ಬೇಲೂರು : ರಾಜ್ಯದಿಂದ ಮತ್ತು ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಕಿತ್ತುಹೋಗಿದಾಗ ಮಾತ್ರ ದೇಶ ಉಳಿಯಲು ಸಾಧ್ಯ ಸಂಸದ ಪ್ರಜ್ವಲ್ ರೇವಣ್ಣ.

ರೈತಾಪಿ ವರ್ಗದ ಹೊಲ-ಗದ್ದೆಯಲ್ಲಿನ ಕಾಂಗ್ರೆಸ್ ಗಿಡದಿಂದ ಬೆಳೆಗೆ ಹಾನಿಯಾಗುತ್ತದೆ ಎಂದು ರೈತರು ಕಾಂಗ್ರೆಸ್ ಗಿಡ ಕಿತ್ತು ಹಾಕಿದಂತೆ, ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದಿಂದ ಮತ್ತು ದೇಶದಿಂದ ಕಿತ್ತು ಬಗೆಯಲು ಕಾರ್ಯಕರ್ತರು ಸಂಕಲ್ಪ ಮಾಡಬೇಕಿದೆ ಎಂದು ಹಾಸನ ಲೋಕಸಭಾ ಸಂಸದ ಹಾಗೂ ಹಾಸನ ಜೆಡಿಎಸ್ ಬಿಜೆಪಿ ಮೈತ್ರಿ ಪ್ರಜ್ವಲ್‌ರೇವಣ್ಣ ಕರೆ ನಿಡಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿನ ಕಾಂಗ್ರೆಸ್ ಗ್ಯಾರೆಂಟಿ ಯೋಜನೆ ಮೂಲಕ ಲೋಕಸಭಾ ಚುನಾವಣೆ ಗೆಲ್ಲುವ ಅತಿಯಾದ ಆತ್ಮವಿಶ್ವಾಸವನ್ನು ಇಟ್ಟುಕೊಂಡಿದೆ. ಆದರೆ ಗ್ಯಾರೆಂಟಿ ಯೋಜನೆಗಳೇ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಲಿದೆ ಎಂದು ಭವಿಷ್ಯ ನುಡಿದ ಅವರು

ರಾಜ್ಯದಲ್ಲಿ ೨೮ ಕ್ಕೆ ೨೮ ಕ್ಷೇತ್ರ ಮೋದಿ ಸರ್ಕಾರ ರಚನೆಗೆ ಮುನ್ನುಡಿ ಬರೆಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೆಲ ಅಂತರೀಕ ವಿದ್ಯಾಮಾನದಿಂದ ಜೆಡಿಎಸ್ ಪಕ್ಷಕ್ಕೆ ಸೋಲು ಕಂಡಿದೆ. ಇದ್ದರಿಂದ ಯಾವುದೇ ಕಾರ್ಯಕರ್ತರು ಧೃತಿಗೇಡುವ ಮಾತಿಲ್ಲ, ಇದು ನನ್ನ ಚುನಾವಣೆಯಲ್ಲ, ದೇವೇಗೌಡರಿಗೆ ಕೊಡುಗೆ ನೀಡುವ ಹಿನ್ನಲೆಯಲ್ಲಿ ಕಾರ್ಯಕರ್ತರು ಶಕ್ತಿ ತುಂಬಿ ಮೊತ್ತೊಮ್ಮೆ ನನಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ರಾಜ್ಯದಲ್ಲಿನ ಸಿದ್ದರಾಮಯ್ಯನವರ ಸರ್ಕಾರಲ್ಲಿ ಸದ್ಯ ಭಿನ್ನಮತ ಹೆಚ್ಚಾಗಿದೆ, ಜೆಡಿಎಸ್ ಪಕ್ಷವನ್ನು ಕುಟುಂಬ ರಾಜಕಾರಣ ಎಂದು ಹೇಳುವ ಕಾಂಗ್ರೆಸ್ ಈ ಭಾರಿ ಲೋಕಸಭೆ ಚುನಾವಣೆಗೆ ಸಚಿವರ ಕುಟುಂಬದವರಿಗೆ ಮಣೆ ಹಾಕಿರುವ ಕ್ರಮಕ್ಕೆ ಉತ್ತರಿಸಬೇಕಿದೆ.

ಕಳೆದ ಒಂಬತ್ತು ತಿಂಗಳಲ್ಲಿ ಕಾಂಗ್ರೆಸ್ ರಾಜ್ಯಕ್ಕೆ ಯಾವ ಅಭಿವೃದ್ಧಿಯ ಕೊಡುಗೆ ನೀಡಿದ ಬಗ್ಗೆ ಜನತೆಯ ಮುಂದೆ ಶ್ವೇತಪತ್ರ ಹೊರಡಿಸಬೇಕಿದೆ. ಮೋದಿರವರ ಆಡಳಿತವನ್ನು ಇಡೀ ವಿಶ್ವವೇ ಗಮನಿಸುತ್ತಿದೆ ಎಂದ ಅವರು ಹಾಸನದ ಸಂಸದರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.

ರೈತರಿಗೆ ಬೇಸಿಗೆ ಸಂದರ್ಭದಲ್ಲಿ ಕರೆಂಟ್ ಕಣ್ಣು ಮುಚ್ಚಾಲೆಯಿಂದ ಕೃಷಿಕ ದಿಕ್ಕು ಕಾಣದ ಪರಿಸ್ಥಿತಿಯಲ್ಲಿದ್ದಾನೆ ಇಂತಹ ಭ್ರಷ್ಟ ಕಾಂಗ್ರೆಸ್ ತೊಲಗಿಸಲು ಜನರು ಮೈತ್ರಿ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದರು.

ಲೋಕಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ನಿಲ್ಲಲಿದೆ ಅಲ್ಲದೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣನವರ ಈ ಬಾರಿ ಗೆಲುವು ಶತಸಿದ್ಧ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ನಡಕ ಉಂಟಾಗಿದೆ ಯಾರು ಸಹ ವದಂತಿಗಳಿಗೆ ಕಿವಿಗೊಡದೆ ನಮ್ಮ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ಸಹ ಕೈಜೋಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಅಧ್ಯಕ್ಷರಾದ ಕೆ ಎಸ್ ಲಿಂಗೇಶ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಬಿ.ಡಿ.ಚಂದ್ರೇಗೌಡ, ಎಂ.ಎ.ನಾಗರಾಜ್, ಬಿ.ಎಂ.ದೊಡ್ಡವೀರೇಗೌಡ, ಜಿ.ಟಿ.ಇಂದಿರಾ, ಲತಾಮಂಜೇಶ್ವರಿ, ಸಿ.ಹೆಚ್.ಮಹೇಶ್, ಖಾದರ್, ಅದ್ದೂರಿ ಚೇತನ್ ಕುಮಾರ್,ಎಂಕೆಆರ್ ಸೋಮೇಶ್, ಮಹಾದೇವಣ್ಣ, ರವಿಕುಮಾರ್, ಕಮಲಚನ್ನಪ್ಪ, ಮಲ್ಲೇಗೌಡ,ಭಾರತಿ, ರಾಜು, ಮರಿಯಪ್ಪ, ಸತೀಶಗೌಡ,ನಾಗೇಶ್ ಯಾದವ್. ದಿಲೀಪ್ ಸೇರಿದಂತೆ ಪುರಸಭಾ ಸದಸ್ಯರುಗಳು ಇನ್ನು ಮುಂತಾದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *