ಬೇಲೂರು: ದುರಸ್ತಿಗೊಂಡು ಭಕ್ತರಿಗೆ ನೀರು ಕುಡಿಯಲು ಮುಕ್ತವಾದ ಶುದ್ದ ನೀರಿನ ಘಟಕ.

ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಹಿಂಬಾಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಶುದ್ದು ಕುಡಿಯುವ ನೀರು ಸಿಗದಂತಾಗಿತ್ತು ಇದರ ಬಗ್ಗೆ “ತಿಂಗಳು ಕಳೆದರೂ ದುರಸ್ಥಿ ಕಾಣದ ಕುಡಿಯುವ ನೀರಿನ ಘಟಕ. ಕಣ್ಮುಚ್ಚಿ ಕುಳಿತ ದೇಗುಲದ ಆಡಳಿತ ಮಂಡಳಿ.” ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ಇದರಿಂದ ಎಚ್ಚೆತ್ತ ದೇಗುಲ ಆಡಳಿತಾಧಿಕಾರಿಗಳು ನೀರಿನ ಘಟಕವನ್ನು ದುರಸ್ಥಿ ಮಾಡಿಸಿದ್ದಾರೆ.

ಬೇಲೂರು.ವಿಶ್ವ ವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಹಿಂಭಾಗ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಎರಡು ತಿಂಗಳಾಗಿದ್ದು ಕುಡಿಯುಲು ನೀರಿಲ್ಲದೇ ಭಕ್ತರು, ಪ್ರವಾಸಿಗರು ಹಾಗೂ ಬೇಲೂರಿನ ಜನರು ದೇಗುಲ ಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದರು.

ಈ ಬಗ್ಗೆ ಹಳೇಬೀಡು ಬೇಲೂರು ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೋಟೆ ಶ್ರೀನಿವಾಸ್, ಹಾಗೂ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಕುಮಾರ್ ನಾಯಕ್ ದೇವಾಲಯದ ಆಡಳಿತದವರ ಮೇಲೆ ಕಿಡಿಕಾರಿ ಆದಷ್ಷು ಬೇಗ ಇದನ್ನು ಸರಿಪಡಿಸಿ ಭಕ್ತಾಧಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದರು.

ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ|| ನಾರಾಯಣಸ್ವಾಮಿ ಮಾತನಾಡಿ ಮಿಷಿನರಿಗೆ ಏನೋ ತೊಂದರೆಯಾಗಿದೆ ಆದಷ್ಟು ಬೇಗ ದುರಸ್ತಿಮಾಡಿಸುತ್ತೇವೆ ಎಂದು ಹೇಳಿದ್ದರು.

ಈ ವರದಿ ಪತ್ರಿಕೆಯಲ್ಲಿ ಬಂದ ಬೆನ್ನಲೆ ಎಚ್ಚೆತ್ತ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯನ್ಮೂಖರಾಗಿ ದುರಸ್ತಿ ಮಾಡುವ ಮೆಕ್ಯಾನಿಕ್ ಕರೆಸಿ ಹಾಳಾಗಿದ್ದ ಸರ್ಕ್ಯೂಟ್ ಬೋರ್ಡ್ ಗಳನ್ನು ಸರಿಪಡಿಸಿ ನೀರು ಬರುವಂತೆ ಮಾಡಿದೆ.

ನಂತರ ಪತ್ರಿಕೆಯ ಜೊತೆ ಮಾತನಾಡಿದ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ|| ನಾರಾಯಣಸ್ವಾಮಿ, ಭಕ್ತಾಧಿಗಳ ಅನುಕೂಲಕ್ಕಾಗಿ ನೀರಿನ ಘಟಕವನ್ನು ನಿರ್ಮಿಸಲಾಗಿದ್ದು ಅದರಲ್ಲಿ ಪ್ರತ್ಯೇಕವಾಗಿ ಉಚಿತ ನೀರಿಗಾಗಿ ಹಾಗೂ 5 ರೂ ಕಾಯಿನಿನ ನೀರಿಗಾಗಿ ಎರಡು ನಲ್ಲಿ ಮಾಡಿಸಿದ್ದೇವು ನೀರು ನಿಧಾನವಾಗಿ ಬರುತ್ತದೆ ಎಂದು ಯಾರೋ ಒಡೆದು ಹಾಕಿದ್ದಾರೆ ಆದರಿಂದ ಈ ರೀತಿ ಆಗಿದೆ. ದಯವಿಟ್ಟು ಭಕ್ತಾಧಿಗಳು ಹಾಗೂ ಸಾರ್ವಜನಿಕರು ನೀರು ಪೋಲಾಗದಂತೆ ಹಾಗೂ ಮಿಷಿನರಿ ಹಾಳಾಗದಂತೆ ಕಾಪಾಡಿಕೊಳ್ಳಬೇಕು ಏಕೆಂದರೆ ಇದು ನಿಮ್ಮೆಲ್ಲರ ಆಸ್ತಿ ನಿಮಗಾಗೀಯೇ ಇರುವುದು ಇದರ ಸದೂಪಯೋಗ ಪಡೆದುಕೊಳ್ಳಿ ಎಂದು ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *