ಸಕಲೇಶಪುರ : ಹಿಂದೂ ಮುಖಂಡ ರಘು ಸಕಲೇಶಪುರ ಮನೆಗೆ ಜೆಡಿಎಸ್ ಮುಖಂಡರ ಜೊತೆ ಬಂದ ಪ್ರಜ್ವಲ್ ರೇವಣ್ಣ ಏನ್.ಡಿ.ಎ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಪ್ರಜ್ವಲ್ ರೇವಣ್ಣ ಅವರು ಹಾಸನದಲ್ಲಿ ತಮ್ಮ ಶುಭ ಮೂಹರ್ತ ಅನ್ವಯ ನಾಮಪತ್ರ ಸಲ್ಲಿಸಿ ಸಕಲೇಶಪುರದಲ್ಲಿ ಬಿಜೆಪಿ – ಹಿಂದೂ ಮುಖಂಡರು, ವಿವಿಧ ಸಂಘಟನೆ ಮುಖಂಡರ ಮನೆಗೆ ಭೇಟಿ ಮಾಡಿ ಮಹತ್ವದ ವಿಷಯ ಚರ್ಚಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ವಿರುದ್ಧ ತಂತ್ರಗಾರಿಕೆ ನಡೆಸಿ ಶಾಸಕ ಸಿಮೆಂಟ್ ಮಂಜು ಗೆಲುವಿಗೆ ಅದ್ಭುತ ಪೂರ್ವ ಶ್ರಮಿಸಿದ ಕೀರ್ತಿ ನಿಮ್ಮದಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೇಗೆ ಪ್ರತಿ ಮತದಾರರನ್ನು ತಲುಪಬೇಕು ಎಂದು ಚರ್ಚಿಸಿದಾಗ ಹಿಂದೂ ಮುಖಂಡ ರಘು ಅವರು ಸಂಘಟನೆ ಹಿರಿಯರು ಹಾಗೂ ಶಾಸಕ ಸಿಮೆಂಟ್ ಮಂಜು ಜೊತೆ ಚರ್ಚಿಸಿ ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ.

ಸಂಘಟನೆ ಕಾರ್ಯಕರ್ತರು ಪ್ರತಿ ಚುನಾವಣೆಯಲ್ಲಿ ತರ್ಡ್ ಪಾರ್ಟಿ ಕ್ಯಾಂಪೈನ್ ನಲ್ಲಿ ಮತದಾನ ಕಡ್ಡಾಯ ಹಾಗೂ ದೇಶದ ಪರವಾಗಿ ಇರುವ ಮತ್ತು ದೇಶದ ಭದ್ರತೆಗೆ ಬದ್ಧವಾಗಿರುವ ವ್ಯಕ್ತಿಗೆ ಮತದಾನ ಮಾಡಬೇಕು. ದೇಶ ವಿಶ್ವ ಗುರು ಮಾಡುವ ಸಂಕಲ್ಪ ಮಾಡಿರುವ ಪಕ್ಷ ಹಾಗೂ 500 ವರ್ಷದ ಸುದೀರ್ಘ ಸಂಘರ್ಷದ ರಾಮಮಂದಿರ ನಿರ್ಮಾಣ ಮಾಡಿದ ಪಕ್ಷಕ್ಕೆ ನಾವು ಬೆಂಬಲ ಸೂಚಿಸಬೇಕು ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಅವರಿಗೆ ಹೆಚ್ಚು ಬಲ ಕೊಡುವ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ಏನ್.ಡಿ.ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಅತಿ ಹೆಚ್ಚು ಮತದ ಅಂತರದಲ್ಲಿ ಗೆಲ್ಲಿಸಬೇಕು ಎಂದು ಹೇಳುತ್ತಾ ಏನ್.ಡಿ.ಎ ಸಮೂಹ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಆವಾಗ ಮಾತ್ರ ನರೇಂದ್ರ ಮೋದಿಯವರಿಗೆ ಮಹತ್ತರವಾದ ನಿರ್ಧಾರ ತೆಗೆದುಕೊಳ್ಳಲು ಶಕ್ತಿ ಬರಲಿದೆ ಎಂದರು.

ಈ ಸಂಧರ್ಭದಲ್ಲಿ ಸಮಾಜ ಸೇವಕರು ಡಾಕ್ಟರ್ ರತ್ನಾಕರ್, ಕೌಶಿಕ್, ಪ್ರದೀಪ್, ಶೇಖರ್, ವೀಜಿತ್, ಶ್ರೀಜಿತ್, ದೀಪು, ಪ್ರತಾಪ್, ಸಂತೋಷ್, ದುಷ್ಯಂತ್, ಧರ್ಮೇಶ್, ಆಟೋ ಹರೀಶ್, ಸಚಿನ್ ಬಾಲೆಹಳ್ಳ, ರವಿ ಹೆಬ್ಬಸಾಲೆ, ವೀಜಿತ್. ಶ್ರೀಜಿತ್, ಸಚಿನ್ ಕ್ಯಾಮನಹಳ್ಳಿ, ಶಿವು ಜಿಪ್ಪಿ ಸೇರಿದಂತೆ ಜೆಡಿಎಸ್ ಮುಖಂಡರಾದ ಸುಪ್ರದೀಪ್ ಯಜಮಾನ್, ಸಚಿನ್ ಪ್ರಸಾದ್, ಭಾಸ್ಕರ್, ಬೆಕ್ಕನಹಳ್ಳಿ ನಾಗರಾಜ್, ಪ್ರಜ್ವಲ್, ಹೆತ್ತೂರು ವಿಜಯ್ ಕುಮಾರ್, ಒಕ್ಕಲಿಗ ಸಂಘದ ಸದಸ್ಯರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *