ಬೇಲೂರು : ತಾಲ್ಲೂಕ್ಕಿನ ಚಿನ್ನೇನಹಳ್ಳಿಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಈ ಹಿಂದೆ ಉಪಾಧ್ಯಕ್ಷರಾಗಿ ಇದ್ದ ಜಯರಾಮ್ ರಾಜೀನಾಮೆ ನೀಡಿದ ಹಿನ್ನಲೆ ಇಂದು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು.

ಅದರಂತೆ ನಾಗೇಶ್ ನಾಮಪತ್ರ ಸಲ್ಲಿಸಿದ್ದು, ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಶಕು ಅವರು ನಾಗೇಶ್ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಆಯ್ಕೆಯಾದ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸಿ ನಂತರ ಮಾತನಾಡಿದ ಹಾಸನ ಜಿಲ್ಲಾ ಸಹಕಾರ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಹಾಲಿ ನಿರ್ದೇಶಕರಾದ ನಾಗರಾಜ್ ಮಾತನಾಡಿ ಸಹಕಾರ ಕ್ಷೇತ್ರ ಬೆಳೆಯಬೇಕಂದರೆ ಹಳ್ಳಿಗಳಲ್ಲಿ ಸಹಕಾರ ಸಂಘಗಳು ಆಡಳಿತ ನಡೆಸಬೇಕು, ಅಲ್ಲದೆ ಬ್ಯಾಂಕಿನ ಸಾಲಕ್ಕೆ ಸೀಮಿತಮಾಡಿಕೊಳ್ಳದೆ ಅದರ ಅಭಿವೃದ್ಧಿಗಾಗಿ ರೈತರು ಠೇವಣಿಗಳನ್ನು ಇಟ್ಟು ಅದರಲ್ಲಿ ಬರುವ ಹಣವನ್ನು ಸದುಪಯೋಗ ಮಾಡಿಕೊಳ್ಳಬೇಕು.

ಸಂಘದಲ್ಲಿರುವ ಸದಸ್ಯರು ನಿರ್ದೇಶಕರುಗಳ ಒಗ್ಗಟ್ಟು ಮುಖ್ಯ, ಸಣ್ಣ ರೈತರು ತಮ್ಮ ಜಮೀನಿಗೆ ಬೇಕಾಗುವ ಸಲಕರಣೆ ಪಡೆಯಲು ಬ್ಯಾಂಕಿನ ಜೊತೆ ವ್ಯವಹಾರ ಇಟ್ಟುಕೊಂಡಿದ್ದರೆ ಸಾಧ್ಯ ಆದ್ದರಿಂದ ಎಲ್ಲರೂ ಬ್ಯಾಂಕಿನ ಜೊತೆ ವ್ಯವಹಾರ ನಡೆಸುತ್ತಿರಬೇಕು ಅಲ್ಲದೆ ಬ್ಯಾಂಕಿಗೆ ನೀಡುವಂತಹ ಸಹಕಾರವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆದಾಗ ಮಾತ್ರ ಸಹಕಾರ ಕ್ಷೇತ್ರಗಳು ಉನ್ನತ ಸ್ಥಿತಿ ಇರಲು ಸಾಧ್ಯ ಎಂದರು.

ಚಿನ್ನೇನಹಳ್ಳಿ ಸಹಕಾರ ಬ್ಯಾಂಕಿನ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ ಸಂಘದಲ್ಲಿ ಯಾವುದೇ ಭೀನಾಭಿಪ್ರಾಯವಿಲ್ಲ, ಅಲ್ಲದೆ ಹೆಚ್ಚುವರಿಯಾಗಿ ಈ ವರ್ಷ ಸುಮಾರು 16 ಲಕ್ಷ ರೂಪಾಯಿಗಳ ಸಾಲ ನೀಡಿದ್ದು ಇದರಿಂದ ರೈತರು ಪದೇ ಪದೇ ಬ್ಯಾಂಕಿಗೆ ಬಂದು ಅವರ ಸಹಕಾರ ಮತ್ತು ಅವರ ಸಹಾಯಗಳು ನೀಡುತ್ತಿರುವ ಮೂಲಕ ಸಣ್ಣದಾಗಿ ಪ್ರಾರಂಭವಾದ ಈ ಬ್ಯಾಂಕು ಇಂದು ತಾಲೂಕಿನಲ್ಲಿ ಹೆಚ್ಚು ಹೆಸರುವಾಸಿಯಾಗುತ್ತಿದೆ ಇದಕ್ಕೆ ಎಲ್ಲಾ ನಿರ್ದೇಶಕರು, ಸದಸ್ಯರು ಒಗ್ಗೂಡಿ ಕೆಲಸವನ್ನು ಮಾಡುತ್ತಿದ್ದಾರೆ, ಬ್ಯಾಂಕಿನ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಮುಖ್ಯ, ರೈತರ ಏಳ್ಗೆಗಾಗಿ ಸಂಘದ ಸದಸ್ಯರು ಪಾರದರ್ಶಕವಾಗಿ ಕೆಲಸ ಮಾಡಿದರೆ ಮಾತ್ರ ಬ್ಯಾಂಕಿನ ಅಭಿವೃದ್ಧಿ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಚಿನ್ನೇನಹಳ್ಳಿ ಸಹಕಾರ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಸಿ ಹೆಚ್ ಮಹೇಶ್, ಸದಸ್ಯರಾದ ಜಯರಾಮ್, , ಬ್ಯಾಂಕಿನ ನಿರ್ದೇಶಕರಾದ ರಾಜು, ಸುಮಾ, ನಾಗರಾಜ್, ಪ್ರಭು, ಮದು, ಶಾಲಿನಿ ಮುಖಂಡರುಗಳಾದ ಲೋಕೇಗೌಡ ಮಲ್ಲೇಶ್ ಗೌಡ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *