ತುಮಕೂರು: ಖಾಸಗಿ ಬಸ್​ನಲ್ಲಿ ನಿಗೂಢ ಸ್ಪೋಟವಾಗಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ತುಮಕೂರಿನಿಂದ ಕುಣಿಗಲ್​ ಕಡೆಗೆ ಹೋಗುತ್ತಿದ್ದಾಗ ಗೂಳೂರು ಸಮೀಪ ಗಣಪತಿ ಅನ್ನೋ ಬೋರ್ಡ್​ ಹೊಂದಿದ್ದ ಖಾಸಗಿ ಬಸ್​ನಲ್ಲಿ ಈ ಸ್ಫೋಟ ಆಗಿದ್ದು, ಭಾರೀ ದುರಂತ ತಪ್ಪಿದೆ.

ಸದ್ಯ ಸಿಕ್ಕಿರೋ ಮಾಹಿತಿ ಪ್ರಕಾರ ಟಾಯ್ಲೆಟ್​ಗೆ ಬಳಸೋ ಆ್ಯಸಿಡ್​ ಬಾಟಲ್​​​ ಸ್ಫೋಟಗೊಂಡಿದೆ. ಮಹಿಳೆ ಒಬ್ಬರು ತನ್ನೊಂದಿಗೆ ಆ್ಯಸಿಡ್​ ಬಾಟಲ್​ ಇಟ್ಟುಕೊಂಡು ಪ್ರಯಾಣ ಮಾಡುತ್ತಿದ್ದರು. ಇದೇ ಬಾಟಲ್​ ದಿಢೀರ್​ ಸ್ಫೋಟಗೊಂಡಿದ್ದು, ಒಂದು ಕ್ಷಣ ಬಸ್​ನಲ್ಲಿದ್ದ ಎಲ್ಲಾ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಆ್ಯಸಿಡ್​ ಒತ್ತಡ ಹೆಚ್ಚಾಗಿ ಬಾಟಲ್​ ಸ್ಫೋಟಗೊಂಡ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಇನ್ನು, ಸ್ಥಳಕ್ಕೆ ಭೇಟಿ ನೀಡಿದ್ದ ತುಮಕೂರು ಗ್ರಾಮಾಂತರ ಪೊಲೀಸ್ರು ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಹೊನ್ನುಡಿಕೆ ಹ್ಯಾಂಡ್​ ಪೋಸ್ಟ್​ನಿಂದ ಬಸ್​​ನಲ್ಲಿ ಬರುತ್ತಿದ್ದಳು ಎಂದು ತಿಳಿದು ಬಂದಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *