ಬೇಲೂರು : ಚೆಸ್ಕಾಂ ಇಲಾಖೆಯ ನಿರ್ಲಕ್ಷದಿಂದ ಕಳ್ಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳು ಕತ್ತಲೆಯ ಗೂಡಾಗಿವೆ ಅಲ್ಲದೆ ಕುಡಿಯುವ ನೀರಿಗೆ ಅಭಾವವಾಗಿದೆ ಎಂದು ಕಳ್ಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಹಕೀಮ್ ಕಿಡಿಕಾರಿದರು.

ಬೇಲೂರು ಪಟ್ಟಣದ ಚೆಸ್ಕಾಂ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಕಳೆದ ಒಂದು ತಿಂಗಳಿಂದ ಕಳ್ಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಅಭಾವದಿಂದ ಗ್ರಾಮಗಳು ಕತ್ತಲೆಯ ಗೂಡಾಗಿವೆ

ಕಾರಣ ವಿದ್ಯುತ್ ಪರಿವರ್ತಕ ಹಾಳಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಚಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಗಮನ ಸೆಳೆದು ದೂರು ನೀಡಿದರು ವಿದ್ಯುತ್ ಪರಿವರ್ತಕ ಟಿ ಸಿ ಅಳವಡಿಸದೆ ಇಲ್ಲ ಸಲ್ಲದ ಸಬೂಬು ಹೇಳುತ್ತಾರೆ

ವಿದ್ಯುತ್ ಅಭಾವದಿಂದ ಕಳೆದ ಎಂಟು ದಿನಗಳಿಂದ ಬಳಗುಪ್ಪೆ, ಗೋರಿ ಮಠ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದ್ದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಇಲಾಖೆಯ ವಿರುದ್ಧ ಇಡೀ ಶಾಪ ಹಾಕುತ್ತಿದ್ದಾರೆ

ಇಲಾಖೆ ಅಧಿಕಾರಿಗಳಿಗೆ ಎಷ್ಟೇ ವಿವರಿಸಿ ಹೇಳಿದರು ಬರೀ ಉಡಾಫೆ ಉತ್ತರ ನೀಡುತ್ತಾರೆ ಜನಪ್ರತಿನಿಧಿಗಳಾದ ನಾವು ಅಧಿಕಾರಿಗಳ ಬಳಿ ಸಮಸ್ಯೆ ಹೊತ್ತು ಹೋದರೆ ಹಣದ ಬೇಡಿಕೆ ಇಡುತ್ತಾರೆ ನಾವು ಗ್ರಾಮಸ್ಥರಿಂದ ಹಣ ವಸೂಲಿ ಮಾಡಿ ತಂದು ಕೊಡಲು ಸಾಧ್ಯವೇ ಎಂದ ಅವರು ಈ ಭಾಗದಲ್ಲಿ ಆನೆಗಳು ಹೆಚ್ಚಾಗಿದ್ದು ಕತ್ತಲೆ ವೇಳೆ ಗ್ರಾಮಸ್ಥರು ತಿರುಗಾಡಲು ಭಯಭೀತರಾಗಿದ್ದಾರೆ ಆದ್ದರಿಂದ ಇಂತ ಭ್ರಷ್ಟ ಅಧಿಕಾರಿಗಳನ್ನು ಇಲಾಖೆಯ ಮೇಲಾಧಿಕಾರಿಗಳು ಕೂಡಲೇ ವರ್ಗಾವಣೆ ಮಾಡಿ ಇನ್ನ 2 ದಿನದಲ್ಲಿ ಹಾಳಾಗಿರುವ ವಿದ್ಯುತ್ ಪರಿವರ್ತಕ ಟಿಸಿ ಯನ್ನು ಬದಲಾವಣೆ ಮಾಡಿ ಸಮರ್ಪಕ ವಿದ್ಯುತ್ ನೀಡಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕಳ್ಳೇರಿ ಗ್ರಾಮ ಪಂಚಾಯಿತಿಯ ಸುತ್ತಮುತ್ತಲ ಗ್ರಾಮಸ್ಥರು ಕಾಲಿಕೂಡ ತಂದು ಚೆಸ್ಕಾಂ ಕಚೇರಿ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಳಿಕ ಕಳ್ಳೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರೇಮ್ ಕುಮಾರ್ ಮಾತನಾಡಿ ಕೆಲವು ದಿನಗಳಿಂದ ವಿದ್ಯುತ್ ಸಮಸ್ಯೆಯಿಂದ ಇಲ್ಲಿನ ಓವರ್ ಟ್ಯಾಂಕಿಗೆ ನೀರು ಶೇಖರಣೆ ಮಾಡಲು ಸಾಧ್ಯವಿಲ್ಲ ಇದರಿಂದ ಬೆಳಗುಪ್ಪೆ, ಆಡುವಳ್ಳಿ, ಸಂತೆ ಬೀದಿ, ಕಳ್ಳೇರಿ ಗ್ರಾಮಸ್ಥರಿಗೆ ಕುಡಿಯಲು, ಕೈ ತೊಳೆಯಲು , ಸ್ನಾನ ಮಾಡಲು ನೀರು ಇಲ್ಲದೆ ಪರಿಸ್ಥಿತಿ ಕ್ಷೀಣಿಸಿ ಹೋಗಿದೆ ಹಾಗಾಗಿ ನಾನೇ ಖುದ್ದಾಗಿ ಕಳೆದ ಎರಡು ದಿನದ ಹಿಂದೆ ಚೆಸ್ಕಾಂ ಇಲಾಖೆಯ ಮೇಲಧಿಕಾರಿ ಜೈ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇನೆ ಆದರೂ ಇತ್ತ ಗಮನ ಹರಿಸಿಲ್ಲ

ಇನ್ನ ಈ ಭಾಗದ ಲೈನ್ ಮ್ಯಾನ್ ಕುಮಾರ ಎಂಬ ವ್ಯಕ್ತಿಯನ್ನು ವಿಚಾರಿಸಿದರೆ ನಾನು ರಜೆಯಲ್ಲಿ ಇದ್ದೇನೆ ಎಂದು ಸಬೂಬು ಹೇಳುತ್ತಾನೆ ಅಲ್ಲದೆ ಗೆಂಡೆಯಲ್ಲಿ ಭಾಗಕ್ಕೆ ಮೂರು ಜನ ಲೈನ್ ಮ್ಯಾನ್ ಬೇಕಿದ್ದರೂ ಬರಿ ಒಬ್ಬನನ್ನು ನೇಮಿಸಿದ್ದಾರೆ ಈ ಭಾಗದಲ್ಲಿ ಮರ ಬಿದ್ದು ತಂತಿಕಟ್ಟಾದರೆ ಮುಂದೆ ಆಗುವ ಅನಾಹುತಕ್ಕೆ ಯಾರು ಹೊಣೆ ನಾವು ಯಾರ ಬಳಿ ನಮ್ಮ ಕಷ್ಟವನ್ನು ಹೇಳಿಕೊಳ್ಳಬೇಕು ಎಂದ ಅವರು ಕೂಡಲೇ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಅಜ್ಗರ್ ಅಲಿ. ಕೇಶವಮೂರ್ತಿ ನಿತಿನ್ ಕುಮಾರ್. ನಿಜಾಮುದ್ದೀನ್. ಮಂಜುನಾಥ್. ಗೌಸ್. ರಜಾಕ್. ಬಸಿರ್. ರಾಮೇಗೌಡ ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *