ನು ಉಳಿಸಿ ಬಳಸುವ ಕೆಲಸ ಮಾಡಬೇಕಿದೆ.

ನಮ್ಮ ಸಿಬ್ಬಂದಿ ನೀರು ಎಲ್ಲಿಯ ಪೋಲಾಗದಂತೆ ಎಚ್ಚರ ವಹಿಸಬೇಕು. ಇದರೊಂದಿಗೆ ಪಟ್ಟಣದ ಜನರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಮತ್ತು ಕೋಳಿ ಅಂಗಡಿಗಳನ್ನು ತೆರವುಗೊಳಿಸುವಂತೆ ಎಸ್ಸಿ-ಎಸ್ಟಿ ಹಿತರಕ್ಷಣಾ ಸಭೆಯಲ್ಲಿ ದಲಿತ ಮುಖಂಡರು ಹಾಗೂ ಶಾಸಕ ಎಚ್.ಕೆ.ಸುರೇಶ್, ಒತ್ತಾಯಿಸಿದ್ದಾರೆ. ನಾವು ಸಭೆಯಲ್ಲಿ ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ತೆರವು ಮಾಡುತ್ತೇವೆ ಎಂದಿದ್ದೇವೆ ಅದರಂತೆ ನಡೆದುಕೊಳ್ಳುತ್ತೇವೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಇಂದು ಮಾತನಾಡಿ, ಕುಡಿಯುವ ನೀರಿಗೆ ಎಲ್ಲೆಲ್ಲಿ ಸಮಸ್ಯೆ ಇದೆ ಎಂಬುದನ್ನು ತಿಳಿಯಲು ಖುದ್ದಾಗಿ ಭೇಟಿನೀಡಿ ಕೆಲಸ ಮಾಡಿಸಲಾಗುವುದು. ಮತ್ತು ವಾರ್ಡ್ಗಳಲ್ಲಿ ಏನಾದರೂ ಸಮಸ್ಯೆಯಾದರೆ ಸದಸ್ಯರು ಗಮನಕ್ಕೆ ತಂದರೆ ಕೆಲಸ ಮಾಡಿಸಲಾಗುವುದು ಎಂದರು.

ಮುಂದಿನ ತಿಂಗಳು ನಡೆಯುವ ರಥೋತ್ಸವಕ್ಕೆ ಎಲ್ಲ ರೀತಿಯ ಪೂರ್ವ ಸಿದ್ಧತೆಯನ್ನು ಯಾವುದೇ ರೀತಿಯ ತೊಂದರೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ರಸ್ತೆ ಬದಿಯಲ್ಲಿ ಯಾರೇ ಫುಟ್ಪಾತವಾಗಿ ಮಾಡಿಕೊಂಡಿದ್ದರು ಮುಲಾಜಿಲ್ಲದೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸದಸ್ಯ ಬಿ.ಗಿರೀಶ್ ಮಾತನಾಡಿ, ಹೊಳೆ ಬೀದಿಯಲ್ಲಿ ಮತ್ತು ಜೆಪಿ ನಗರದ ಮುಖ್ಯ ರಸ್ತೆಯಲ್ಲಿ ಒಳಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ವಿದ್ಯಾರ್ಥಿಗಳು ಇದನ್ನು ತುಳಿದುಕೊಂಡೇ ಹೋಗುವಂತ್ತಾಗಿದೆ. ದುರಸ್ತಿ ಮಾಡಿಸಿ ಎಂದು ಸಿಬ್ಬಂದಿ ಹೇಳಿದರು ಸಹ ಮಾತು ಕೇಳುತ್ತಿಲ್ಲ. ತುರ್ತಾಗಿ ಕೆಲಸ ಮಾಡಿಸಿದರೆ ಅನುಕೂಲವಾಗುತ್ತದೆ ಎಂದರು.

ಸದಸ್ಯ ಫಯಾಜ್ ಮಾತನಾಡಿ. 13ನೇ ವಾರ್ಡಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಜತೆಗೆ ಜನರು ವಾಸಿಸುವ ಸ್ಥಳದಲ್ಲಿ ವಿದ್ಯುತ್ ಕಂಬದಲ್ಲಿನ ತಂತಿಗಳು ಕೈಗೆಟುಜುವಂತ್ತಿದ್ದು ಅದರ ದುರಸ್ಥಿಗೆ ಮುಂದಾಗಬೇಕಿದೆ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *