
ಕಳೆದ ಎಂಪಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಕೇಸು ಹಾಕಿದ್ದ ಎ. ಮಂಜು ಈಗ ದೋಸ್ತಿ ದೋಸ್ತಿ
ಹಾಸನ: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಡು ವಿರೋಧಿಗಳಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಮಾಜಿ ಸಚಿವ ಎ. ಮಂಜು ಅವರು ಈಗ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ಮೂವರು ಒಟ್ಟಿಗೆ ಬಂದು ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.
ಹಿಂದಿನ ಎಂಪಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸಿ ಬಂದ ನಂತರ ಮಾಜಿ ಸಚಿವ ಎ. ಮಂಜು ಅವರು ಅವರ ನಾಮ ಪತ್ರದ ವೇಳೆ ಸರಿಯಾದ ದಾಖಲೆ ನೀಡಿರುವುದಿಲ್ಲ ಎಂದು ತಗಾದೆ ತೆಗೆದಿದ್ದರು.
ಇನ್ನು ಸಂಸದರಾದ ಮೇಲೂ ಕೂಡ ಅವರು ಸ್ಥಾನಕ್ಕೆ ಅನರ್ಹರು ಎಂದು ನ್ಯಾಯಾಲಯದಲ್ಲಿ ದೂರು ದಾಖಲಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಇವರ ಜೊತೆ ಜಿ. ದೇವರಾಜೇಗೌಡ ಕೂಡಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಉನ್ನತ ಮಟ್ಟದ ಕೋರ್ಟ್ ಮೆಟ್ಟಿಲು ಏರಿದ್ದರು.
ಇಷ್ಟೆಲ್ಲಾ ರಂಪ ಆದರೂ ಕೂಡ ರಾಜಕೀಯದಲ್ಲಿ ಯಾರು ಶತ್ರುಗಳಲ್ಲ. ಮಿತ್ರರು ಅಲ್ಲ ಎನ್ನುವಂತೆ ವಿಧಾನಸಭೆ ಚುನಾವಣೆಯಲ್ಲಿ ಎ. ಮಂಜು ಜೆಡಿಎಸ್ ಅಭ್ಯರ್ಥಿಯಾಗಿ ನಿಂತು ಗೆಲುವು ಪಡೆದಿದ್ದರು.
ಈಗ ಇದೆ ಲೋಕಾಸಭೆ ಚುನಾವಣೆಯಲ್ಲಿ ವಿರೋಧಿ ಆಗಿದ್ದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಜೊತೆ ನಿಂತು ನಾಮಪತ್ರ ಸಲ್ಲಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ನಾನಾ ಮಾತುಗಳನ್ನು ಆಡಿಕೊಳ್ಳುವಾಗೆ ಕಂಡು ಬಂದಿದೆ.
