ಸಕಲೇಶಪುರ : ತಾಲ್ಲೂಕಿನ ಬಾಗೆ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಸನದಿಂದ ಸಕಲೇಶಪುರ ಮಾರ್ಗವಾಗಿ ಪ್ರಯಾಣನಿಸುತ್ತಿದ್ದ ಆಲ್ಟೊ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ತೋಟದ ಕಂದಕಕ್ಕೆ ಬಿದ್ದಿದ್ದೆ.

ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗೊಂಡ ಪರಿಣಾಮ ಗಾಯಳುಗಳಿಗೆ ಸಕಲೇಶಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ನಗರ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ತನಿಖೆ ಮುಂದುವರೆಸಿದ್ದಾರೆ

ಈ ಘಟನಾ ಸಂಧರ್ಭದಲ್ಲಿ ಇದ್ದ ಸ್ಥಳೀಯ ಸಾರ್ವಜನಿಕರು ನೋಡಿದಂತೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯ ತಡೆ ಗೋಡೆ ಇಲ್ಲದ ಪರಿಣಾಮ 10 ರಿಂದ 12 ಅಡಿ ಎತ್ತರ ಇರುವ ರಸ್ತೆಯ ಎಡಬದಿಗೆ ರಾಷ್ಟ್ರೀಯ ಹೆದ್ದಾರಿ ತಿರುವು ಬೋರ್ಡ್ ಸಮೇತ ಆಲ್ಟೊ ಕಾರು ತೋಟದ ಒಳಗೆ ಕಂದಕಕ್ಕೆ ಹಾರಿರುವುದಾಗಿ ತಿಳಿಸಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *