
ನಾವು ತೊಂದರೆ ಕೊಟ್ಟರೆ ಕಾಡಾನೆಗಳು ದಾಂದಲೆ ಮಾಡುತ್ತದೆ
ಬೇಲೂರು : ತಾಲೂಕಿನ ಅರೇಹಳ್ಳಿ ಹೋಬಳಿಯ ಸುತ್ತಮುತ್ತಲಿನಲ್ಲಿ ಹೆಚ್ಚಾಗಿ ರಾತ್ರಿ ಹೊತ್ತು ಸಂಚರಿಸುತ್ತಿದ್ದ ಕಾಡಾನೆಗಳು ಈಗ ಬೆಳಗಿನ ವೇಳೆಯಲ್ಲೂ ಕಾಣಸಿಗುತ್ತದೆ.
ಕಾಡಾನೆಗಳು ಎಂದರೆ ಹಲವರು ಭಯ ಪಡುತ್ತಾರೆ ಆದರೆ ಇಲ್ಲೊಬ್ಬ ತೋಟದ ಕಾರ್ಮಿಕ ನಿರ್ಭೀತಿಯಿಂದ ಅವುಗಳ ಹತ್ತಿರದಲ್ಲೇ ಕೆಲಸ ಮಾಡುತ್ತಾರೆ.ಹೋಬಳಿಯ ಲಿಂಗಾಪುರ ಗ್ರಾಮದಿಂದ ಉದೇವಾರ ರಸ್ತೆಯಲ್ಲಿ ತೋಟಕ್ಕೆ ಹೋಗುವಾಗ ದಾರಿ ಮದ್ಯೆ ದಿನ ನಿತ್ಯ ನೊಡಬವುದು.
ಮೊದಲೆಲ್ಲ ರಾತ್ರಿ ಸಮಯದಲ್ಲಿ ಸಂಚಾರ ಮಾಡಿತ್ತಿದ್ದ ಕಾಡಾನೆಗಳು ಈಗ ಬೆಳಗಿನ ಸಮಯದಲ್ಲೂ ಕಾಣಸಿಗುತ್ತದೆ.ಅವು ಬಂದರೆ ಅವುಗಳ ಪಾಡಿಗೆ ಕೆಲವು ಆಹಾರಕ್ಕೆ ಯೋಗ್ಯವಾದ ಮರಗಳನ್ನು ಕೆಡವಿ ತಿಂದು ಅದರ ಪಾಡಿಗೆ ಅದು ಹೋಗುತ್ತದೆ.ನಾವು ನಮ್ಮ ಪಾಡಿಗೆ ನಮ್ಮ ಕೆಲಸ ಮಾಡುತ್ತೇವೆ, ಕೆಲಸ ಮಾಡುವಾಗ ಕಾಣಿಸಿಕೊಂಡರೆ ಅವುಗಳ ಪಾಡಿಗೆ ಬಿಟ್ಟು ದೂರದಲ್ಲಿ ನಮ್ಮ ಕೆಲಸ ಮುಂದುವರೆಸುತ್ತೇವೆ.
ನಮಗೆಲ್ಲ ದಿನ ನಿತ್ಯ ನೋಡಿ ನೋಡಿ ಅಭ್ಯಾಸವಾಗಿದೆ ಅದಕ್ಕೂ ನಮ್ಮ ನೋಡಿ ನೋಡಿ ಅಭ್ಯಾಸವಾಗಿದೆ.ಹಾಗಾಗಿ ಕೆಲವೊಂದು ಪುಂಡಾನೆಗಳನ್ನು ಹೊರತು ಪಡಿಸಿ ಉಳಿದ ಕಾಡಾನೆಗಳು ಅವುಗಳ ಪಾಡಿಗೆ ಆಹಾರ ತಿಂದು ವಾಪಸ್ಸು ಹೋಗುತ್ತದೆ.
ಕಾಫಿ ಗಿಡಗಳಿಗೆ ನೀರು ಸ್ಪಿಂಕ್ಲರ್ ಮಾಡುತ್ತಿದ್ದ ಸಮಯ ಒಂಟಿ ಕಾಡಾನೆ ಬಂದಿದೆ ಹಾಗಾಗಿ ಅ ಸ್ಥಳ ಬಿಟ್ಟು ಬೇರೆ ಸ್ಥಳದಲ್ಲಿ ನೀರು ಸ್ಪಿಂಕ್ಲರ್ ಮಾಡುತ್ತೇವೆ.ಪಾಪ ಅವುಗಳು ಹೊಟ್ಟೆಪಾಡಿಗಾಗಿ ಕಷ್ಟ ಪಡುತ್ತಿದೆ.ನಾವು ಅವುಗಳನ್ನು ಹೊಡಿಸಲು ಪ್ರಯತ್ನಪಟ್ಟರೆ ರೊಚ್ಚಿಗೆದ್ದು ಹೆಚ್ಚಿನ ದಾಂದಲೆ ಮಾಡುತ್ತದೆ ಎಂದು ತೋಟದ ಕಾರ್ಮಿಕ ತೌಸಿಫ್ ತಮ್ಮ ಸ್ವಂತ ಅನಿಸಿಕೆ ಹಂಚಿಕೊಂಡಿದ್ದಾರೆ.


