ಕಾಡಾನೆ ದಾಳಿಗೆ ಟಿಂಬರ್ ಕಾರ್ಮಿಕ ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವರ್ತೆಗುಂಡಿಯಲ್ಲಿ ನಡೆದಿದೆ.

ತೋಟಕ್ಕೆ ಆನೆ ಬಂದಿದೆ ಎಂದು ಓಡಿಸಲು ಹೋದ ಟಿಂಬರ್ ಕಾರ್ಮಿಕ ಅಕ್ಬರ್ (36) ಎಂಬುವವರು ಮೃತಪಟ್ಟಿದ್ದಾರೆ.

ದಾಳಿಯಿಂದ ಕೆಳಕ್ಕೆ ಬಿದ್ದ ಅಕ್ಬರ್ ನ ಎದೆ ಮೇಲೆ ಆನೆ ಕಾಲಿಟ್ಟು, ದಂತದಿಂದ ತಿವಿದು ಭೀಕರವಾಗಿ ಹತ್ಯೆ ಮಾಡಿದೆ.

ಕಳೆದ 2 ದಿನದ ಹಿಂದೆ ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು.

ಈ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *