
ಸಕಲೇಶಪುರ : ತಾಲೂಕು ಯಸಳೂರು ಗ್ರಾಮದ ಶ್ರೀ ತೆಂಕಲಗೂಡು ಬೃಹನ್ಮಠದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 108ನೇ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾಪದರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಾಗ್ಭೂಷಣ ರತ್ನ ಲಿಂ. ಶ್ರೀ ಷ|| ಬ್ರ|| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಮೂರನೇ ವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ಯ ಶ್ರೀ ಷ|| ಬ್ರ|| ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಸಂಕಲ್ಪದಂತೆ ದಿನಾಂಕ 28-03-2024 ಮತ್ತು 29-03-2024 ರಂದು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಒಂದು ಕಾರ್ಯಕ್ರಮ ನಿಮಿತ್ತ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಇಂದು ಹಾಸನದ ಹಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಂತೋಷ್ ಎಸ್.ವಿ ರವರಿಗೆ ಆಹ್ವಾನ ಪತ್ರ ನೀಡಿದರು
ಈ ಒಂದು ಸಂಧರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ಲೋಕೇಶ್ ನಿವೃತ್ತ ಬ್ಯಾಂಕ್ ನೌಕರರಾದ ಪರಮಶಿವಯ್ಯನವರು ನಿಟ್ಟೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಂದ್ರಶೇಖರ್ ಹಾಗೂ ವೀರಶೈವ ಸಮಾಜದ ಖಂಡರುಗಳಾದ ನಟರಾಜ್, ಶೋಬನ್ ಬಾಬು ಅವಿನಾಶ್ ಜಿ.ಎಸ್, ದರ್ಶನ್ ಮಲ್ನಾಡ್ ಉಪಸ್ಥಿತರಿದ್ದರು







