
ಬೇಲೂರು : ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ, ತಾಲೂಕಿನಲ್ಲಿ ಒಟ್ಟು ೧,೯೯,೯೯೨ ಮತದಾರರು, ಬೇಲೂರು ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಲೋಕಸಭಾ ಚುನಾವಣಾ ಪೂರ್ವಭಾವಿ ಮಾಹಿತಿ ನೀಡುತ್ತಾ ಮಾತನಾಡಿದ ಅವರು
ಈಗಾಗಲೇ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ೧೬ ನೇ ತಾರೀಖಿನಿಂದ ಲೋಕಸಭಾ ಚುನಾವಣೆ ವೇಳಾಪಟ್ಟಿಯ ಮಾದರಿಯಂತೆ ನೀತಿ ಸಂಹಿತೆ ಜಾರಿಗೆ ತಂದಿದೆ.
ಅದರಂತೆ ತಾಲೂಕಿನಲ್ಲಿ ಒಟ್ಟು ೧,೯೯,೯೯೨ ಮತದಾರರಿದ್ದು, ಇನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಮಾರ್ಚ್ ೨೭ ರವರೆಗೆ ಸಮಯವಿದ್ದು ಅರ್ಹ ಮತದಾರರ ಪಟ್ಟಿಗೆ ಸೇರಲು ಅವಕಾಶವಿದೆ.
ಒಟ್ಟು ಪುರುಷರು ೧,೦೦೧೫೮ ಹಾಗೂ ಮಹಿಳೆಯರು ೯೯,೮೩೪ ಮತದಾರರಿದ್ದಾರೆ.ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೭೦ ಮತಗಟ್ಟೆಗಳಿದ್ದು ೬ ಹೋಬಳಿಗಳಲ್ಲಿ ಸೂಕ್ಷ್ಮ ೮೧ ಹಾಗೂ ಅತಿ ಸೂಕ್ಷ್ಮ ೧೮೯ ಕೇಂದ್ರಗಳನ್ನು ಗುರುತಿಸಲಾಗಿದೆ.
ಈ ಹಿಂದೆ ಮನೆಯಲ್ಲಿ ಮತದಾನ ಮಾಡಲು ೮೦ ವರ್ಷದವರಿಗೆ ಮಾತ್ರ ಮತದಾನ ಮಾಡಲು ಅವಕಾಶವಿತ್ತು ಆದರೆ ಅದು ಈಗ ೮೫ ವರ್ಷಗಳಿಗೆ ವಿಸ್ತರಿಸಲಾಗಿದೆ.
ಈ ಬಾರಿ18 ಹಾಗೂ 19 ವರ್ಷದ ಯುವ ಮತದಾರರು ಗಂಡು ೭೮೩ ಹಾಗೂ ಹೆಣ್ಣು೧೨೬೬ ಜನ ಮತದಾನ ಮಾಡಲಿದ್ದಾರೆ.
ಮತದಾನ ಮಾಡಲು ಅಸಾಧ್ಯವಾದಂತವರಿಗೆ ಅನಾರೋಗ್ಯ ಪೀಡಿತರು ಮತ್ತು ವಿಕಲಚೇತನರಿಗೆ ಮನೆಯಲ್ಲೇ ಫಾರಂ ೧೨ ಡಿ ಮೂಲಕ ನಾವು ಅವರಿಗೆ ಮತದಾನಕ್ಕೆ ವ್ಯವಸ್ಥೆ ಮಾಡಿದ್ದೇವೆ. ನಮ್ಮ ತಂಡ ಅವರ ಮನೆಗೆ ಭೇಟಿ ನೀಡಿ ಮತದಾರರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿ ಹಾಗೂ ಆದಷ್ಟು ಮತದಾನ ಮಾಡಲು ಉತ್ತೇಜನ ನೀಡುತ್ತೇವೆ.ಅದಲ್ಲದೆ ನೂತನ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು ಅದರಂತೆ ತಾಲೂಕಿನ ಚನ್ನಾಪುರ ,ಚೀಕನಹಳ್ಳಿ ಜಾವಗಲ್, ಮೂರು ಕಡೆ ಚೆಕ್ ಪೋಸ್ಟ್ ಅಳವಡಿಸಿದ್ದು ಬರುವಂತಹ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುವುದು.
ಯಾವುದೇ ದೂರು ಬಂದರೆ ನಮ್ಮಲ್ಲಿ ಒಟ್ಟು ೧೮ ತಂಡಗಳಿದ್ದು ಎಸ್,ಎಸ್,ಟಿ ಮೂರು,ಚೆಕ್ ಪೋಸ್ಟ್ ೯ ತಂಡ ವೀಡಿಯೋ ೨ ತಂಡ ನಿಯೋಜನೆ ಮಾಡಲಾಗಿದೆ. ಹಾಗೂ ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಅಳವಡಿಸಿದ್ದು ಇದರಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.
ಮತದಾನ ಪೆಟ್ಟಿಗೆ ಹಾಗೂ ಸ್ಟ್ರಾಂಗ್ ರೂಂ ವ್ಯವಸ್ಥೆಯನ್ನು ಬೇಲೂರಿನ ವೈಡಿಡಿ ಕಾಲೇಜಿನಲ್ಲಿ ಗುರ್ತಿಸಲಾಗಿದ್ದು ಸಿಬ್ಬಂದಿಗಳಿಗೆ ಮತಗಟ್ಟೆ ಬಗ್ಗೆ ತರಭೇತಿಯನ್ನು ನೀಡಲಾಗುತ್ತಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಗಿಸಿದರೆ ಸಾರ್ವಜನಿಕರು ಕಂಟ್ರೋಲ್ ರೂಂ ನಂಬರ್ 08177-230800 ಇದಕ್ಕೆ ಕರೆ ಮಾಡಬಹುದಾಗಿದೆ.ಚುನಾವಣಾ ಸಂಬಂಧಿತ ವೆಬ್ ಪೋರ್ಟಲ್ ಗಳ ನಿರ್ವಾಹಣೆಗಾಗಿ ತಾಂತ್ರಿಕ ತಂಡ ರಚಿಸಲಾಗಿದೆ.
ಇನ್ನು ಉಳಿದಂತೆ ಸಭೆ ಸಮಾರಂಭಗಳಿಗೆ ಚುನಾವಣೆಗೆ ಸಂಬಂಧಪಟ್ಟಂತೆ ಪ್ರಚಾರ ಅನುಮತಿ ಪಡೆಯಬೇಕು.
ತಾಲೂಕಿನ ೩೭ ಗ್ರಾಪಂಯಲ್ಲಿ ತಂಡ ಮಾಡಿದ್ದು ಅದರಲ್ಲಿ ಜಾವಗಲ್ ಕೂಡ ಸೇರಿದೆ.
ಯುವ ಮತದಾರರು ೩೦೪೭ ಜನರಿದ್ದು ಇನ್ನು ಸೇರದೆ ಇರುವವರು ತಿದ್ದುಪಡಿ ಮಾಡಿಸಲು ಅರ್ಹಮತದಾರರು ಸೇರಬಹುದು ಎಂದು ತಿಳಿಸಿದರು.

