
ಬೇಲೂರು : ಪಟ್ಟಣದ ಹೊಸನಗರ ತಿರುವಿನಲ್ಲಿ ಸ್ಯಾಂಟ್ರೊ ಕಾರು ಹಾಗೂ ಮಾರುತಿ ಶಿಫ್ಟ್ ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ತೀವ್ರತರವಾದ ಪೆಟ್ಟು ಬಿದ್ದಿದ್ದು .ಅದರಲ್ಲಿ ಒಬ್ಬ ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಾಗ ಮಾರ್ಗಮದ್ಯದಲ್ಲೆ ಅಸುನೀಗಿದ್ದಾರೆ
ಸ್ಯಾಂಟ್ರೋ ಕಾರ್ ಹಾಸನಕ್ಕೆ ಹೋಗುತ್ತಿದ್ದು ಶಿಪ್ಟ್ ಕಾರ್ ಹಾಸನದಿಂದ ಬೇಲೂರಿಗೆ ಬರುವಾಗ ಪಟ್ಟಣದ ಹೊಸನಗರ ತಿರುವಿನಲ್ಲಿ ಚಾಲಕರ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡಿದ್ದ ಬೇಲೂರು ತಾಲೂಕು ಐರವಳ್ಳಿ ಗ್ರಾಮದ ಮಲ್ಲೇಶ್ ಎಂಬುವ ಮಗ ಮನೋಜ್( ೨೬) ವರ್ಷ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮದ್ಯದಲ್ಲೆ ಅಸುನೀಗಿದ್ದು ಮತ್ತೊಂದು ಕಾರಿನ ಚಾಲಕ ಕಿಶನ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು
ಬೇಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರತಿ ತಿಂಗಳು ಈ ರಸ್ತೆಯಲ್ಲಿ ವಾಹನ ಅಪಘಾತಗಳು ಸಂಭವಿಸಿ ಸಾವನೋವುಗಳು ಹೆಚ್ಚಾಗುತ್ತಿದ್ದು ಕೂಡಲೇ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು



