
ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಅಭಿನಂದನೆ
ಹಾಸನ: ಸಕಲೇಶಪುರ ತಾಲ್ಲೂಕು ಹೆತ್ತೂರಿನಲ್ಲಿ ನಡೆಯುವ ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎನ್. ಶೈಲಜಾ ಹಾಸನ್ ಅವರು ಆಯ್ಕೆಯಾಗಿವುದಕ್ಕೆ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿನಾಂಕ ೨೩-೩-೨೦೨೪ ರಂದು ಹಾಗೂ ೨೪-೩-೨೦೨೪ ರಂದು ನಡೆಯುವ ೨೨ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎನ್. ಶೈಲಜಾ ಹಾಸನ್ ಅವರು ಆಯ್ಕೆಯಾಗಿವುದಕ್ಕೆ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್ , ಹಾಸನ ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಹೆಚ್.ವಿ. ಅಶೋಕ್ ಗೌರವಾಧ್ಯಕ್ಷರಾದ ಎನ್. ಶಿವಪ್ಪ ಪರಮೇಶ್ವರಪ್ಪ ಬಿ.ಹೆಚ್. ಇತರರು ಉಪಸ್ಥಿತರಿದ್ದರು.
ವೀರಶೈವ ಲಿಂಗಾಯತ ಸಮಾಜದ ಸಾಹಿತಿಯಾದ ಶೈಲಜಾ ಹಾಸನ್ ರವರನ್ನು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ೨೨ನೇ ಸರ್ವಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹೆಚ್.ಎಲ್. ಮಲ್ಲೇಶಗೌಡರು ಹಾಗೂ ಜಿಲ್ಲಾ ಸಮಿತಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಹಾಸನ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್ ಮತ್ತು ಹೆಚ್.ವಿ. ಅಶೋಕ್, ಪರಮೇಶ್ವರಪ್ಪ, ಎಂ.ಆರ್. ಸಿ.ಎಮ್. ಲತಾ, ಅನಿತಾ ಯೋಗೀಶ್, ಎಂ.ಎಸ್. ಲೀಲಾ ಧರ್ಮಪ್ಪ ಧನ್ಯವಾದಗಳನ್ನು ತಿಳಿಸಿದ್ದಾರೆ.

