
ಸಕಲೇಶಪುರ :- ತಾಲೂಕಿನ ಹಾನುಬಾಳು ಹೋಬಳಿ ಬಾಚನಹಳ್ಳಿ ಗ್ರಾಮದ ಅವರೇಕಾಡು ಕಾಲೋನಿ ಕೇಶವ್ ಪೂಜಾರಿ (35) ಇಂದು ಸುಮಾರು 10.30 ಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಆತ್ಮಹತ್ಯೆಗೆ ನಿಖರ ಮಾಹಿತಿ ಪೊಲೀಸ್ ತನಿಖೆ ನಂತರ ತಿಳಿಯಬೇಕಾಗಿದೆ.
ಮೃತ ಕೇಶವ ಪೂಜಾರಿ ಗಾರೆ ಕೆಲಸ ಮಾಡುತ್ತಿದ್ದು ಇಬ್ಬರು ಹೆಣ್ಣು ಮಕ್ಕಳು, ತಾಯಿ, ಪತ್ನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
