
ಹಾಸನ: ರೈತರು ಬೆಳೆದ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಸರಕಾರ ಸೂಚಿಸಿದ್ದು, ಆದರೇ ಮೊದಲ ದಿನವೇ ವಿಘ್ನ ಎಂಬಂತೆ ಬೆಳಗಿನಿಂದ ಕಾದು ಕುಳಿತು ಮದ್ಯಾಹ್ನವಾದರೂ ಖರೀದಿ ಮಾಡದ ಖರೀದಿ ಕೇಂದ್ರದ ವಿರುದ್ಧ ರೈತರು ಆಕ್ರೋಶವ್ಯಕ್ತಪಡಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ನಗರದ ಎಪಿಎಂಸಿ ಆವರಣದಲ್ಲಿ ನಿರ್ಮಿಸಿರುವ ಸರಕಾರದ ರಾಗಿ ಖರೀದಿ ಕೇಂದ್ರದಲ್ಲಿ ರೈತರು ಬುಧವಾರದಂದು ಬೆಳಿಗಿನಿಂದಲೇ ತಮ್ಮ ವಾಹನದಲ್ಲಿ ರಾಗಿ ತುಂಬಿಕೊಂಡು ಬಂದಿದ್ದು, ಆದರೇ ಮದ್ಯಾಹ್ನವಾದರೂ ಖರೀದಿ ಮಾಡಲು ತಡವಾಗಿದ್ದರಿಂದ ರೈತರು ಸಿಟ್ಟಿಗೆದ್ದು, ಖರೀದಿ ಕೆಂದ್ರದ ವಿರುದ್ಧ ಸಿಡಿಮಿಡಿಗೊಂಡು ವಾಗ್ವಾದ ನಡೆಯಿತು.
ರೈತರು ತಂದ ರಾಗಿಯ ಎಲ್ಲಾ ಚೀಲಗಳ ಓಪನ್ ಮಾಡಿ ಅದನು ಜಾಲ್ಡ್ರಿಯಲ್ಲಿ ಜಾಲಿಸಿ ನಂತರ ತೂಕಕ್ಕೆ ಹಾಕಲಾಗುತಿತ್ತು. ಒಬ್ಬ ರೈತರ ರಾಗಿ ಖರೀದಿ ಮಾಡಲು ಹೆಚ್ಚಿನ ಸಮಯ ತೆಗೆದುಕೊಂಡಿದ್ದರಿಂದ ಬೆಳಗಿನಿಂದ ಬಿಸಿಲಿನಲ್ಲಿ ಕಾದಿದ್ದ ರೈತರು ಸಂಜೆ ವೇಳೆಗೆ ತಮ್ಮ ಆಕ್ರೋಶವ್ಯಕ್ತಪಡಿಸಿದ ಘಟನೆ ನಡೆಯಿತು.
ರಾಗಿ ತುಂಬಿದ ವಾಹನಗಳು ಸಾಲು ಸಾಲಾಗಿ ರೈತರು ನಿಲ್ಲಿಸಿದ್ದರು. ಒಂದು ಕ್ವಿಂಟಲ್ ರಾಗಿಗೆ ೩೮೪೬ ನಿಗಧಿ ಮಾಡಲಾಗಿದೆ.
ಇದೆ ವೇಳೆ ದೊಡ್ಡ ಬಾಗೇನಹಳ್ಳಿ ಗ್ರಾಮದ ರೈತ ಮಾಧ್ಯಮದೊಂದಿಗೆ ಮಾತನಾಡಿ, ಸರಕಾರವು ರೈತರ ರಾಗಿ ಖರೀದಿ ಮಾಡಲಿದೆ ಎಂದು ನಾವು ಬೆಳಿಗ್ಗೆ ೮ ಗಂಟೆಗೆ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರ ಸ್ಥಳಕ್ಕೆ ಬಂದವರು. ಆದರೇ ಮದ್ಯಾಹ್ನ ಮೂರುವರೆ ಸಮಯ ವಾದರೂ ನಮ್ಮ ರಾಗಿ ಖರೀದಿ ಮಾಡಿಲ್ಲ. ಆದರೇ ಒಂದೊಂದು ಮೂಟೆಯ ರಾಗಿ ಸುರಿದು ಜರಡಿ ಮಾಡುತ್ತಿದ್ದು, ನಾವು ರೈತರುಗಳು ಯಾರಾದರೂ ಮಣ್ಣು ಬೆರೆಸಿಕೊಂಡು ಬಂದಿದ್ದೇವಾ! ಊರಲ್ಲಿ ದನ ಕರುಗಳು ಬಿಟ್ಟು ಬಂದಿದ್ದೇವೆ. ಅದಕೆಕ ನೀರು ಕುಡಿಸಬೇಕು. ತಿಂಡಿ ಊಟ ಏನು ಮಾಡಿರುವುದಿಲ್ಲ. ಇಲ್ಲಿ ನೋಡಿದರೇ ಈ ರೀತಿ ಮಾಡಿ ನಮ್ಮ ಮೆಟ್ರೆ ಕುಯ್ಯುತ್ತಿದ್ದಾರೆ.
ಕಾಂಕ್ರೀಟ್ ಕಣ ಮಾಡಿಕೊಡಲಿ ಆಗ ಯಾವ ಮಣ್ಣು ಬರುವುದಿಲ್ಲ ರಾಗಿ, ಜೋಳದಲ್ಲಿ ಮಣ್ಣು ಬರುವುದಿಲ್ಲವೇ? ಎಂದರು.
ಇನ್ನು ಒಂದು ಚೀಲದಲ್ಲಿ ನಿಗಧಿಗಿಂತ ಒಂದೆರಡು ಕೇಜಿ ಹೆಚ್ಚಾಗಿಯೇ ರಾಗಿ ತುಂಬಿಕೊಂಡು ಬಂದಿದ್ದೇವೆ. ಆದರೇ ಈ ರೀತಿ ರೈತರನ್ನು ಕಾಯಿಸಬಾರದು. ಬ್ರೋಕರ್ ದು ಸೇರಿದಂತೆ ಎಲ್ಲರದು ಜಾಲ್ಡ್ರಿ ಮಾಡಿಕೊಂಡು ರಾಗಿ ಖರೀದಿ ಮಾಡುತ್ತಾರಾ.. ರೈತರದು ಮಾತ್ರ ಈ ರೀತಿ ಜರಡಿ ಮಾಡಿಕೊಳ್ಳುತ್ತಿರುವುದಾಗಿ ದೂರಿದರು.
ದನ ಕಕರುಗಳ ನೀರು ಕುಡಿಯುಸುವುದಕ್ಕೆ ಇವರನ್ನೆ ಕಳುಹಿಸಬೇಕು ಎಂದು ಆಕ್ರೋಶವ್ಯಕ್ತಪಡಿಸಿದರು.
ಹಾಸನ ತಾಲೂಕಿನ ರೈತರಾದ ಲೋಕೇಶ್, ಶೇಖರ್ ಶೆಟ್ಟಿ, ಪುಟ್ಟಸ್ವಾಮಿ ಗೌಡ ಇತರರು ಉಪಸ್ಥಿತರಿದ್ದರು.



