
ಬೇಲೂರು : ತಾಲೂಕಿನಲ್ಲಿ ಯಗಚಿ ಜಲಾಶಯವಿದ್ದರೂ ಸಹ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಪರಿಸ್ಥಿತಿ ಇಲಿಯ ಗ್ರಾಮಸ್ಥರು ಪಟ್ಟಣಕ್ಕೆ ಸಮೀಪ ಹೊಂದಿಕೊಂಡಂತಿರುವ ಬಂಟೆನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಯಪುರ ಗ್ರಾಮದಲ್ಲಿ ಕಳೆದ ೧೫ ದಿನಗಳಿಂದ ಕುಡಿಯಲು ಗ್ರಾಮಸ್ಥರಿಗೆ ಹಾಗೂ ಜಾನುವಾರುಗಳಿಗೆ ನೀರು ಇಲ್ಲದೆ ಪರದಾಡುವಂತ ಸ್ಥಿತಿ ಎದುರಾಗಿದೆ.
ಎರಡು ದಿನಕ್ಕೊಮ್ಮೆ ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜಾಗುತ್ತಿದ್ದು ಇದರಿಂದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದರು. ಸಂಬಂಧಪಟ್ಟ ಇಲಾಖೆ ಮುಂಬಾಗದಲ್ಲಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆಈ ಗ್ರಾಮದಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು ಕುಡಿಯುವ ನೀರಿಗೆ ದಿನನಿತ್ಯ ಆಹಾಕಾರಪಡುವಂತಾಗಿದೆ.
ಇರುವಂತಹ ಒಂದು ಬೋರ್ ವೆಲ್ ಈಗಾಗಲೇ ಸಂಪೂರ್ಣ ನೀರು ಬತ್ತಿಹೋಗಿದ್ದು ಇದರಿಂದ ಗ್ರಾಮಕ್ಕೆ ತುಂಬಾ ತೊಂದರೆಯಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಸ್ಥರಾದ ರವಿಕುಮಾರ್ ನಮ್ಮ ರಾಯಪುರ ಹಾಗೂ ಕೊಪ್ಪಲು ಸೇರಿದಂತೆ ಸುಮಾರು ೧೫೦ ಕ್ಕೂ ಹೆಚ್ಷು ಕುಟುಂಬಗಳು ವಾಸವಾಗಿದ್ದಾರೆ.ಆದರೆ ನಮ್ಮ ಗ್ರಾಮಕ್ಕೆ ಒಂದೇ ಒಂದು ಕೊಳವೆ ಬಾವಿ ಇದ್ದು ಅದು ಕೂಡ ಬತ್ತಿಹೋಗಿದ್ದು ಹಾಗೂ ಗ್ರಾಮಸ್ಥರ ಮನವಿ ಮೇರೆಗೆ ಶಾಸಕರು ಸಹ ಇಲ್ಲಿ ನೀರಿನ ಟ್ಯಾಂಕರ್ ಒದಗಿಸಿದ್ದಾರೆ.ಆದರೆ ಇಲ್ಲಿಯ ಗ್ರಾಪಂ ಅಧ್ಯಕ್ಷರಾಗಿರುವರು ಹಾಗೂ ಜನಪ್ರತಿನಿಧಿಗಳು ನೀರಿನ ಸಮಸ್ಯೆ ಬಗೆಹರಿಸುತ್ತಿಲ್ಲ ಇನ್ನೆರಡು ದಿನಗಳಲ್ಲಿ ನೀರಿನ್ನು ಸಮರ್ಪಕವಾಗಿ ಒದಗಿಸದಿದ್ದರೆ ಗ್ರಾಮಸ್ಥರೆಲ್ಲಾ ಸೇರಿ ಗ್ರಾಪಂ ಮುಂಭಾಗ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಅಲ್ಲದೆ ನಮ್ಮ ಗ್ರಾಮದ ಸಮೀಪದಲ್ಲಿ ಜಲಾಶಯ ಇದ್ದರೂ ಸಹ ನಮಗೆ ಸರಿಯಾದ ನೀರಿನ ಸೌಕರ್ಯ ಇಲ್ಲ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಇದ್ದರು ಕೇವಲ ಅರ್ಧ ಗಂಟೆ ಮಾತ್ರ ನೀರನ್ನು ಬಿಡುತ್ತಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು
ಈ ಬಗ್ಗೆ ಮಾತನಾಡಿದ ಶಾಸಕ ಸುರೇಶ್ ನನ್ನ ತಾಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಬೇಕೆಂದು ತಹಸೀಲ್ದಾರ್ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ನೀಡಿದ್ದೇನೆ.ಈಗಾಗಲೇ ನಾವು ಕುಡಿಯವ ನೀರಿಗೆ ತೊಂದರೆಯಾಗದಂತೆ ಸಹಾಯವಾಣಿ ತೆರದಿದ್ದು ಆದರೆ ಚುನಾವಣಾ ಆಯೋಗದಿಂದ ನಮಗೆ ನೋಟಿಸ್ ನೀಡಿದ್ದು ನನಗೆ ಸಾರ್ವಜನಿಕರ ಹಿತದೃಷ್ಟಿ ಮುಖ್ಯ ಅವರ ಕಷ್ಟಗಳಿಗೆ ಸ್ಪಂದಿಸುವಂತೆ ಸೂಚಿಸಿದ್ದೇನೆ ಎಂದರು.
ಕೂಡಲೆ ಅಧಿಕಾರಿಗಳಿಗೆ ತಾಕಿತು ಮಾಡುವ ಮೂಲಕ ಯಾವುದೇ ಕಾರಣಕ್ಕೂ ನೀರಿನ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸುತ್ತೇನೆ ಎಂದು ತಿಳಿಸಿರುತ್ತಾರೆ.

