
ಸಕಲೇಶಪುರ : ಒಂದು ಉತ್ತಮ ಸೌಲಭ್ಯದ ಆಂಬುಲೆನ್ಸ್ ವ್ಯವಸ್ಥೆ ಈ ಹಳ್ಳಿಗಾಡಿನ ಪ್ರದೇಶಕ್ಕೆ ಅತಿ ಮುಖ್ಯವಾಗಿದೆ ತೆಂಕಲಗೂಡು ಬೃಹನ್ ಮಠ ಶ್ರೀ. ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು.”ಚೆನ್ನ ಮಲ್ಲಿಕಾರ್ಜುನ ಸ್ವಾಮಿಗಳು ಈ ಭಾಗದ ಜನರು ಅತ್ಯಂತ ಉತ್ತಮ ಆರೋಗ್ಯವಂತರಾಗಿರುವ ಕನಸನ್ನು ಇಟ್ಟುಕೊಂಡಿದ್ದರು ಅವರನ್ನು ಕಳೆದುಕೊಂಡಿದ್ದು ಕೂಡ ಅನಾರೋಗ್ಯದ ಸಮಸ್ಯೆಯಿಂದ ಈ ಭಾಗದಲ್ಲಿ ಒಂದು ಸುಸಜ್ಜಿತವಾದ ಆಂಬುಲೆನ್ಸ್ ವ್ಯವಸ್ಥೆ ಇದ್ದಿದ್ದರೆ ಪೂಜ್ಯರನ್ನು ನಾವು ಉಳಿಸಿಕೊಳ್ಳಬಹುದಿತ್ತು.
ಒಂದು ಉತ್ತಮ ಸೌಲಭ್ಯದ ಆಂಬುಲೆನ್ಸ್ ವ್ಯವಸ್ಥೆ ಈ ಹಳ್ಳಿಗಾಡಿನ ಪ್ರದೇಶಕ್ಕೆ ಅತಿ ಮುಖ್ಯವಾಗಿದೆ.
“ತೆಂಕಲಗೂಡು ಬೃಹನ್ ಮಠ ಶ್ರೀ. ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ತೆಂಕಲಗೂಡು ಬೃಹನ್ಮ ಠದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಶ್ರೀಗಳು “ಜೀವಿಗಳಿಗೆ ಪ್ರಥಮವಾದ ವೈದ್ಯ ಎಂದರೆ ಅದು ಪ್ರಕೃತಿ. ಅದನ್ನು ನಾವು ಉತ್ತಮ ರೀತಿಯಲ್ಲಿ ಪ್ರೀತಿಯಿಂದ ಬಳಸಿಕೊಳ್ಳಬೇಕು.
ನಾವು ಮೂರು ಜನರಲ್ಲಿ ಸುಳ್ಳನ್ನು ಹೇಳಬಾರದು ವೈದ್ಯರು,ಪೊಲೀಸ್ ಹಾಗೂ ವಕೀಲರು ಇದರಿಂದ ನಮಗೆ ನಾವೇ ತೊಂದರೆಯನ್ನು ಮಾಡಿಕೊಳ್ಳುತ್ತೇವೆ. ಅದೇ ರೀತಿ ನಾವು ವೈದ್ಯರ ಹತ್ತಿರ ಸುಳ್ಳನ್ನು ಹೇಳುವುದರಿಂದ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ.
ಈ ಭಾಗದ ಜನರು ವೈದ್ಯಕೀಯ ಸೌಲಭ್ಯವನ್ನು ಉಪಯೋಗಿಸಿಕೊಂಡು ಉತ್ತಮ ಆರೋಗ್ಯವಂತರಾಗಲಿ ಎಂಬ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ. ಎಂದು ಹೇಳಿದರು.
ನಂತರ ಮಾತನಾಡಿದ ಕಲ್ಲುಮಠ ಕೊಡಲಿಪೇಟೆಯ ಮ. ನಿ. ಪ್ರ. ಮಹಾಂತ ಸ್ವಾಮಿ ” ಪ್ರಸ್ತುತ ಪರಿಸ್ಥಿತಿಯಲ್ಲಿ ದೇಹದ ಆರೋಗ್ಯವನ್ನು ಹಾಗೂ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವಂತದ್ದು ಅದಕ್ಕೆ ಧರ್ಮದ ಲೇಖನವನ್ನು ಹಚ್ಚುವಂಥದ್ದು ಅತಿ ಮುಖ್ಯವಾದದ್ದು.ದೇಹದ ಆರೋಗ್ಯವನ್ನು ನಾವು ಚೆನ್ನಾಗಿ ಇಟ್ಟುಕೊಳ್ಳುವುದರಿಂದ ನಾವು ಕೆಲಸ ಮಾಡಲು ಪೂರಕವಾಗುತ್ತದೆ.
ಸಮಾಜದಲ್ಲಿ ಎಲ್ಲದರ ಮಧ್ಯದಲ್ಲಿ ನಾವು ನೆಮ್ಮದಿಯಾಗಿ ಬದುಕಬೇಕಾದರೆ ನಾವು ಆಂತರಿಕವಾಗಿ ಆರೋಗ್ಯವನ್ನು ಯಾವಾಗಲೂ ಕೂಡ ಕಾಪಾಡಿಕೊಂಡಿರಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಹೆಚ್ಚಾಗಿ ಬಹಿರಂಗ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಬಹಿರಂಗವಾಗಿ ಅಲಂಕಾರಗಳನ್ನು ಮಾಡಿಕೊಳ್ಳುತ್ತೇವೆ ಬಹಿರಂಗ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಳ್ಳುತ್ತೇವೆ. ಊರಿನಲ್ಲಿರುವ ದೇವಸ್ಥಾನವನ್ನು ದೊಡ್ಡ ದೊಡ್ಡದಾಗಿ ಕಟ್ಟುತ್ತೇವೆ. ಆದರೆ ಅಂತರಂಗದ ಬೆಳಕನ್ನು ನೆಮ್ಮದಿಯಾಗಿ ಇಡಲು ಮನುಷ್ಯ ಅಂತರಂಗದಲ್ಲಿ ನೆಮ್ಮದಿಯನ್ನು ಕಾಣಲು ಬಹಿರಂಗಾದ ಎಲ್ಲಾ ಅಲಂಕಾರಗಳು ಶೂನ್ಯ.” ಎಂದರು
ಯಸಳೂರು ವೀರಶೈವ ಸಮಾಜದ ಅಧ್ಯಕ್ಷರಾದ ಬಿ.ಎಂ ಶಿವರಾಜ್ :- ” ಈ ಮಠದ ಸನ್ನಿಧಿಯಲ್ಲಿ ಈ ತರದ ಆರೋಗ್ಯ ಸಂಬಂಧಿಸಿದ ತಪಾಸಣೆ ನಡೆಯುತ್ತಿರುವುದು ಖುಷಿಯ ವಿಚಾರ. ಇಂತಹ ಆರೋಗ್ಯ ಶಿಬಿರಗಳು ಪ್ರತಿ ವರ್ಷವೂ ನಡೆಯುವಂತಾಗಲಿ. “ಎಂದು ಹೇಳಿದರು
ಶಾಸಕರಾದ ಸಿಮೆಂಟ್ ಮಂಜು ಅವರು ತಮ್ಮ ರಕ್ತದ ಒತ್ತಡ ಹಾಗೂ ಮಧುಮೇಹವನ್ನು ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಚಿತ ತಪಾಸಣೆ ಶಿಬಿರಕ್ಕೆ ಮೈಸೂರಿನ ಅಪೊಲೊ, ಬಿ.ಜಿ.ಎಸ್, ಎಸ್.ಎಸ್.ಎಂ. ಆಸ್ಪತ್ರೆ, ಹಾಸನ ಹಾಗೂ ಸ್ಪರ್ಶ ಆಸ್ಪತ್ರೆಯಿಂದ ನುರಿತ ವೈದ್ಯರ ತಂಡ ಬಂದಿದ್ದು,ಮೈಸೂರಿನ ಅಪೊಲೊ ಮತ್ತು ಬಿ.ಜಿ.ಎಸ್. ಆಸ್ಪತ್ರೆಯ ವತಿಯಿಂದ ಈಕೋ ಮತ್ತು ಇಸಿಜಿ ಹಾಗೂ ಎಸ್.ಎಸ್.ಎಂ. ಹಾಗೂ ಸ್ಪರ್ಶ ಆಸ್ಪತ್ರೆಗಳ ವೈದ್ಯರ ತಂಡದಿಂದ ನರರೋಗ ,ಪ್ಲಾಸ್ಟಿಕ್ ಸರ್ಜರಿ ,ಮೂಳೆ ,ಕಿವಿ, ಗಂಟಲು ಮತ್ತು ಮೂಗು , ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು,ಚರ್ಮರೋಗ, ರತಿರೋಗ ಮತ್ತು ಕುಷ್ಠರೋಗ ,ನರರೋಗ ಸಂಬಂಧಪಟ್ಟ ರೋಗಗಳಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆಯನ್ನು ಸಾವಿರಾರು ಭಕ್ತಾದಿಗಳು ಹಾಗೂ ಗ್ರಾಮಸ್ಥರು ಇದರ ಉಪಯೋಗವನ್ನು ಪಡೆದುಕೊಂಡರು.










