ಸಕಲೇಶಪುರ : ಪಟ್ಟಣದ ದಯಾಳು ಮಾತೆ ದೇವಾಲಯದ ಆವರಣದಲ್ಲಿರುವ ಚರ್ಚ್ ಫಾದರ್ ನಿವಾಸಕ್ಕೆ ಬೆಂಕಿ ಬಿದ್ದ ಪರಿಣಾಮ ಮನೆಯಲ್ಲಿದ್ದ ದಿವಾನ್ ಕಾಟ್, ಹಾಸಿಗೆ ಹಾಗೂ ಇನ್ನೂ ಅನೇಕ ಉಪಯುಕ್ತ ವಸ್ತುಗಳು ಬೆಂದು ಕರಕಲಾಗಿವೆ.

ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ಆಕಸ್ಮಿಕ ಬೆಂಕಿಯೋ ಪೋಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.

ಇಂದು ಸುಮಾರು ನಾಲ್ಕು ಘಂಟೆಯ ಸಮಯದಲ್ಲಿ ಲಕ್ಷ್ಮೀಪುರ ಬಡಾವಣೆಯ ದಯಾಳು ಮಾತೆ ದೇವಾಲಯದ ಆವರಣದಲ್ಲಿರುವ ಚರ್ಚ್ ಫಾದರ್ ಅವರು ವಾಸಿಸುವ ನಿವಾಸಕ್ಕೆ ಬೆಂಕಿ ಬಿದ್ದ ಪರಿಣಾಮ ಮನೆಯಲ್ಲಿದ್ದ ದಿವಾನ್ ಕಾಟ್, ಹಾಸಿಗೆ, ಬಟ್ಟೆಗಳು ಸೇರಿದಂತೆ ಇನ್ನು ಅನೇಕ ಉಪಯುಕ್ತ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಇದು ಆಕಸ್ಮಿವಾಗಿ ಬಿದ್ದ ಬೆಂಕಿಯೋ ಅಥವಾ ಯಾರಾದರು ಕಿಡಿಗೇಡಿಗಳ ಕೃತ್ಯವೋ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ.

ಈ ಸಂಧರ್ಭದಲ್ಲಿ ಅಗ್ನಿಶಮಾಕ ದಳದ ರಾಜು ಹಾಗೂ ಇತರ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಶ್ವಿಯಾದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *