
ಸಕಲೇಶಪುರ : ತಾಲ್ಲೂಕಿನ ಮಠಸಾಗರದಲ್ಲಿ ಇರುವ ಕಾಫಿ ಮಂಡಳಿ ತೋಟದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದವರು ಕಾಫಿ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಫಿ ಗಿಡ ಕಸಿಯ ಪ್ರಾತ್ಯಾಕ್ಷಿಕ ಕಾರ್ಯಕ್ರಮ ಹಾಗೂ ಗಿಡ ಕಸಿ, ಮರಗಸಿ, ಹಾಗೂ ಮಣ್ಣಿನ ಸಂರಕ್ಷಣೆ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಿತ್ತು.
ಮಂಗಳವಾರ ಬೆಳಗ್ಗೆ 10.30 ಕ್ಕೆ ಕಾರ್ಯಕ್ರಮವನ್ನು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ಎಮ್ ಏನ್ ದಿನೇಶ್ ರವರು ಕಾಫಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಎ ಎಸ್ ಪರಮೇಶ್, ಕಾರ್ಯದರ್ಶಿ ಲೋಹಿತ್ ಕೌಡಳ್ಳಿ ವಿಚಾರ ಸಂಕಿರಣದ ಅಧ್ಯಕ್ಷ ಬಿ ಎಮ್ ಮೋಹನ್ ಕುಮಾರ್, ಕೆ ಜೆ ಫ್ ಅಧ್ಯಕ್ಷ dr ಹೆಚ್ ಟಿ ಮೋಹನ್ ಕುಮಾರ್, ಕಾಫಿ ಮಂಡಳಿ ಉಪ ನಿರ್ದೇಶಕ ಶಕ್ತಿ ಸಂಪನ್ಮೂಲ ವ್ಯಕ್ತಿ ಗಳಾದ ಕರಣ್ ಗೌತಳ್ಳಿ ಕಾಫಿ ಮಂಡಳಿಯ ಹಿರಿಯ ಸಂಪರ್ಕಧಿಕಾರಿ ಬಸವರಾಜ್ ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷರು ಖಜಾಂಚಿ ಹಾಗೂ ಸಹಕಾರ್ಯದರ್ಶಿಯವರು ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಕಾಫಿ ಮಂಡಳಿ ಅಧ್ಯಕ್ಷರು ಈ ಒಂದು ಪ್ರಾತ್ಯಾಕ್ಷಿಕ ಕಾರ್ಯಕ್ರಮ ಒಳ್ಳೆ ಯೋಜನೆ ಆಗಿದ್ದು ಇದರಿಂದ ರೈತರಿಗೆ ನೂರಕ್ಕೆ ನೂರು ಅನುಕೂಲವಾಗಲಿದೆ ಹಾಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿದ HDPA ತಂಡಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ , ಇಂತಹ ಕಾರ್ಯಕ್ರಮಗಳು ಇನ್ನು ಹೆಚ್ಚು ಹೆಚ್ಚು ನೆಡೆಯುವಂತೆ ಆಗಲಿ ಕಾಫಿ ಮಂಡಳಿ ನಿಮ್ಮೊಂದಿಗೆ ಇದೆ ಎಂದರು.
22 ಕ್ಕೂ ಹೆಚ್ಚು ಕಸಿಯಲ್ಲಿ ಕೌಶಲ್ಯ ಹೊಂದಿದವರಿಂದ ಸುಮಾರು 250 ಜನಕ್ಕೆ ಕಸಿ ಮಾಡುವುದನ್ನು ಹೇಳಿಕೊಟ್ಟರು.
ಮದ್ಯಾಹ್ನದ ತನಕ ಸುಮಾರು 250 ಬೆಳೆಗರಾರು, ಹಲವು ಮಹಿಳಾ ಬೆಳೆಗರಾರು ಸಕಲೇಶಪುರ ಕಸಬಾ, ಹೆತ್ತೂರು, ಯಸಳೂರು, ಅರೇಹಳ್ಳಿ, ಬೇಲೂರು, ಹಾನುಬಾಳು, ಅರಕಲಗೂಡು, ಬೆಳಗೊಡು, ಆಲೂರು ಹಾಗೂ ಚಿಕ್ಕ ಮಂಗಳೂರು, ಕಳಸ ಇನ್ನಿತರ ಬಾಗಗಳಿಂದ ರೈತರು ಭಾಗವಹಿಸಿದ್ದರು. ಮದ್ಯಾಹ್ನ ನೆಡೆದ ವಿಚಾರ ಸಂಕಿರಣದಲ್ಲಿ ಹಿರಿಯ ಹಾಗೂ ಪ್ರಗತಿಪರ ಬೆಳೆಗಾರರಾದ ಬಿ ಎಮ್ ಮೋಹನ ಕುಮಾರ್ ರವರು ಕಸಿ ಯನ್ನು ಮಾಡುವುದರಿಂದ ರೈತರಿಗೆ ಏನೆಲ್ಲಾ ಪ್ರಯೋಜನಗಳಿವೆ ಹಾಗೆ ಅರ್ಧ ಅಡಿ ಚಿಗ್ರು, ನೂಲು ರೆಕ್ಕೆ, ಗಂಡು ರೆಕ್ಕೆ, ಒಣ ಕಡ್ಡಿ, ಅಡ್ಡ ರೆಕ್ಕೆ ಗಳನ್ನು ಹೇಗೆ ಮತ್ತು ಏಕೆ ತಗಿಯೋದು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಹಾಗೆ ಗಿಡಗಳನ್ನು ಎಷ್ಟು ಅಡಿ ಮಟ್ಟಕ್ಕೆ ಬಿಡಬೇಕು, ಹಾಗೂ ನೆರಳನ್ನು ಹೇಗೆ ಕೊಡಬೇಕು, ತೋಟದಲ್ಲಿ ಯಾವ ಮರಗಳಿಂದ ಏನೆಲ್ಲಾ ಲಾಭ ಆಗಲಿದೆ ಎಂದು ತಿಳಿಸಿದರು. ಕೊಡಗಿನ ಕೆ ಕೆ ವಿಶ್ವನಾಥ್ ರವರು ಬೇಸಿಗೆ ಸಮಯದಲ್ಲಿ ನೀರನ್ನು ಹೇಗೆ, ಎಷ್ಟು ಸಮಯ ಕೊಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು ಪ್ರಗತಿಪರ ರೈತ ಯುವ ಉತ್ಸಾಹಿ ಕಿರಣ್ ಗೌತಳ್ಳಿ ಯವರು ವೃತ್ತಿಯಲ್ಲಿ ಸಾಫ್ಟ್ವೇವೆರ್ ಇಂಜಿನಿಯಾರ್ ಆದರೂ ಕೂಡಾ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ್ದೂ, ಕಾಫಿ ಹಾಗೂ ಕಾಳು ಮೆಣಸು ಬೆಳೆಯನ್ನು ಉತ್ತಮ ಲಾಭದಾಯಕ ಮಾಡಿಕೊಂಡಿದ್ದು, ಬೆಳೆಗಾರರ ಹಿತರಕ್ಷಣೆಗಾಗಿ ಬೆಂಗಳೂರಿನಿಂದ ಸಕಲೇಶಪುರಕ್ಕೆ ಬಂದು ಮಣ್ಣಿನ ಸಾರಾಂಶ ವನ್ನು ಹೇಗೆ ಕಾಪಾಡಿಕೊಳ್ಳಬೇಕು, ಗೊಬ್ಬರವನ್ನು ಯಾವ ಪ್ರಮಾಣದಲ್ಲಿ ಹೇಗೆ ಹಾಕಬೇಕು ಎಂಬುದುರ ಬಗ್ಗೆ ಉತ್ತಮ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಆಕಾಶ ವಾಣಿ ಹಾಸನ ದವರು ಭಾಗವಹಿಸಿದ್ದರು . ರೈತರಿಗೆ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದಿಂದ ಉತ್ತಮ ಮಾಹಿತಿ ನೀಡಿ ರೈತರು ತಮ್ಮ ತಮ್ಮ ಕೃಷಿಯಲ್ಲಿ ಲಾಭದಾಯಕ ಮಾಡುವಂತಾಗಲಿ ಎಂದು ಈ ಕಾರ್ಯಕ್ರಮ ಮಾಡಿರುವ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲಿಯೂ ಕೂಡಾ ಯಾವುದೇ ಲಾಭದ ಉದ್ದೇಶವಿಲ್ಲದೆ ರೈತ ಪರ ಕಾರ್ಯಕ್ರಮ ಮಾಡುವುದಾಗಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಗೌರವ ಕಾರ್ಯದರ್ಶಿ ಲೋಹಿತ್ ಕೌಡಳ್ಳಿ ತಿಳಿಸಿದರು.



